Karnataka Assembly Polls: ದೇವನಹಳ್ಳಿ ಕ್ಷೇತ್ರದಲ್ಲಿ ಬಂಡಾಯ ಮಣಿಸಲು ಕೆಹೆಚ್ ಮುನಿಯಪ್ಪ ಮಾಸ್ಟರ್ ಸ್ಟ್ರೋಕ್, ಸ್ಥಳೀಯ ಜೆಡಿಎಸ್ ಮುಖಂಡರ ಮನವೊಲಿಕೆ!

Karnataka Assembly Polls: ದೇವನಹಳ್ಳಿ ಕ್ಷೇತ್ರದಲ್ಲಿ ಬಂಡಾಯ ಮಣಿಸಲು ಕೆಹೆಚ್ ಮುನಿಯಪ್ಪ ಮಾಸ್ಟರ್ ಸ್ಟ್ರೋಕ್, ಸ್ಥಳೀಯ ಜೆಡಿಎಸ್ ಮುಖಂಡರ ಮನವೊಲಿಕೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 03, 2023 | 11:45 AM

ಟಿಕೆಟ್ ನೀಡಿರುವುದನ್ನು ತೀವ್ರವಾಗಿ ವಿರೋಧಿಸುತ್ತಿರುವ ಸ್ಥಳೀಯ ಕಾಂಗ್ರೆಸ್ ಮುಖಂಡರು ಅವರ ಪರ ಪ್ರಚಾರ ಮಾಡಲು ಮುಂದಾಗುತ್ತಿಲ್ಲ.

ದೇವನಹಳ್ಳಿ: ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ ಹೆಚ್ ಮುನಿಯಪ್ಪ (KH Muniyappa) ನುರಿತ ಮತ್ತು ಅಪಾರ ಅನುಭವದ ರಾಜಕಾರಣಿ. ಅವರಿಗೆ ಟಿಕೆಟ್ ನೀಡಿರುವುದನ್ನು ತೀವ್ರವಾಗಿ ವಿರೋಧಿಸುತ್ತಿರುವ ಸ್ಥಳೀಯ ಕಾಂಗ್ರೆಸ್ ಮುಖಂಡರು (Congress leaders) ಅವರ ಪರ ಪ್ರಚಾರ ಮಾಡಲು ಮುಂದಾಗುತ್ತಿಲ್ಲ. ಇದೇ ಹಿನ್ನೆಲೆಯಲ್ಲಿ ಮುನಿಯಪ್ಪ, ಅವರ ಮನೆಗಳಿಗೆ ತೆರಳಿ ಮನವೊಳಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ತಮ್ಮ ವಿರುದ್ಧ ಬಂಡಾಯ ಶಮಮಗೊಳ್ಳದ ಕಾರಣ ಅವರೊಂದು ಮಾಸ್ಟರ್ ಸ್ಟ್ರೋಕ್ ಆಡಿದ್ದಾರೆ. ಕ್ಷೇತ್ರದ ಜೆಡಿಎಸ್ ಮುಖಂಡರ ಮನೆಗಳಿಗೆ ಹೋಗಿ ತಮ್ಮ ಪರ ಪ್ರಚಾರ ಮಾಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಸ್ಥಳೀಯ ಜೆಡಿಎಸ್ ಮುಖಂಡ ಮಂಜುನಾಥ (Manjunath) ಮನೆಯಲ್ಲಿ ಮುನಿಯಪ್ಪರನ್ನು ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ