Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳಾಗದ ಕಾರಣಕ್ಕೆ ಅತ್ತೆ ಮತ್ತು ಗಂಡ ಮನೆಯಿಂದ ಹೊರಗಟ್ಟಿದ್ದಾರೆ ಅಂತ ದೂರುತ್ತಿರುವ ಚಿಕ್ಕಬಳ್ಳಾಪುರದ ಮಹಿಳೆ

ಮಕ್ಕಳಾಗದ ಕಾರಣಕ್ಕೆ ಅತ್ತೆ ಮತ್ತು ಗಂಡ ಮನೆಯಿಂದ ಹೊರಗಟ್ಟಿದ್ದಾರೆ ಅಂತ ದೂರುತ್ತಿರುವ ಚಿಕ್ಕಬಳ್ಳಾಪುರದ ಮಹಿಳೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 18, 2023 | 6:11 PM

ವಿದ್ಯಾವಂತೆಯಾಗಿರುವ ಜಬೀನ್, ಗಂಡ ಮತ್ತು ಹೆಂಡತಿಯ ನಡವೆ ದೈಹಿಕ ಸಂಪರ್ಕವೇ ನಡೆಯದಿದ್ದರೆ ಹೇಗೆ ಮಕ್ಕಳಾಗುತ್ತವೆ ಅಂತ ಕೇಳುತ್ತಾರೆ. ಕಳೆದ 8 ತಿಂಗಳಿಂದ ಮುಖ್ತಾರ್ ಅಹ್ಮದ್ ತನ್ನಿಂದ ದೂರವಿದ್ದಾರೆ ಎಂದು ಹೇಳುವ ಅವರು ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದು ಊಟಕ್ಕೆ ತೊಂದರೆಯಾಗುತ್ತಿದೆಯಂತೆ.

ಚಿಕ್ಕಬಳ್ಳಾಪುರ: ಈ ಮಹಿಳೆಯ ಹೆಸರು ಜಬೀನ್ ತಾಜ್ (Jabeen Taj) ಮತ್ತು ಚಿಕ್ಕಬಳ್ಳಾಪುರದ ನಿವಾಸಿ. ವಿವಾಹಿತೆಯಾಹಿರುವ ಜಬೀನ್ ತನ್ನ ಅತ್ತೆಯ ಮನೆ ಮುಂದೆ ಧರಣಿಗೆ ಕೂತಿದ್ದಾರೆ. ಜಬೀನ್ ಹೇಳುವ ಪ್ರಕಾರ ಗಂಡ ಮುಖ್ತಾರ್ ಅಹ್ಮದ್ (Mukhtar Ahmed) ಮತ್ತು ಅತ್ತೆ ಲಿಯಾಖತ್ ಬೇಗಂ (Liyaquat Begum) ಆಕೆಯನ್ನು ಮನೆಯಿಂದ ಹೊರಹಾಕಿದ್ದಾರೆ. ಮಕ್ಕಳಾಗಿಲ್ಲ ಎನ್ನುವ ಕಾರಣಕ್ಕೆ ಮನೆಯಿಂದ ಹೊರತಳ್ಳಿದ್ದಾರೆ ಅಂತ ಅವರು ಹೇಳುತ್ತಾರೆ. ವಿದ್ಯಾವಂತೆಯಾಗಿರುವ ಜಬೀನ್, ಗಂಡ ಮತ್ತು ಹೆಂಡತಿಯ ನಡವೆ ದೈಹಿಕ ಸಂಪರ್ಕವೇ ನಡೆಯದಿದ್ದರೆ ಹೇಗೆ ಮಕ್ಕಳಾಗುತ್ತವೆ ಅಂತ ಕೇಳುತ್ತಾರೆ. ಕಳೆದ 8 ತಿಂಗಳಿಂದ ಮುಖ್ತಾರ್ ಅಹ್ಮದ್ ತನ್ನಿಂದ ದೂರವಿದ್ದಾರೆ ಎಂದು ಹೇಳುವ ಅವರು ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದು ಊಟಕ್ಕೆ ತೊಂದರೆಯಾಗುತ್ತಿದೆಯಂತೆ. ಕೇವಲ ತನ್ನಣ್ಣ ಹಾಗ ಅಮ್ಮನ ಮಾತು ಕೇಳುವ ಮುಖ್ತಾರ್ ಡಿವೋರ್ಸ್ ನೋಟೀಸ್ ಸಹ ಕಳುಹಿಸಿದ್ದು ಜಬೀನ್ ಅದನ್ನು ಸ್ವೀಕರಿಸಿಲ್ಲ. ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ