ಕಾವೇರಿ ವಿವಾದದ ಬಗ್ಗೆ ‘ಸುಪ್ರೀಂಕೋರ್ಟ್ ತೀರ್ಪು ಅತ್ಯಂತ ದುರದೃಷ್ಟಕರ’ -ಸಚಿವ ಎಂ.ಬಿ ಪಾಟೀಲ್
ಸುಪ್ರೀಂಕೋರ್ಟ್ ತೀರ್ಪು ಅತ್ಯಂತ ದುರದೃಷ್ಟಕರ. ನಮ್ಮಲ್ಲೇ ಕುಡಿಯಲು ನೀರಿಲ್ಲ. ಕೆಲ ತಿಂಗಳಲ್ಲೇ ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಬಿಕ್ಕಟ್ಟು ಎದುರಾಗಲಿದೆ. ಪ್ರಾಧಿಕಾರವಾಗಲಿ, ಸುಪ್ರೀಂ ಕೋರ್ಟ್ ಆಗಲಿ ಇಲ್ಲಿರುವ ವಾಸ್ತವ ಸ್ಥಿತಿ ತಿಳಿಸಬೇಕಿದೆ. ಈಗಲೂ ತಡವಾಗಿಲ್ಲ. ಕೇಂದ್ರ ಸರ್ಕಾರ ತಜ್ಞರ ತಂಡವನ್ನ ಕಳುಹಿಸಿ ಎಲ್ಲಾ ಸ್ಥಿತಿಗತಿಗಳನ್ನ ಅರಿಯಬೇಕು ಎಂದು ಕಾವೇರಿ ವಿವಾದದ ಬಗ್ಗೆ ಸಚಿವ ಎಂಬಿ ಪಾಟೀಲ್ ಪ್ರತಿಕ್ರಿಯೆ ನೀಡಿದರು.
ಬೆಂಗಳೂರು, ಸೆ.21: ಪ್ರತಿ ದಿನ 5 ಸಾವಿರ ಕ್ಯೂಸೆಸ್ ರೀತಿ 15 ದಿನಗಳ ಕಾಲ ತಮಿಳುನಾಡಿಗೆ ಕಾವೇರಿ ನೀರು ಬಿಡಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಈ ವಿಚಾರ ಸಂಬಂಧ ಬೆಂಗಳೂರಿನಲ್ಲಿ ಸಚಿವ ಎಂ.ಬಿ ಪಾಟೀಲ್ ಪ್ರತಿಕ್ರಿಯೆ ನೀಡಿದರು. ಇದು ಅತ್ಯಂತ ದುರದೃಷ್ಟಕರ. ನಮ್ಮಲ್ಲೇ ಕುಡಿಯಲು ನೀರಿಲ್ಲ. ಕೆಲ ತಿಂಗಳಲ್ಲೇ ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಬಿಕ್ಕಟ್ಟು ಎದುರಾಗಲಿದೆ. ಪ್ರಾಧಿಕಾರವಾಗಲಿ, ಸುಪ್ರೀಂ ಕೋರ್ಟ್ ಆಗಲಿ ಇಲ್ಲಿರುವ ವಾಸ್ತವ ಸ್ಥಿತಿ ತಿಳಿಸಬೇಕಿದೆ. ಈಗಲೂ ತಡವಾಗಿಲ್ಲ. ಕೇಂದ್ರ ಸರ್ಕಾರ ತಜ್ಞರ ತಂಡವನ್ನ ಕಳುಹಿಸಿ ಎಲ್ಲಾ ಸ್ಥಿತಿಗತಿಗಳನ್ನ ಅರಿಯಬೇಕು. ನೀರು ಬಿಡುವಂತಹ ಆದೇಶವನ್ನ ಮರುಪರಿಶೀಲಿಸಬೇಕು. ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿಕೊಂಡು ತಜ್ಞರ ತಂಡವನ್ನ ಕಳುಹಿಸಿ ಪರಿಶೀಲಿಸಬೇಕು. ಪರಿಶೀಲನೆಯಾಗುವವರೆಗೂ ನೀರನ್ನ ತಡೆ ಹಿಡಿಯಬೇಕು ಎಂದರು.
ಇದು ನಮಗೆ ಸಂಕಷ್ಟ ವರ್ಷ. ನೀರು ಇದ್ದರೆ ಹರಿಬಿಡುತ್ತಿದ್ದೆವು. ಆದರೆ, ಈಗ ಅಂತಹ ಪರಿಸ್ಥಿತಿ ಇಲ್ಲ. ಅತ್ಯಂತ ಗಂಭೀರ ಪರಿಸ್ಥಿತಿ ಇದೆ. ರಾಜ್ಯದ ಕೇಂದ್ರ ಸಚಿವರು, ಸಂಸದರು, ಮಾಜಿ ಮುಖ್ಯಮಂತ್ರಿಗಳು ಇವರೆಲ್ಲರೂ ಕೂಡಿ ಪ್ರಧಾನಿಗೆ ಮನವರಿಕೆ ಮಾಡಿಕೊಡಬೇಕು. ಈ ಮೂಲಕ ರಾಜ್ಯದ ಹಿತಾಸಕ್ತಿಯನ್ನ ಕಾಪಾಡಬೇಕು. ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ನಮಗೆ ಗೌರವ ಇದೆ. ಕೇಂದ್ರ ಜಲಶಕ್ತಿ ಬಿಕ್ಕಟ್ಟಿಗೆ ಪರಿಹಾರ ಕಂಡುಹಿಡಿಯಬೇಕು ಎಂದರು.
ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ