AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಟಿ ರವಿ ಕತೆಯನ್ನು ಬಿಜೆಪಿ ನಾಯಕರು ಹೆಚ್ಚುಕಡಿಮೆ ಮುಗಿಸಿಬಿಟ್ಟಿದ್ದಾರೆ: ಎಂ ಲಕ್ಷ್ಮಣ್, ಕೆಪಿಸಿಸಿ ವಕ್ತಾರ

ಸಿಟಿ ರವಿ ಕತೆಯನ್ನು ಬಿಜೆಪಿ ನಾಯಕರು ಹೆಚ್ಚುಕಡಿಮೆ ಮುಗಿಸಿಬಿಟ್ಟಿದ್ದಾರೆ: ಎಂ ಲಕ್ಷ್ಮಣ್, ಕೆಪಿಸಿಸಿ ವಕ್ತಾರ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 28, 2023 | 4:55 PM

Share

ಬಿವೈ ವಿಜಯೇಂದ್ರರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿದಾಗ ಮುನಿಸಿಕೊಂಡ ಕೆಲ ಹಿರಿಯ ಬಿಜೆಪಿ ನಾಯಕರಲ್ಲ್ಲಿ ಸಿಟಿ ರವಿ ಸಹ ಒಬ್ಬರೆನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ನಂತರದ ಎರಡು ಮೂರು ದಿನಗಳ ಕಾಲ ಅವರು ತೀವ್ರ ಹತಾಶರಾಗಿ ಮಾತಾಡಿದ್ದೂ ಇದೆ. ಆದರೆ, ಈಗ ಅವರು ಆ ಕಹಿಯನ್ನು ಮರೆತು ಮುಂದೆ ಸಾಗಿದಂತಿದೆ.

ಮಂಗಳೂರು: ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ (M Laxman) ಇಂದು ಮಂಗಳೂರಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತಾಡುವಾಗ ಬಿಜೆಪಿ ನಾಯಕ ಸಿಟಿ ರವಿ (CT Ravi) ವಿಷಯದಲ್ಲಿ ವ್ಯಂಗ್ಯವಾಡಿದರು. ರವಿಯವರ ವಿರುದ್ಧ ಲಕ್ಷ್ಮಣ್ ಮಾಡಿದ ಆರೋಪಗಳ ಬಗ್ಗೆ ತನಿಖೆ ನಡೆಯುತ್ತಿದೆ ಮತ್ತು ಮಾಜಿ ಶಾಸಕ ಕಾಂಗ್ರೆಸ್ ವಕ್ತಾರ ವಿರುದ್ಧ ಮಾನಹಾನಿ ಪ್ರಕರಣ (defamation case) ದಾಖಲಿಸಿದ್ದಾರೆ. ಅದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತಾಡಿದ ಲಕ್ಷ್ಮಣ್, ರವಿಯವರ ಕತೆ ಬಿಜೆಪಿಯವರು ಹೆಚ್ಚು ಕಡಿಮೆ ಮುಗಿಸಿದ್ದಾರೆ. ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಬರ್ಖಾಸ್ತುಗೊಳಿಸಲಾಯಿತು, ಬಳಿಕ ತಮಿಳುನಾಡುನಲ್ಲಿ ಪಕ್ಷದ ಉಸ್ತುವಾರಿ ಸ್ಥಾನದಿಂದ ಕಿತ್ತೊಗೆಯಲಾಯಿತು, ಆಮೇಲೆ ಅವರು ಮಧ್ಯಪ್ರದೇಶದ ಅಸೆಂಬ್ಲಿ ಚುನಾವಣೆಯಲ್ಲಿ ಪ್ರಚಾರಕ್ಕೆಂದು ಹೋದವರು ಬಿವೈ ವಿಜಯೇಂದ್ರರ ಪದಗ್ರಹಣ ಸಮಾರಂಭಕ್ಕೆ ಬರಲಾಗುತ್ತಿಲ್ಲ ಅಂತ ಅಲ್ಲಿಂದಲೇ ಒಂದು ಭಾವುಕ ಮೆಸೇಜ್ ಕಳಿಸಿದ್ದರು. ಇದೆಲ್ಲವನ್ನು ನೋಡುತ್ತಿದ್ದರೆ ಬಿಜೆಪಿಯಲ್ಲಿ ಸಿಟಿ ರವಿ ಕತೆ ಮುಗಿದಿದೆ ಅಥವಾ ಮುಗಿಸಲಾಗಿದೆ ಅನ್ನೋದು ಸ್ಪಷ್ಟವಾಗುತ್ತದೆ ಎಂದು ಲಕ್ಷ್ಮಣ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ