Karnataka Assembly Polls: ಬಾಡೂಟ ಏರ್ಪಡಿಸಿದ್ದ ಕನಕಗಿರಿ ಬಿಜೆಪಿ ಶಾಸಕ ಬಸವರಾಜ ಧಡೆಸೂಗೂರು ಆಪ್ತರು ಜನ ವಿಡಿಯೋ ಮಾಡುತ್ತಿರುವುದನ್ನು ಕಂಡು ಓಟಕಿತ್ತರು!
ಕನಕಗಿರಿಯ ಬಿಜೆಪಿ ಶಾಸಕಬಸವರಾಜ ಧಡೆಸೂಗೂರು ಆಪ್ತನೊಬ್ಬ ಕ್ಷೇತ್ರದಲ್ಲಿ ಮಾಂಸಾಹಾರಿ ಔತಣವನ್ನು ಏರ್ಪಡಿಸಿದ್ದಾನೆ. ಸಾವಿರಾರು ಜನ ಬಾಡೂಟಕ್ಕೆ ಜಮಾಯಿಸಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಕೊಪ್ಪಳ: ಇಂಥ ದೃಶ್ಯಗಳು ಇನ್ನು ಮುಂದೆ ಸಾಮಾನ್ಯವೆನಿಸಲಿವೆ. ಚುನಾವಣಾ ನೀತಿ ಸಂಹಿತೆ (MCC) ಜಾರಿಯಲ್ಲಿರುವುದರಿಂದ ಅಭ್ಯರ್ಥಿಗಳು ತಮ್ಮ ಆಪ್ತರ ಮನೆಗಳಲ್ಲಿ, ಯಾವುದೋ ಕಾರ್ಯಕ್ರಮದ ನೆಪದಲ್ಲಿ ಕ್ಷೇತ್ರದ ಜನರಿಗೆ ಔತಣ ಏರ್ಪಡಿಸಿ ಅವರ ಮನವೊಲಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಕನಕಗಿರಿಯ ಬಿಜೆಪಿ ಶಾಸಕ (BJP MLA) ಬಸವರಾಜ ಧಡೆಸೂಗೂರು (Basavaraj Dhadesugur) ಮಾಡಿದ್ದು ಅದೇ. ಅವರ ಆಪ್ತನೊಬ್ಬ ಕ್ಷೇತ್ರದಲ್ಲಿ ಮಾಂಸಾಹಾರಿ ಔತಣವನ್ನು ಏರ್ಪಡಿಸಿದ್ದಾನೆ. ಸಾವಿರಾರು ಜನ ಬಾಡೂಟಕ್ಕೆ ಜಮಾಯಿಸಿರುವುದನ್ನು ನೋಡಬಹುದು. ಎಲ್ಲರಿಗೂ ಊಟದ ವ್ಯವಸ್ಥೆ ಮಾಡುತ್ತಾ ಓಡಾಡುತ್ತಿದ್ದ ಬಿಜೆಪಿ ಕಾರ್ಯಕರ್ತರು ಊಟಕ್ಕೆ ಬಂದ ಜನ ಫೋಟೋಗಳನ್ನು ತೆಗೆಯುತ್ತಾ ವಿಡಿಯೋ ಮಾಡಿಲಾರಂಭಿಸಿದಾಕ್ಷಣ ಅಲ್ಲಿಂದ ಪರಾರಿಯಾಗಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ