ಚಿಕ್ಕಬಳ್ಳಾಪುರದಲ್ಲಿ ಲೇಡಿ ಡಾನ್! ಸರ್ಕಾರಿ ರಸ್ತೆಯಲ್ಲಿ ವಾಹನಗಳನ್ನು ಅಡ್ಡಗಡ್ಡಿ ಹಣ ವಸೂಲಿ
ಅದು ಹೇಳಿ ಕೇಳಿ ರಾಜ್ಯದ ಪ್ರಸಿದ್ದ ಅರಣ್ಯ ಪ್ರವಾಸೋಧ್ಯಮದ ತಾಣ. ಪ್ರತಿದಿನ ಅಲ್ಲಿಗೆ ಸಾವಿರಾರು ಜನ ಪ್ರವಾಸಗಿರು ಬರ್ತಾರೆ, ಇದನ್ನೆ ಬಂಡವಾಳ ಮಾಡಿಕೊಂಡ ಸ್ಥಳೀಯ ಮಹಿಳೆಯೊರ್ವಳು. ಸಂಬಂಧವಿಲ್ಲದಿದ್ರೂ, ಗ್ರಾಮದ ನಡುರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ಪಾರ್ಕಿಂಗ್ ನೆಪದಲ್ಲಿ ಹಣ ವಸೂಲಿ ಮಾಡ್ತಿದ್ದಾಳೆ. ಪ್ರಶ್ನಿಸಿದ್ರೆ ಕಾರು ಬೈಕ್ಗಳಿಗೆ ಅಡ್ಡ ಕುಳಿತು ಅವಾಜ್ ಹಾಕುತ್ತಿದ್ದಾರೆ. ಅಷ್ಟಕ್ಕೂ ಆ ಲೇಡಿ ಡಾನ್ ಯಾರು? ಆಕೆಯ ಬಂಡವಾಳ ಏನು ಅಂತೀರಾ: ಇಲ್ಲಿದೆ ನೋಡಿ.
ಚಿಕ್ಕಬಳ್ಳಾಪುರ, ಸೆ.17: ಕೇಳಿದಷ್ಟು ಹಣ ಕೊಡಲಿಲ್ಲ ಎಂದು ಕಾರು ಬೈಕ್ಗಳಿಗೆ ಅಡ್ಡ ಕುಳಿತು ಚಾರಣಿಗರಿಗೆ ಅವಾಜ್ ಹಾಕುತ್ತಿರುವುದು ಚಿಕ್ಕಬಳ್ಳಾಫುರ (Chikkaballapura) ತಾಲೂಕಿನ ಕಳವಾರ ಗ್ರಾಮದಲ್ಲಿ. ಹೌದು, ಈ ಗ್ರಾಮದ ಬಳಿ ಇರುವ ಸ್ಕಂದಗಿರಿ ಅರಣ್ಯ ಪ್ರವಾಸೋಧ್ಯಮ ಸ್ಥಳಕ್ಕೆ ಟ್ರಕ್ಕಿಂಗ್ ಹೊಗಲು ಪ್ರತಿದಿನ ಸಾವಿರಾರು ಜನ ಪ್ರವಾಸಿಗರು(Tourists) ಬರುತ್ತಾರೆ. ಹೀಗೆ ಬರುವ ಪ್ರವಾಸಿಗರ ವಾಹನಗಳನ್ನು ಅಡ್ಡಗಟ್ಟಿ ಸ್ಥಳೀಯ ಕಲಾವತಿ ಎನ್ನುವ ಮಹಿಳೆ, ಪಾರ್ಕಿಂಗ್ ನೆಪದಲ್ಲಿ ಗ್ರಾಮದಲ್ಲಿ ನಡು ರಸ್ತೆಯಲ್ಲಿ ಹಣ ವಸೂಲಿ ಮಾಡುತ್ತಿದ್ದಾಳೆ. ಪ್ರಶ್ನಿಸಿದ ಪ್ರವಾಸಿಗರ ಮೇಲೆ ಅವಾಜ್ ಹಾಕುತ್ತಿದ್ದಾಳೆ.
ಇನ್ನು ಸ್ಕಂದಗಿರಿಗೆ ಹೋಗುವ ಮಾರ್ಗದಲ್ಲಿ ಪಾಪಾಗ್ನಿ ಮಠವಿದೆ. ಮಠದ ಆವರಣದಲ್ಲಿ ಸ್ವಲ್ಪ ಪಾರ್ಕಿಂಗ್ ಸ್ಥಳವಿದೆ. ಅಲ್ಲಿಯ ಕೆಲವರು ಕಲಾವತಿಯನ್ನು ಮೊದಲು ಪಾರ್ಕಿಂಗ್ ಶುಲ್ಕ ವಸೂಲಿ ಮಾಡಲು ಸೂಚಿಸಿದ್ದರಂತೆ. ಆದ್ರೆ, ಈಗ ಕಲಾವತಿಗೂ, ಪಾಪಾಗ್ನಿ ಮಠಕ್ಕೆ ಸಂಬಂಧವಿಲ್ಲ. ಆದರೂ ಅನಧಿಕೃತವಾಗಿ ಗ್ರಾಮದಲ್ಲಿ ಬರುವ ವಾಹನಗಳನ್ನು ಅಡ್ಡಗಟ್ಟಿ ವಸೂಲಿ ಮಾಡುತ್ತಿದ್ದಾಳೆ. ಇದರಿಂದ ಪಾಪಾಗ್ನಿ ಮಠಕ್ಕೆ ಕೆಟ್ಟ ಹೆಸರು ಬರುತ್ತಿದ್ದು, ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ವತಃ ಪಾಪಾಗ್ನಿ ಮಠ ಸಮಿತಿ ಒತ್ತಾಯ ಮಾಡಿದೆ.
ಸುಂದರವಾದ ಪ್ರಕೃತಿ ತಾಣದಲ್ಲಿ ಕೆಲವೊತ್ತು ವಿಹರಿಸಿ ಮನಸ್ಸಿಗೆ ನೆಮ್ಮದಿ ಕಂಡುಕೊಳ್ಳೋಣ ಎಂದು ರಾಜಧಾನಿ ಬೆಂಗಳೂರಿನ ಜನ, ಬೆಳ್ಳಂ ಬೆಳಿಗ್ಗೆ ಸ್ಕಂದಗಿರಿಯತ್ತ ಮುಖ ಮಾಡಿದ್ರೆ, ದಾರಿ ಮದ್ಯೆ ಕಲಾವತಿ ಎನ್ನುವ ಮಹಿಳೆ ಕೊಡಬಾರದ ಕಾಟ ಕೊಟ್ಟು, ಪ್ರವಾಸಿಗರ ನೆಮ್ಮದಿಯನ್ನು ಹಾಳು ಮಾಡುತ್ತಿದ್ದಾಳೆ. ಇದನ್ನರಿತ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು, ಇದೀಗ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:57 pm, Sun, 17 September 23