Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೈತ್ರಾ ಕುಂದಾಪುರ ವಂಚನೆ ಪ್ರಕರಣದಲ್ಲಿ ತಪ್ಪಿತಸ್ಥರು ಯಾರೇ ಅಗಿದ್ದರೂ ಸತ್ಯ ಹೊರಬರಬೇಕು: ಚಕ್ರವರ್ತಿ ಸೂಲಿಬೆಲೆ, ಚಿಂತಕ

ಚೈತ್ರಾ ಕುಂದಾಪುರ ವಂಚನೆ ಪ್ರಕರಣದಲ್ಲಿ ತಪ್ಪಿತಸ್ಥರು ಯಾರೇ ಅಗಿದ್ದರೂ ಸತ್ಯ ಹೊರಬರಬೇಕು: ಚಕ್ರವರ್ತಿ ಸೂಲಿಬೆಲೆ, ಚಿಂತಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 18, 2023 | 7:36 PM

ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಕರೆದರೆ ಹಾಜರಾಗುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಅವರು, ತಾನೊಬ್ಬ ಕಾನೂನನ್ನು ಗೌರವಿಸುವ ವ್ಯಕ್ತಿಯಾಗಿದ್ದು, ಸಿಸಿಬಿ ಅಧಿಕಾರಿಗಳು ಕರೆದರೆ ಖಂಡಿತವಾಗಿಯೂ ಅವರ ಮುಂದೆ ಹಾಜರಾಗಿ ಪ್ರಕರಣದ ಬಗ್ಗೆ ಗೊತ್ತಿರುವುದನ್ನೆಲ್ಲ ತಿಳಿಸುವುದಾಗಿ ಹೇಳಿದರು.

ಬೆಂಗಳೂರು: ಚೈತ್ರಾ ಕುಂದಾಪುರ ವಂಚನ ಪ್ರಕರಣದಲ್ಲಿ (Chaitra Kundapura fraud case) ತಮ್ಮ ಹೆಸರು ಸಹ ತೇಲಿ ಬರುತ್ತಿರುವುದಕ್ಕೆ ಚಿಂತಕ ಮತ್ತು ಯುವ ಬ್ರಿಗೇಡ್ (Yuva Brigade) ಅಧ್ಯಕ್ಷ ಚಕ್ರವರ್ತಿ ಸೂಲಿಬೆಲೆ (Chakravarti Sulibele) ಪ್ರತಿಕ್ರಿಯೆ ನೀಡಿದ್ದಾರೆ. ಇಂದು ನಗರದಲ್ಲಿ ಟಿವಿ9 ಕನ್ನಡ ವಾಹಿನಿಯ ಬೆಂಗಳೂರು ವರದಿಗಾರನೊಂದಿಗೆ ಮಾತಾಡಿದ ಸೂಲಿಬೆಲೆ, ತಮ್ಮ ಬಗ್ಗೆ ಮಾತಾಡಿಕೊಳ್ಳುತ್ತಿರುವವರು ಏನಾದರೂ ಮಾತಾಡಿಕೊಳ್ಳಲಿ, ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಪೋಸ್ಟ್ ಮಾಡಲಿ, ಅದಕ್ಕಾಗಿ ತಲೆ ಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ, ಅಂಥದ್ದನ್ನೆಲ್ಲ ಸಾಕಷ್ಟು ನೋಡಿರುವುದಾಗಿ ಹೇಳಿ, ಚೈತ್ರಾ ಕುಂದಾಪುರ ಪ್ರಕರಣದಲ್ಲಿ ಸೂಕ್ತವಾದ ತನಿಖೆಯಾಗಲೇಬೇಕು ಮತ್ತು ಸತ್ಯ ಹೊರಬರಬೇಕು ಅಂತ ಹೇಳಿದರು. ಚೈತ್ರಾ ಕುಂದಾಪುರ ಅಥವಾ ಗೋವಿಂದ ಬಾಬು ಪೂಜರಿ; ತಪ್ಪಿತಸ್ಥರು ಯಾರೇ ಆಗಿರಲಿ, ಶಿಕ್ಷೆಯಾಗಲೇಬೇಕು ಎಂದು ಸೂಲಿಬೆಲೆ ಹೇಳಿದರು. ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಕರೆದರೆ ಹಾಜರಾಗುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಅವರು, ತಾನೊಬ್ಬ ಕಾನೂನನ್ನು ಗೌರವಿಸುವ ವ್ಯಕ್ತಿಯಾಗಿದ್ದು, ಸಿಸಿಬಿ ಅಧಿಕಾರಿಗಳು ಕರೆದರೆ ಖಂಡಿತವಾಗಿಯೂ ಅವರ ಮುಂದೆ ಹಾಜರಾಗಿ ಪ್ರಕರಣದ ಬಗ್ಗೆ ಗೊತ್ತಿರುವುದನ್ನೆಲ್ಲ ತಿಳಿಸುವುದಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ