AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಂಚನೆಗೊಳಗಾದ ವ್ಯಕ್ತಿ ದುಡ್ಡು ವಾಪಸ್ಸು ಕೇಳಿದಾಗ ಅತ್ಯಾಚಾರದ ದೂರು ಸಲ್ಲಿಸುತ್ತೇನೆ ಅಂದಿದ್ದಳಂತೆ ಚೈತ್ರಾ ಕುಂದಾಪುರ!

ವಂಚನೆಗೊಳಗಾದ ವ್ಯಕ್ತಿ ದುಡ್ಡು ವಾಪಸ್ಸು ಕೇಳಿದಾಗ ಅತ್ಯಾಚಾರದ ದೂರು ಸಲ್ಲಿಸುತ್ತೇನೆ ಅಂದಿದ್ದಳಂತೆ ಚೈತ್ರಾ ಕುಂದಾಪುರ!

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 19, 2023 | 1:28 PM

Share

ಆಕೆ ವಂಚಕಿ ಅಂತ ತನಗೆ ಗೊತ್ತಿರಲಿಲ್ಲ ಎಂದು ಹೇಳುವ ಸುದೀನ್ ಅದರ ಸುಳಿವು ಸಿಕ್ಕಮೇಲೆ ದುಡ್ಡು ವಾಪಸ್ಸು ಕೇಳಿದಾಗ ಮೊದಮೊದಲು ಕೊಡುವುದಾಗಿ ಹೇಳಿ ನಂತರ ಬೆದರಿಸಲಾರಂಭಿಸಿದಳಂತೆ. ಅತ್ಯಾಚಾರಕ್ಕೆ ಪ್ರಯತ್ನಿಸಿದ ಅಂತ ದೂರು ಸಲ್ಲಿಸುತ್ತೇನೆ ಅಂತ ಅವಳು ಹೆದರಿಸಿದ್ದಾಳೆಂದರೆ ಅವಳೆಂಥ ಕ್ರಿಮಿನಲ್ ಬುದ್ಧಿಯವಳು ಅನ್ನೋದನ್ನು ಅರ್ಥಮಾಡಿಕೊಳ್ಳಬಹುದು.

ಉಡುಪಿ: ಚೈತ್ರಾ ಕುಂದಾಪುರ (Chaitra Kundapura) ಸಾಮಾನ್ಯದವಳೇನೂ ಅಲ್ಲ ಮಾರಾಯ್ರೇ. ಅವಳಿಂದ ವಂಚನೆಗೊಳಗಾದವರ ಲಿಸ್ಟ್ ದೊಡ್ಡದಿರುವಂತಿದೆ. ಟಿವಿ9 ಕನ್ನಡ ವಾಹಿನಿಯ ಉಡುಪಿ ವರದಿಗಾರನೊಂದಿಗೆ ಮಾತಾಡುತ್ತಿರುವ ಇವರ ಹೆಸರು ಸುದೀನ್ (Sudeen). ತನಗೆ ಚೈತ್ರಾ 5 ಲಕ್ಷ ರೂ. ಪಂಗನಾಮ ಹಾಕಿದ್ದಾಳೆಂದು ಸುದೀನ್ ಅರೋಪಿಸುತ್ತಿದ್ದಾರೆ. ಚೈತ್ರ ಇವರಿಗೆ ಪರಿಚಯವಾಗಿದ್ದು 2015ರಲ್ಲಿ. ಮೀನು ಹಾಗೂ ಸೀಗಡಿ ವ್ಯಾಪಾರ ಮಾಡಿಕೊಂಡಿರುವ ತನಗೆ ಬಟ್ಟೆ ಅಂಗಡಿ (cloth store) ಹಾಕಿಸಿಕೊಡುವುದಾಗಿ ಹೇಳಿ 2018 ರಿಂದ 2023ವರೆಗೆ ಒಟ್ಟು 5 ಲಕ್ಷ ರೂ. ಪೀಕಿದ್ದಾಳೆ ಎಂದು ಸುದೀನ್ ಹೇಳುತ್ತಾರೆ. ತನ್ನ ಪ್ರಭಾವ ಎಷ್ಟಿದೆ ಅಂತ ತೋರಿಸಲು ಚೈತ್ರಾ, ಸಚಿವ ಹಾಗೂ ಶಾಸಕರನ್ನು ಭೇಟಿಮಾಡುವಾಗ ತನ್ನೊಂದಿಗೆ ಸುದೀನ್ ರನ್ನು ಕರೆದೊಯ್ಯುತ್ತಿದ್ದಳಂತೆ. ರಾಜಕಾರಣಿಗಳ ಹೆಸರು ಹೇಳುವುದನ್ನು ಸುದೀನ್ ಇಷ್ಟಪಡಲಿಲ್ಲ. ಆಕೆ ವಂಚಕಿ ಅಂತ ತನಗೆ ಗೊತ್ತಿರಲಿಲ್ಲ ಎಂದು ಹೇಳುವ ಸುದೀನ್ ಅದರ ಸುಳಿವು ಸಿಕ್ಕಮೇಲೆ ದುಡ್ಡು ವಾಪಸ್ಸು ಕೇಳಿದಾಗ ಮೊದಮೊದಲು ಕೊಡುವುದಾಗಿ ಹೇಳಿ ನಂತರ ಬೆದರಿಸಲಾರಂಭಿಸಿದಳಂತೆ. ಅತ್ಯಾಚಾರಕ್ಕೆ ಪ್ರಯತ್ನಿಸಿದ ಅಂತ ದೂರು ಸಲ್ಲಿಸುತ್ತೇನೆ ಅಂತ ಅವಳು ಹೆದರಿಸಿದ್ದಾಳೆಂದರೆ ಅವಳೆಂಥ ಕ್ರಿಮಿನಲ್ ಬುದ್ಧಿಯವಳು ಅನ್ನೋದನ್ನು ಅರ್ಥಮಾಡಿಕೊಳ್ಳಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ