ಇದ್ದಕ್ಕಿದ್ದಂತೆ ಬಿಜೆಪಿ ನಾಯಕರು ದೇವೇಗೌಡರನ್ನು ಭೇಟಿಯಾಗಿದ್ದೇಕೆ?; ಕಾರಣ ಇಲ್ಲಿದೆ

Updated on: Sep 06, 2025 | 9:07 PM

ಪ್ರಧಾನಿ ಮೋದಿ ನಮ್ಮ ದೇಶಕ್ಕೆ ಅತ್ಯಂತ ಎತ್ತರದ ಸ್ಥಾನವನ್ನು ಮೋದಿಯವರು ಕಲ್ಪಿಸಿಕೊಟ್ಟಿದ್ದಾರೆ. ಚೀನಾ ರಷ್ಯಾ ಭಾರತ ಮೂರೂ ದೇಶಗಳೂ ಸೇರಿ ಟ್ರಂಪ್ ಅವರ ಸುಂಕ ನೀತಿ ವಿರೋಧಿಸಿವೆ. ಟ್ರಂಪ್ ಕಠಿಣ ಸುಂಕ ಹೇರಿದ್ದಾರೆ. ವಿವೇಚನೆ ಇಲ್ಲದೇ ಅನೇಕ ದೇಶಗಳ ಮೇಲೆ ಸುಂಕ ಹಾಕಿದ್ದಾರೆ ಎಂದು ನಾನು ಹೇಳಿಕೆ ನೀಡಿದ್ದೆ. ಅದಕ್ಕೆ ಧನ್ಯವಾದ ಹೇಳಲು ರಾಜ್ಯ ಬಿಜೆಪಿ ನಾಯಕರು ನಮ್ಮ ಮನೆಗೆ ಆಗಮಿಸಿದ್ದರು ಎಂದು ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹೇಳಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್ 6: ಚೀನಾ, ರಷ್ಯಾ, ಭಾರತ ಸೇರಿ ಬಹುತೇಕ ದೇಶಗಳು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ನಿರ್ಣಯವನ್ನು ಖಂಡಿಸಿದ್ದಾರೆ. ಟ್ರಂಪ್ ಸ್ವಲ್ಪವೂ ವಿವೇಚನೆ ಬಳಸದೆ ಸುಂಕ ಹೇರಿದ್ದಾರೆ. ಭಾರತ ಸೇರಿ ಹಲವು ದೇಶಗಳ ಮೇಲೆ ಅಧಿಕ ಸುಂಕ ಹಾಕಿದ್ದಾರೆ. ವಿವೇಚನೆ ಇಲ್ಲದ ಈ ನಿರ್ಧಾರದ ಬಗ್ಗೆ ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೆ. ಪ್ರಧಾನಿ ಮೋದಿಯವರ (PM Narendra Modi) ಜಪಾನ್, ಚೀನಾ ಪ್ರವಾಸ ವೇಳೆ ಉತ್ತಮ ನಿರ್ಣಯ ತೆಗೆದುಕೊಂಡಿದ್ದರು. ಪುಟಿನ್ ಜೊತೆ ಮಾತನಾಡಿ ಉಕ್ರೇನ್ ಯುದ್ಧ ನಿಲ್ಲಿಸುವ ಬಗ್ಗೆ ನಿಲುವು ತಳೆದಿದ್ದರು. ಇದು ನಮ್ಮ ದೇಶಕ್ಕೆ ಅತ್ಯಂತ ಎತ್ತರವಾದ ಒಂದು ಸ್ಥಾನ ಕಲ್ಪಿಸಿಕೊಟ್ಟಿದೆ. ಪ್ರಧಾನಮಂತ್ರಿ ಮೋದಿ ಯ ನಡೆಯನ್ನು ಶ್ಲಾಘಿಸಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದೆ. ಅದಕ್ಕೆ ಧನ್ಯವಾದ ಹೇಳಲು ರಾಜ್ಯ ಬಿಜೆಪಿ ನಾಯಕರು ನಮ್ಮ ಮನೆಗೆ ಆಗಮಿಸಿದ್ದರು ಎಂದು ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹೇಳಿದ್ದಾರೆ. ಇಂದು ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ಶಾಸಕರಾದ ಅಶ್ವತ್ಥ್ ನಾರಾಯಣ, ಕೃಷ್ಣಪ್ಪ, ಸುರೇಶ್ ಗೌಡ ಸೇರಿದಂತೆ ಹಲವರು ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಅವರ ಮನೆಗೆ ತೆರಳಿದ್ದರು.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ