ಚೈತ್ರಾ ಕುಂದಾಪುರ ವಂಚನೆ ಪ್ರಕರಣದ ಮೂವರು ಆರೋಪಿಗಳನ್ನು ಮೆಡಿಕಲ್ ಚೆಕಪ್ ಗೆ ಕರೆದೊಯ್ದ ಸಿಸಿಬಿ ಅಧಿಕಾರಿಗಳು
ಲಭ್ಯವಿರುವ ಮಾಹಿತಿ ಪ್ರಕಾರ ಚೈತ್ರಾ ಚೆನ್ನ ನಾಯ್ಕ್ ನನ್ನು ಮಾರುವೇಷ ಹಾಕಿಸಿ ತಮ್ಮ ಮಿಕಗಳಿಗೆ ಬಿಜೆಪಿ ರಾಷ್ಟ್ರೀಯ ಚುನಾವಣಾ ಸಮಿತಿ ಸದಸ್ಯರು ಅಂಥ ಪರಿಚಯಿಸಿ ಇಂಪ್ರೆಶನ್ ಜತಾಯಿಸುತ್ತಿದ್ದಳು. ಈ ಕೆಲಸದಲ್ಲಿ ಅವಳಿಗೆ ಧನರಾಜ್ ಎನ್ನುವವ ನೆರವಾಗುತ್ತಿದ್ದ. ಚೆನ್ನ ನಾಯ್ಕ್ ನಿಗೆ ಕಡೂರಿನ ಸಲೂನ್ ಒಂದರಲ್ಲಿ ಅವನ ಗೆಟಪ್ ಬದಲಾಯಿಸಲಾಗಿತ್ತು
ಬೆಂಗಳೂರು: ಚೈತ್ರಾ ಕುಂದಾಪುರ ಪ್ರಕರಣದಲ್ಲಿ (Chaitra Kundanpura ticket fraud case) ಭಾಗಿಯಾದ ಆರೋಪದಲ್ಲಿ ಸಿಸಿಬಿ ಬೆಂಗಳೂರು ಪೊಲೀಸರಿಂದ ಬಂಧನಕ್ಕೊಳಗಾಗಿರುವ ಧನರಾಜ್ (Dhanaraj), ಪ್ರಜ್ವಲ್ ಹಾಗೂ ಚೆನ್ನನಾಯ್ಕ್ (Chenna Naik)-ಈ ಮೂವರನ್ನು ಸಿಸಿಬಿ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳಿಂದ ಪ್ರಾಥಮಿಕ ವಿಚಾರಣೆ ನಡೆದ ನಂತರ ವೈದ್ಯಕೀಯ ತಪಾಸಣೆಗಾಗಿ (medical checkup) ವಿಕ್ಟೋರಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಧನರಾಜ್ ಮತ್ತು ಚೆನ್ನ ನಾಯ್ಕ್ ಚಿಕ್ಕಮಗಳೂರಿನ ಕಡೂರಿನವರು. ಲಭ್ಯವಿರುವ ಮಾಹಿತಿ ಪ್ರಕಾರ ಚೈತ್ರಾ ಚೆನ್ನ ನಾಯ್ಕ್ ನನ್ನು ಮಾರುವೇಷ ಹಾಕಿಸಿ ತಮ್ಮ ಮಿಕಗಳಿಗೆ ಬಿಜೆಪಿ ರಾಷ್ಟ್ರೀಯ ಚುನಾವಣಾ ಸಮಿತಿ ಸದಸ್ಯರು ಅಂಥ ಪರಿಚಯಿಸಿ ಇಂಪ್ರೆಶನ್ ಜತಾಯಿಸುತ್ತಿದ್ದಳು. ಈ ಕೆಲಸದಲ್ಲಿ ಅವಳಿಗೆ ಧನರಾಜ್ ಎನ್ನುವವ ನೆರವಾಗುತ್ತಿದ್ದ. ಚೆನ್ನ ನಾಯ್ಕ್ ನಿಗೆ ಕಡೂರಿನ ಸಲೂನ್ ಒಂದರಲ್ಲಿ ಅವನ ಗೆಟಪ್ ಬದಲಾಯಿಸಲಾಗಿತ್ತು. ಆದನ್ನು ಮಾಡಿದ ಕ್ಷೌರಿಕ ರಾಮು ವಿಷಯವನ್ನು ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಕ್ಕೆ ಧನರಾಜ್ ನ ಮತ್ತೊಬ್ಬ ಸ್ನೇಹಿತ ನೂತನ್ ಫೋನ್ ಮಾಡಿ ಧಮ್ಕಿ ಹಾಕಿದ್ದ. ಅವರ ನಡುವೆ ನಡೆದ ಸಂಭಾಷಣೆಯ ವಿಡಿಯೋ ವೈರಲ್ ಆಗಿತ್ತು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ