Banke Bihari: ಬೇಸಿಗೆಯ ತಾಪಮಾನ ವೃಂದಾವನದ ಶ್ರೀಕೃಷನಿಗೂ ತಡೆಯಲಾಗುತ್ತಿಲ್ಲ, 108 ದಿನಗಳ ಅವಧಿಗೆ ಫೂಲ್ ಬಂಗ್ಲಾಗೆ ಶಿಫ್ಟ್!

Banke Bihari: ಬೇಸಿಗೆಯ ತಾಪಮಾನ ವೃಂದಾವನದ ಶ್ರೀಕೃಷನಿಗೂ ತಡೆಯಲಾಗುತ್ತಿಲ್ಲ, 108 ದಿನಗಳ ಅವಧಿಗೆ ಫೂಲ್ ಬಂಗ್ಲಾಗೆ ಶಿಫ್ಟ್!

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 04, 2023 | 8:02 AM

ಆದರೆ ಲಕ್ಷಗಟ್ಟಲೆ ಭಕ್ತರ ದಂಡು ದೇವಸ್ಥಾನಗಳ ನಗರಕ್ಕೆ ಆಗಮಿಸುತ್ತಿರುವುದರಿಂದ ಜನರನ್ನು ನಿಯಂತ್ರಿಸುವುದು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವುದು ಜಿಲ್ಲಾಡಳಿತಕ್ಕೆ ದೊಡ್ಡ ಸಮಸ್ಯೆಯಾಗುತ್ತಿದೆ.

ಬೇಸಿಗೆ ತಾಪವನ್ನು ಭಗವಾನ್ ಶ್ರೀಕೃಷ್ಣನಿಂದಲೂ (Bhagwan Sri Krishna) ತಡೆದುಕೊಳ್ಳಲಾಗದು. ಹಾಗಾಗೇ, ಉತ್ತೆರ ಪ್ರದೇಶದ ವೃಂದಾವನದಲ್ಲಿರುವ ‘ಬಂಕೆ ಬಿಹಾರಿ’ (Banke Bihari) ದೇವಸ್ಥಾನವನ್ನು ಬಗೆಬಗೆಯ ಹೂಗಳಿಂದ ಅಲಂಕರಿಸಲಾಗಿದೆ. ಇಲ್ಲಿ ಬಂಕೆ ಬಿಹಾರಿ ಎಂದೇ ಕರೆಯಲ್ಪಡುವ ಶ್ರೀಕೃಷ್ಣ ಪರಮಾತ್ಮ ಬೇಸಿಗೆ ಸಮಯದಲ್ಲಿ 108 ದಿನಗಳ ಕಾಲ ‘ಫೂಲ್ ಬಂಗ್ಲಾ’ದಲ್ಲಿ (Phool Bungalow) ನಿವಾಸ ಮಾಡುತ್ತಾನೆ. ಇದೊಂದು ಉತ್ಸವವಾಗಿದ್ದು ಹಿಂದೂಗಳ ಶ್ರಾವಣ ಮಾಸದಲ್ಲಿ ಚೈತ್ರ ಶುಕ್ಲಪಕ್ಷ ಕಮದ ಏಕಾದಶಿಯಂದು ಅರಂಭಗೊಂಡು ಕೃಷ್ಣಪಕ್ಷದ ಹರಿಯಾಲಿ ಅಮವಾಸ್ಯೆವರೆಗೆ ನಡೆಯುತ್ತದೆ.

‘ಬೇಸಿಗೆ ದಿನಗಳ ತಾಮಮಾನವನ್ನು ನಾವು ಎಸಿಗಳಿಂದ ಉಪಶಮನ ಮಾಡಿಕೊಳ್ಳುವಂತೆ ದೇವರು ಹೂಗಳಿಂದ ಅಲಂಕೃತಗೊಂಡು ಪರಿಹಾರ ಪಡೆಯುತ್ತಾನೆ,’ ಎಂದು ಅರ್ಚಕ ಗಗನ್ ಗೋಸ್ವಾಮಿ ಹೇಳುತ್ತಾರೆ.
ಈ ದಿನಗಳಲ್ಲಿ ಶ್ರೀಕೃಷ್ಣನಿಗಾಗಿ ಸೃಷ್ಟಿಸಲಾಗುವ ಭವ್ಯವಾದ ಬಂಗ್ಲೆಯು ದೇಶ ಮತ್ತು ವಿದೇಶಗಳ ಹೂಗಳಿಂದ ಅಲಂಕರಿಸಲ್ಪಡುತ್ತದೆ.

ಇದನ್ನೂ ಓದಿ:  CBI’s diamond jubilee celebrations: ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವಲ್ಲಿ ಸಿಬಿಐನ ಪಾತ್ರ ದೊಡ್ಡದು: ನರೇಂದ್ರ ಮೋದಿ

‘ಪೂಲ್ ಬಂಗ್ಲಾದ ಸಿಂಗಾರಕ್ಕೆ ಬೆಂಗಳೂರು, ದೆಹಲಿ ಮತ್ತು ಕೊಲ್ಕತ್ತಾದಿಂದ ಹೂ ಬರುತ್ತವೆ. ಮುಂಬರುವ ದಿನಗಳಲ್ಲಿ ಹೂಗಳಿಂದಲೇ ಶ್ರೀಕೃಷ್ಣನಿಗೆ ಉಡುಗೆಗಳನ್ನು ತಯಾರಿಸಲಾಗುವುದು. ಪ್ರತಿದಿನ ಫೂಲ್ ಬಂಗ್ಲಾ ಹೂಗಳಿಂದ ಅಲಂಕೃತಗೊಂಡು ಕಂಗೊಳಿಸಲಿದೆ,’ ಎಂದು ಗಗನ್ ಗೋಸ್ವಾಮಿ ಹೇಳುತ್ತಾರೆ.

‘ಈ ಬಾರಿ ಕೃಷ್ಣ ಪರಮಾತ್ಮನು ಫೂಲ್ ಬಂಗ್ಲೆಯಲ್ಲಿ ಏಪ್ರಿಲ್ 1, 2023 ರಿಂದ ಜುಲೈ 17, 2023 ವರೆಗೆ ಇರಲಿದ್ದಾನೆ. ಬೇಸಿಗೆಯ ತಾಪದಿಂದ ದೇವರಿಗೆ ನಿರಾಳತೆ ಒದಗಿಸಲು ಪ್ರತಿದಿನ ಫೂಲ್ ಬಂಗ್ಲೆಯನ್ನು ಹೂಗಳಿಂದ ಅಲಂಕರಿಸಿ ವಿದ್ಯುದ್ದೀಪಗಳಿಂದ ಜಗಮಗಿಸಲಾಗುವುದು,’ ಎಂದು ಬಂಕೆ ಬಿಹಾರಿ ದೇವಸ್ಥಾನದ ಮತ್ತೊಬ್ಬ ಅರ್ಚಕ ಶುಭಮ್ ಗೋಸ್ವಾಮಿ ಹೇಳುತ್ತಾರೆ.

ಅದೇನೋ ಸರಿ, ಆದರೆ ಲಕ್ಷಗಟ್ಟಲೆ ಭಕ್ತರ ದಂಡು ದೇವಸ್ಥಾನಗಳ ನಗರಕ್ಕೆ ಆಗಮಿಸುತ್ತಿರುವುದರಿಂದ ಜನರನ್ನು ನಿಯಂತ್ರಿಸುವುದು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವುದು ಜಿಲ್ಲಾಡಳಿತಕ್ಕೆ ದೊಡ್ಡ ಸಮಸ್ಯೆಯಾಗುತ್ತಿದೆ.

‘ನಾವು ಬಿಹಾರಿ ಜೀ ಭೇಟಿಗೆ ಹೋಗುತ್ತಿದ್ದೇವೆ. ನಮ್ಮ ಕಾರು ಒಂದೂವರೆ ಗಂಟೆಯಿಂದ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಹಾಕಿಕೊಂಡಿದೆ,’ ಎಂದು ರವಿಕುಮಾರ ಹೆಸರಿನ ಪ್ರವಾಸಿ ಹೇಳುತ್ತಾರೆ.

‘ನಾವು ಮಾ ಬಿಹಾರಿ ದೇವಸ್ಥಾನಕ್ಕೆ ಹೋಗುತ್ತಿದ್ದೇವೆ. ಆದರೆ, ಜನ ಮತ್ತು ವಾಹನ ಸಂಚಾರವನ್ನು ಬಹಳ ಕೆಟ್ಟದ್ದಾಗಿ ನಿರ್ವಹಿಸಲಾಗುತ್ತಿದೆ. ಟ್ರಾಫಿಕ್ ಸಮಸ್ಯೆ ನಿಯಂತ್ರಿಸಲು ಪೊಲೀಸರೇ ಇಲ್ಲ, ನಾವು ಬಹಳ ಹೊತ್ತಿನಿಂದ ಟ್ರಾಫಿಕ್ ನಲ್ಲಿ ಸಿಕ್ಕಿಬಿದ್ದಿದ್ದೇವೆ,’ ಎಂದು ದೀಪಕ್ ಚೌಧುರಿ ಹೆಸರಿನ ಪ್ರವಾಸಿ ಹೇಳುತ್ತಾರೆ.

ಇದನ್ನೂ ಓದಿ: Giorgia Meloni: ಇಟಲಿಯಲ್ಲಿ ಇಂಗ್ಲಿಷ್, ಇತರ ವಿದೇಶಿ ಭಾಷೆಗಳಿಗೆ ಅವಕಾಶ ಇಲ್ಲ, ತಪ್ಪಿದರೆ 82 ಲಕ್ಷ ರೂ. ದಂಡ

‘ನಾವು ದೆಹಲಿಯಿಂದ ಬಂದಿದ್ದೇವೆ. ಎರಡು ಗಂಟೆಯಿಂದ ಟ್ರಾಫಿಕ್ ಜಾಮ್ ಆಗಿದೆ. ದೇವಸ್ಥಾನ ತಲುಪುವುದು ನಮಗೆ ಸಾಧ್ಯವಾಗುತ್ತಿಲ್ಲ. ದೇವಸ್ಥಾನದ ಸಂದರ್ಶನ ಸಮಯವೂ ಮುಗಿದು ಹೋಗಿರಬಹುದು. ನಾವೀಗ ಹೋದರೂ ಪ್ರಯೋಜನವಿಲ್ಲ,’ ಎಂದು ಪ್ರವಾಸಿಯಾಗಿರುವ ಪಂಡಿತ್ ನೀರಜ್ ಶರ್ಮಾ ಹೇಳುತ್ತಾರೆ.

ಬಂಕೆ ಬಿಹಾರಿ ದೇವಸ್ಥಾನದ ವಾರ್ಷಿಕ ಉತ್ಸವ ಲಕ್ಷಾಂತರ ಜನರನ್ನು ಸೆಳೆಯುತ್ತದೆ. ಇಲ್ಲಿಗೆ ಭೇಟಿ ನೀಡುವ ಜನ ಹೂಗಳಿಂದ ಅಲಂಕೃತಗೊಂಡ ದೇವಸ್ಥಾನದ ಕಂಪಿನಲ್ಲಿ ಭಾವಪರವಶರಾಗಿ ಬಿಡುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ