Bengaluru: ಅಸ್ವಸ್ಥರಾಗಿದ್ದ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಆರೋಗ್ಯ ಸ್ಥಿರ, ಇಂದು ಸಾಯಂಕಾಲ ಡಿಸ್ಚಾರ್ಜ್
ಆಸ್ಪತ್ರೆಯ ವೈದ್ಯರೊಬ್ಬರು ನೀಡಿದ ಹೇಳಿಕೆಯ ಪ್ರಕಾರ ಯತ್ನಾಳ್ ಅವರ ಎಲ್ಲ ಪ್ರಮುಖ ಅಂಗಾಂಗಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿವೆ.
ಬೆಂಗಳೂರು: ಬುಧವಾರದಂದು ವಿಧಾನ ಸಭಾ ಅಧಿವೇಶನ ನಡೆಯುತ್ತಿದ್ದಾಗ ಉಂಟಾದ ಗಲಾಟೆ ಮತ್ತು ಮಾರ್ಷಲ್ ಗಳ ತಳ್ಳಾಟ ನೂಕಾಟದಲ್ಲಿ ಪ್ರಜ್ಞೆ ತಪ್ಪಿ ಕುಸಿದು ಬಿದ್ದ ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರ ಆರೋಗ್ಯ ಸ್ಥಿರವಾಗಿದೆ. ಕಳೆದ ರಾತ್ರಿ ವಿಧಾನಸಭಾ ಸ್ಪೀಕರ್ ಯುಟಿ ಖಾದರ್ (UT Khader) ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಆಸ್ಪತ್ರೆಗೆ ತೆರಳಿ ಶಾಸಕನ ಆರೋಗ್ಯ ವಿಚಾರಿಸಿದರು. ಯತ್ನಾಳ್ ಹಾಸಿಗೆಯಲ್ಲಿ ಕೂತು ಮುಖ್ಯಮಂತ್ರಿಯವರ ಜೊತೆ ಮಾತಾಡಿದರು. ನಿನ್ನೆ ಸಂಜೆ ಆಸ್ಪತ್ರೆಯ ವೈದ್ಯರೊಬ್ಬರು ನೀಡಿದ ಹೇಳಿಕೆಯ ಪ್ರಕಾರ ಯತ್ನಾಳ್ ಅವರ ಎಲ್ಲ ಪ್ರಮುಖ ಅಂಗಾಂಗಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿವೆ, ರಕ್ತದೊತ್ತಡ ಹೆಚ್ಚಾದ ಕಾರಣ ಆಸ್ಪತ್ರೆಗೆ ದಾಖಲಾದಾಗ ಬೆವರಿತ್ತಿದ್ದರು, ಗುರುವಾರ ಸಾಯಂಕಾಲ ಅವರನ್ನು ಬಿಡುಗಡೆ ಮಾಡಲಾಗುವುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ