Giorgia Meloni: ಇಟಲಿಯಲ್ಲಿ ಇಂಗ್ಲಿಷ್, ಇತರ ವಿದೇಶಿ ಭಾಷೆಗಳಿಗೆ ಅವಕಾಶ ಇಲ್ಲ, ತಪ್ಪಿದರೆ 82 ಲಕ್ಷ ರೂ. ದಂಡ

ಇಟಲಿಯಲ್ಲಿ ಅಧಿಕೃತ ಸಂವಹನಗಳಲ್ಲಿ ಇಂಗ್ಲಿಷ್ ಮತ್ತು ಇತರ ವಿದೇಶಿ ಪದಗಳನ್ನು ಬಳಸುವ ಇಟಾಲಿಯನ್ನರಿಗೆ 100,000 ಯುರೋಗಳಷ್ಟು (ರೂ. 82,46,550) ದಂಡ ವಿಧಿಸಬಹುದು ಎಂದು ಹೇಳಲಾಗಿದೆ.

Giorgia Meloni: ಇಟಲಿಯಲ್ಲಿ ಇಂಗ್ಲಿಷ್, ಇತರ ವಿದೇಶಿ ಭಾಷೆಗಳಿಗೆ ಅವಕಾಶ ಇಲ್ಲ, ತಪ್ಪಿದರೆ 82 ಲಕ್ಷ ರೂ. ದಂಡ
ಇಟಲಿ ಪ್ರಧಾನ ಮಂತ್ರಿ ಜಾರ್ಜಿಯಾ ಮೆಲೋನಿಯ
Follow us
ಅಕ್ಷಯ್​ ಪಲ್ಲಮಜಲು​​
|

Updated on:Apr 03, 2023 | 12:33 PM

ಇಟಲಿ (Italy) ಪ್ರಧಾನ ಮಂತ್ರಿ ಜಾರ್ಜಿಯಾ ಮೆಲೋನಿಯ (Giorgia Meloni) ಬ್ರದರ್ಸ್ ಆಫ್ ಇಟಲಿ ಪಕ್ಷವು ಪ್ರಸ್ತಾಪಿಸಿದ ಹೊಸ ಕಾನೂನಿನ ಪ್ರಕಾರ, ಅಧಿಕೃತ ಸಂವಹನಗಳಲ್ಲಿ ಇಂಗ್ಲಿಷ್ ಮತ್ತು ಇತರ ವಿದೇಶಿ ಪದಗಳನ್ನು ಬಳಸುವ ಇಟಾಲಿಯನ್ನರಿಗೆ 100,000 ಯುರೋಗಳಷ್ಟು (ರೂ. 82,46,550) ದಂಡ ವಿಧಿಸಬಹುದು ಎಂದು ಹೇಳಲಾಗಿದೆ. CNNನ ವರದಿಯ ಪ್ರಕಾರ, ಲೋ ಚೇಂಬರ್ ಆಫ್ ಡೆಪ್ಯೂಟೀಸ್‌ನ ಸದಸ್ಯರಾದ ಫ್ಯಾಬಿಯೊ ರಾಂಪೆಲ್ಲಿ ಅವರು ಈ ಮಸೂದೆಯನ್ನು ಪರಿಚಯಿಸಿದ್ದು, ಇದಕ್ಕೆ ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಬೆಂಬಲಿಸಿದ್ದಾರೆ . ಎಲ್ಲಾ ವಿದೇಶಿ ಭಾಷೆಗಳನ್ನು ಕಾನೂನಿನೊಳಗೆ ಸೇರಿಸಲಾಗಿದ್ದರೂ, ಇದು ನಿರ್ದಿಷ್ಟವಾಗಿ “ಆಂಗ್ಲೋಮೇನಿಯಾ” ಅಥವಾ ಇಂಗ್ಲಿಷ್ ಪದಗಳ ಬಳಕೆಗಳು ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ. ಇಟಾಲಿಯನ್ ಭಾಷೆಯನ್ನು “ಡಿಮಿನ್ಸ್ ಮತ್ತು ಮಾರ್ಟಿಫೈಸ್” ಎಂದು ಹೇಳುತ್ತದೆ. ಬ್ರೆಕ್ಸಿಟ್ ಎಂದು ಕರೆಯಲ್ಪಡುವ ಯುರೋಪಿಯನ್ ಒಕ್ಕೂಟದಿಂದ ಯುನೈಟೆಡ್ ಕಿಂಗ್‌ಡಮ್‌ ನಿರ್ಗಮನವಾಗಿದ್ದು, ಇದು ಮತ್ತಷ್ಟು ಹದಗೆಟ್ಟಿದೆ ಎಂದು ಅದು ಹೇಳಿದೆ.

ಸಾರ್ವಜನಿಕ ಆಡಳಿತದಲ್ಲಿ ಸ್ಥಾನವನ್ನು ಹೊಂದಿರುವ ಮಸೂದೆಯ ಪ್ರಕಾರ ಲಿಖಿತ ಮತ್ತು ಮೌಖಿಕ ಜ್ಞಾನದಲ್ಲಿ ಇಟಾಲಿಯನ್ ಭಾಷೆಯ ಪಾಂಡಿತ್ಯವನ್ನು ಹೊಂದಿರಬೇಕು, ಆದರೆ ಈ ಬಗ್ಗೆ ಯಾವುದೇ ಚರ್ಚೆ ಅಥವಾ ಸಂಸತ್ತಿನ ಚರ್ಚೆಗೆ ತರಲಾಗಿಲ್ಲ. ಇಂಗ್ಲಿಷ್ ಭಾಷೆಯನ್ನು ಸರ್ಕಾರಿ ದಾಖಲೆ, ಸ್ಥಳೀಯ ವ್ಯವಹಾರಗಳಲ್ಲಿನ ಮತ್ತು ಉದ್ಯೋಗಳಲ್ಲಿ ಬಳಕೆ ಮಾಡದಂತೆ ಆದೇಶಿಸಲಾಗಿದೆ ಎಂದು ವರದಿ ಹೇಳಿದೆ. ಕಾನೂನಿನ ಕರಡು ಪ್ರಕಾರ, ವಿದೇಶಿ ಕಂಪನಿಗಳಿಗೆ ಎಲ್ಲಾ ಆಂತರಿಕ ನೀತಿಗಳು ಮತ್ತು ಉದ್ಯೋಗ ಒಪ್ಪಂದಗಳಲ್ಲಿ ಇಟಾಲಿಯನ್ ಭಾಷೆ ಬಳಕೆಯಾಗಬೇಕು ಎಂದು ಹೇಳಿದೆ.

ಇದನ್ನೂ ಓದಿ: Narendra Modi: ಮೋದಿ ವಿಶ್ವದಲ್ಲೇ ಅತ್ಯಂತ ಜನಪ್ರಿಯ, ಪ್ರಮುಖ ನಾಯಕ; ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಶ್ಲಾಘನೆ

ಇದು ನಮ್ಮ ಫ್ಯಾಷನ್‌ನ ವಿಷಯವಲ್ಲ, ಆದರೆ ಮುಂದಿನ ದಿನಗಳಲ್ಲಿ ಇದು ವಿದೇಶಿ ಫ್ಯಾಶನ್‌ಗಳಿಗೆ ಹಾದುಹೋಗುವಂತೆ ನೋಡಿಕೊಳ್ಳುವುದು ಕರ್ತವ್ಯವಾಗಿದೆ. ಇದರಿಂದ ನಮ್ಮ ಇಟಲಿ ಸಮಾಜದ ಮೇಲೆ ಪರಿಣಾಮಗಳನ್ನು ಉಂಟು ಮಾಡುತ್ತದೆ ಎಂದು ಕರಡು ಮಸೂದೆ ಹೇಳುತ್ತದೆ ಎಂದು CNN ವರದಿ ತಿಳಿಸಿದೆ.

ಶಾಸನದ ಮೊದಲ ಲೇಖನದ ಪ್ರಕಾರ ಇಟಾಲಿಯನ್ ಮಾತನಾಡುವ ವಿದೇಶಿಯರೊಂದಿಗೆ ಸಂವಹನ ನಡೆಸುವ ಎಲ್ಲಾ ಕಚೇರಿಗಳಲ್ಲಿ ಇಟಾಲಿಯನ್ ಪ್ರಾಥಮಿಕ ಭಾಷೆಯಾಗಿರಬೇಕು. ಇದಲ್ಲದೆ, ಆರ್ಟಿಕಲ್ 2ರ ಪ್ರಕಾರ ರಾಷ್ಟ್ರೀಯ ಪ್ರದೇಶದಲ್ಲಿ ಸಾರ್ವಜನಿಕ ಸರಕುಗಳು ಮತ್ತು ಸೇವೆಗಳ ಪ್ರಚಾರ ಮತ್ತು ಬಳಕೆಗೆ ಇಟಾಲಿಯನ್ ಭಾಷೆಯನ್ನು ಕಡ್ಡಾಯಗೊಳಿಸಲಾಗುವುದು.

Published On - 12:24 pm, Mon, 3 April 23

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ