ಕೆಂಪುಕೋಟೆ ಮೇಲೆ ತಿರಂಗ ಹಾರಿಸಿದ ಪ್ರಥಮ ಕನ್ನಡಿಗ ದೇವೇಗೌಡರನ್ನು  ಆಹ್ವಾನಿಸದೆ ಬಿಜೆಪಿ ನಾಡಿಗೆ ಅವಮಾನ ಮಾಡಿದೆ: ಸಿ ಎಮ್ ಇಬ್ರಾಹಿಂ

Edited By:

Updated on: Nov 12, 2022 | 12:46 PM

ಕೇವಲ ದೇವೇಗೌಡರು ಮಾತ್ರವಲ್ಲ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನೂ ಕರೆಯಬೇಕಿತ್ತು ಎಂದು ಕಲಬುರಗಿಯಲ್ಲಿ ಹೇಳಿದ ಇಬ್ರಾಹಿಂ ಇದು ಶಾಸಕಾಂಗದ ಶಿಷ್ಟಾಚಾರ ಎಂದರು.

ಕಲಬುರಗಿ: ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜ (National Flag) ಹಾರಿಸಿದ ಪ್ರಥಮ ಕನ್ನಡಿಗ ಮತ್ತು ಮಣ್ಣಿನ ಮಗ ಎಚ್ ಡಿ ದೇವೇಗೌಡ (HD Devegowda) ಅವರನ್ನು ಶುಕ್ರವಾರದಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಾಡಪ್ರಭು ಕೆಂಪೇಗೌಡರ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಆಹ್ವಾನಿಸದೆ ಬಿಜೆಪಿ, ಕೇವಲ ಮಾಜಿ ಪ್ರಧಾನಿಗಳಷ್ಟೇ ಅಲ್ಲ ಇಡೀ ಕನ್ನಡ ನಾಡಿಗೆ ಅವಮಾನ ಮಾಡಿದೆ ಎಂದು ಜೆಡಿ(ಎಸ್) ಪಕ್ಷದ ರಾಜ್ಯಾಧ್ಯಕ್ಷ ಸಿ ಎಮ್ ಇಬ್ರಾಹಿಂ (CM Ibrahim) ಹೇಳಿದರು. ಕೇವಲ ದೇವೇಗೌಡರು ಮಾತ್ರವಲ್ಲ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನೂ (Siddaramaiah) ಕರೆಯಬೇಕಿತ್ತು ಎಂದು ಕಲಬುರಗಿಯಲ್ಲಿ ನಡೆದ ಪತ್ರಿಕಾ ಗೋಷ್ಟಿಯೊಂದರಲ್ಲಿ ಹೇಳಿದ ಇಬ್ರಾಹಿಂ ಇದು ಶಾಸಕಾಂಗದ ಶಿಷ್ಟಾಚಾರ ಎಂದರು.