KS EShwarappa on results; ರಾಜ್ಯದಲ್ಲಿ ಬಿಜೆಪಿ ಸೋತರೂ ಕಳೆದ ಬಾರಿಗಿಂತ ಹೆಚ್ಚು ಮತ ಗಳಿಸಿದೆ: ಕೆ ಎಸ್ ಈಶ್ವರಪ್ಪ

|

Updated on: May 15, 2023 | 1:31 PM

ನಾಯಕತ್ವ, ಸಂಘಟನೆ ಮತ್ತು ಅಭಿವೃದ್ಧಿ ಕಾರ್ಯಗಳಿಂದಾಗಿ ಚನ್ನಬಸಪ್ಪ ಗೆದ್ದರು ಎಂದು ಈಶ್ವರಪ್ಪ ಹೇಳುತ್ತಾರೆ.

ಶಿವಮೊಗ್ಗ: ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಅನ್ನುವ ಹಾಗಿದೆ ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ (KS Eshwarappa) ಆಡುವ ಮಾತು. ಶಿವಮೊಗ್ಗದಲ್ಲಿ (Shivamogga) ಇಂದು ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದ ಅವರು ಬಿಜೆಪಿ ಸೋಲಿಗೆ ಕಾರಣಗಳೇನು ಅಂತ ಕೇಳಿದ ಪ್ರಶ್ನೆಗೆ ಉತ್ತರ ಕೊಡುವ ಬದಲು, ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ (Channabasappa) ಗೆದ್ದ ಸಂಗತಿಯನ್ನು ಸವಿಸ್ತಾರವಾಗಿ ಹೇಳುತ್ತಾರೆ. ಅವರ ಗೆಲುವಿಗೆ ರಾಷ್ಟ್ರ ಮತ್ತು ರಾಜ್ಯ ನಾಯಕರು ಪ್ರಚಾರ ಹೇಗೆ ನೆರವಾಯಿತು ಅಂತ ಈಶ್ವರಪ್ಪ ಹೇಳುತ್ತಾರೆ. ನಾಯಕತ್ವ, ಸಂಘಟನೆ ಮತ್ತು ಅಭಿವೃದ್ಧಿ ಕಾರ್ಯಗಳಿಂದಾಗಿ ಚನ್ನಬಸಪ್ಪ ಗೆದ್ದರು ಎಂದು ಹೇಳುವ ಅವರು ಕೊನೆಯಲ್ಲಿ ಕರ್ನಾಟಕದ ಒಟ್ಟಾರೆ ಫಲಿತಾಂಶದ ಬಗ್ಗೆ ಮಾತಾಡುತ್ತಾರೆ. ಅವರ ಲಾಜಿಕ್ ಕೇಳಿಸಿಕೊಳ್ಳಿ, ಬಿಜೆಪಿ ಸೋತರೂ 2018 ರ ಚುನಾವಣೆಗಿಂತ ಶೇಕಡ 0.4 ರಷ್ಟು ಹೆಚ್ಚು ವೋಟು ಗಿಟ್ಟಿಸಿದೆ ಅಂತ ಹೇಳಿ ಸಮಾಧಾನಪಟ್ಟುಕೊಳ್ಳುತ್ತಾರೆ.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್  ಮಾಡಿ