ಬೆಂಗಳೂರು: ಧಾರಾಕಾರ ಮಳೆಗೆ ಕೆರೆಯಂತಾದ ರಸ್ತೆ, ಸವಾರರು ಪರದಾಟ
ಬೆಂಗಳೂರಿನ ಹಲವೆಡೆ ಭಾರೀ ಮಳೆಯಿಂದ ಸಂಚಾರ ದಟ್ಟಣೆ ಉಂಟಾಗಿದೆ. ಮೆಜೆಸ್ಟಿಕ್, ಜಯನಗರ, ಕೋರಮಂಗಲ ಮುಂತಾದ ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತಗೊಂಡಿವೆ. ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಜನರು ಪರದಾಟ ಪಡಬೇಕಾಯಿತು. ತಗ್ಗು ಪ್ರದೇಶಗಳಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ವಿಡಿಯೋ ನೋಡಿ.
ಬೆಂಗಳೂರು, ಸೆಪ್ಟೆಂಬರ್ 06: ನಗರದ ಹಲವೆಡೆ ಧಾರಾಕಾರ ಮಳೆ (rain) ಸುರಿದಿದೆ. ಮೆಜೆಸ್ಟಿಕ್, ಸದಾಶಿವನಗರ, ವಸಂತನಗರ, ಜಯನಗರ, ಹೆಬ್ಬಾಳ, ವಿಜಯನಗರ, ಚಂದ್ರಾಲೇಔಟ್, ಕೆ.ಆರ್.ಮಾರ್ಕೆಟ್, ಬನಶಂಕರಿ, ಯಶವಂತಪುರ, ಕೋರಮಂಗಲ, ರಾಜಾಜಿನಗರ, ಶಾಂತಿನಗರ, ಜೆ.ಪಿ.ನಗರ, ಕೆಂಗೇರಿ, ಗೊರಗುಂಟೆಪಾಳ್ಯದ ಸುತ್ತಮುತ್ತ ಜೋರು ಮಳೆ ಸುರಿದಿದೆ. ಹಲವೆಡೆ ತಗ್ಗುಪ್ರದೇಶದ ರಸ್ತೆಗಳು ಜಲಾವೃತಗೊಂಡಿದ್ದು, ಟ್ರಾಫಿಕ್ ಜಾಮ್ ಕೂಡ ಉಂಟಾಗಿದೆ. ಫ್ಲೈವರ್, ಸ್ಕೈವಾಕ್ ಕೆಳಗೆ ಸವಾರರು ಆಶ್ರಯ ಪಡೆದುಕೊಂಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Sep 06, 2025 10:25 PM
Latest Videos
