ವೀಕೆಂಡ್ನಲ್ಲಿ ಗುಡುಗಿದ ವರುಣರಾಯ: ಬೆಂಗಳೂರಿನ ಹಲವೆಡೆ ಮಳೆ
Bengaluru rain: ಕೊಂಚ ಬಿಡುವು ನೀಡಿದ್ದ ಮಳೆ ಇಂದು ಮತ್ತೆ ಎಂಟ್ರಿ ಕೊಟ್ಟಿದೆ. ಸಂಜೆಯಾಗುತ್ತಿದ್ದಂತೆ ಅದರಲ್ಲೂ ವೀಕೆಂಡ್ನಲ್ಲಿ ವರುಣರಾಯ ಗುಡುಗಿದ್ದಾನೆ. ನಾಗರಬಾವಿ, ಮೈಸೂರು ರಸ್ತೆ, ಆರ್ಆರ್ ನಗರ, ಜ್ಞಾನ ಭಾರತಿ ಸುತ್ತಮುತ್ತ ಮಳೆ ಸುರಿದಿದೆ. ವಾಹನ ಸವಾರರು ಮತ್ತು ಪಾದಚಾರಿಗಳು ಪರದಾಡುವಂತಾಗಿದೆ.
ಬೆಂಗಳೂರು, ಸೆಪ್ಟೆಂಬರ್ 06: ಕೊಂಚ ಬಿಡುವು ನೀಡಿದ್ದ ಮಳೆ ಇಂದು ಮತ್ತೆ ಎಂಟ್ರಿ ಕೊಟ್ಟಿದೆ. ಸಂಜೆಯಾಗುತ್ತಿದ್ದಂತೆ ಅದರಲ್ಲೂ ವೀಕೆಂಡ್ನಲ್ಲಿ ವರುಣರಾಯ ಗುಡುಗಿದ್ದಾನೆ. ನಾಗರಬಾವಿ, ಮೈಸೂರು ರಸ್ತೆ, ಆರ್ಆರ್ ನಗರ, ಜ್ಞಾನ ಭಾರತಿ ಮತ್ತು ರಿಚ್ಮಂಡ್ ಸರ್ಕಲ್ ಸುತ್ತಮುತ್ತ ಜೋರು ಮಳೆ ಸುರಿದಿದೆ. ಮಳೆಯಿಂದಾಗಿ ವಾಹನ ಸವಾರರು ಮತ್ತು ಪಾದಚಾರಿಗಳು ಪರದಾಡುವಂತಾಗಿದೆ. ಬೆಂಗಳೂರು ಸೇರಿ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Sep 06, 2025 04:47 PM
Latest Videos

