DK Shivakumar’s 63rd birthday: ನಿನ್ನೆ ರಾತ್ರಿ ಹೋಟೆಲ್ನಲ್ಲಿ ಬರ್ತ್ಡೇ ಕೇಕ್ ಕಟ್ ಮಾಡಿದ ಶಿವಕುಮಾರ್ ಮೊದಲು ತಿನ್ನಿಸಿದ್ದು ಯಾರಿಗೆ ಗೊತ್ತಾ?
ಬಹಳ ಜನರ ನಿರೀಕ್ಷೆಯಂತೆ ಕೆಪಿಸಿಸಿ ಅಧ್ಯಕ್ಷ ಮೊದಲು ಸಿದ್ದರಾಮಯ್ಯನವರಿಗೆ ಕೇಕ್ ತಿನ್ನಿಸಿದರು.
ಬೆಂಗಳೂರು: ನಿನ್ನೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ (CLP) ನಡೆದ ಹೋಟೆಲ್ ನಲ್ಲೇ ಡಿಕೆ ಶಿವಕುಮಾರ್ (DK Shivakumar) ತಮ್ಮ 63 ನೇ ಹುಟ್ಟುಹಬ್ಬದ ಪ್ರಯುಕ್ತ ಕೇಕ್ ಕತ್ತರಿಸಿದ (cake cutting) ವಿಡಿಯೋ ತಡವಾಗಿ ಮಾಧ್ಯಮಗಳಿಗೆ ಲಭ್ಯವಾಗಿದೆ. ಸಭೆಯಲ್ಲಿ ಪಾಲ್ಗೊಂಡ ಎಲ್ಲ ಚುನಾಯಿತ ಸದಸ್ಯರು, ಎಐಸಿಸಿ ಕಾರ್ಯದರ್ಶಿಗಳು ಮತ್ತು ದೆಹಲಿಯಿಂದ ಆಗಮಿಸಿದ್ದ ವೀಕ್ಷಕರ ಸಮ್ಮುಖದಲ್ಲಿ ಶಿವಕುಮಾರ್ ಕೇಕ್ ಕಟ್ ಮಾಡಿದರು. ಕೇಕ್ ಕತ್ತರಿಸಿದ ಬಳಿಕ ಶಿವಕುಮಾರ್ ಮೊದಲು ಯಾರಿಗೆ ತಿನ್ನಿಸುತ್ತಾರೆಂಬ ಕುತೂಹಲ ನೆರೆದವರೆಲ್ಲರಲ್ಲಿ ಇತ್ತು. ಬಹಳ ಜನರ ನಿರೀಕ್ಷೆಯಂತೆ ಕೆಪಿಸಿಸಿ ಅಧ್ಯಕ್ಷ ಮೊದಲು ಸಿದ್ದರಾಮಯ್ಯನವರಿಗೆ ಕೇಕ್ ತಿನ್ನಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




