AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Marlene Schiappa: ಪ್ಲೇಬಾಯ್ ಮ್ಯಾಗಜಿನ್ ಮುಖಪುಟದಲ್ಲಿ ಕಾಣಿಸಿಕೊಂಡ ಫ್ರಾನ್ಸ್​ ಸಚಿವೆ

ಫ್ರಾನ್ಸ್‌ನ ಇಮ್ಯಾನುಯೆಲ್ ಮ್ಯಾಕ್ರನ್ ನೇತೃತ್ವದ ಸರ್ಕಾರದ ಮಹಿಳಾ ಸಚಿವೆ ಪ್ಲೇಬಾಯ್  ಮ್ಯಾಗಜಿನ್​ನ ಮುಖಪುಟದಲ್ಲಿ ಕಾಣಿಸಿಕೊಂಡಿದ್ದು ದೊಡ್ಡ ವಿವಾದ ಸೃಷ್ಟಿಯಾಗಿದೆ.

Marlene Schiappa: ಪ್ಲೇಬಾಯ್ ಮ್ಯಾಗಜಿನ್ ಮುಖಪುಟದಲ್ಲಿ ಕಾಣಿಸಿಕೊಂಡ ಫ್ರಾನ್ಸ್​ ಸಚಿವೆ
ಮರ್ಲಿನ್ ಶಿಯಪ್ಪಾ
ನಯನಾ ರಾಜೀವ್
|

Updated on: Apr 03, 2023 | 11:12 AM

Share

ಫ್ರಾನ್ಸ್‌ನ ಇಮ್ಯಾನುಯೆಲ್ ಮ್ಯಾಕ್ರನ್ ನೇತೃತ್ವದ ಸರ್ಕಾರದ ಮಹಿಳಾ ಸಚಿವೆ ಪ್ಲೇಬಾಯ್  ಮ್ಯಾಗಜಿನ್​ನ ಮುಖಪುಟದಲ್ಲಿ ಕಾಣಿಸಿಕೊಂಡಿದ್ದು ದೊಡ್ಡ ವಿವಾದ ಸೃಷ್ಟಿಯಾಗಿದೆ. ಆದರೆ, ಅವರು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.  40 ವರ್ಷದ ಸ್ತ್ರೀವಾದಿ ಲೇಖಕಿ ಮರ್ಲಿನ್  ಶಿಯಪ್ಪಾ ಈ ಹಿಂದೆಯೂ ಹಲವು ವಿವಾದಕ್ಕೀಡಾಗಿದ್ದರು. ಅವರು ಬಲಪಂಥೀಯರನ್ನು ಹಲವು ಬಾರಿ ಕೆರಳಿಸಿದ್ದಾರೆ. ಪ್ರಧಾನಿ ಮತ್ತು ಎಡಪಂಥೀಯ ವಿಮರ್ಶಕರು ಕೂಡ ಪ್ಲೇಬಾಯ್‌ನ ಮುಖಪುಟಕ್ಕೆ ಪೋಸ್ ನೀಡುವ ಮೂಲಕ ಅವರು ತಪ್ಪು ಮಾಡಿದ್ದಾರೆ ಎಂದು ಹೇಳಿದ್ದಾರೆ.

ಫ್ರಾನ್ಸ್‌ನಲ್ಲಿ, ಸರ್ಕಾರವು ನಿವೃತ್ತಿ ವಯಸ್ಸನ್ನು ಹೆಚ್ಚಿಸಿದೆ, ಅದರ ವಿರುದ್ಧ ಕಳೆದ 3 ತಿಂಗಳುಗಳಿಂದ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದಿವೆ. ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿರುವಾಗಲೂ ಪ್ರತಿಪಕ್ಷಗಳಿಂದ ಪ್ರಶ್ನೆಗಳನ್ನು ಎದುರಿಸುತ್ತಿದ್ದಾರೆ. ಹೀಗಿರುವಾಗ ತಮ್ಮ ಸಚಿವರೇ ‘ಪ್ಲೇಬಾಯ್’ನಲ್ಲಿ ಚಿತ್ರಗಳನ್ನು ಪ್ರಕಟಿಸಿರುವುದು ಅವರ ಸರ್ಕಾರಕ್ಕೆ ಇನ್ನಷ್ಟು ಸಂಕಷ್ಟ ತಂದೊಡ್ಡಿದೆ.

ಸರ್ಕಾರದಲ್ಲಿ ಕೆಲವರು ಮಾರ್ಲಿನ್ ಪರವಾಗಿದ್ದರೆ, ಅನೇಕ ಮಿತ್ರರು ಕೋಪಗೊಂಡಿದ್ದಾರೆ. ಫ್ರಾನ್ಸ್‌ನಲ್ಲಿ ಮಹಿಳೆಯರು ಸ್ವತಂತ್ರರು, ಅವರು ಏನು ಬೇಕಾದರೂ ಮಾಡಬಹುದು ಎಂದು ಶಿಯಪ್ಪ ಹೇಳಿದ್ದು, ಅವರ ನಿರ್ಧಾರವು ಸರ್ಕಾರದ ಕೆಲವು ಸಚಿವರನ್ನು ಕೂಡ ಕೆರಳಿಸಿದೆ.

ಈಗಾಗಲೇ ಸರ್ಕಾರವು ನಿವೃತ್ತಿ ವಯಸ್ಸನ್ನು ಎರಡು ವರ್ಷಗಳವರೆಗೆ ಹೆಚ್ಚಿಸುವ ಯೋಜನೆಗಳ ವಿರುದ್ಧ ಮುಷ್ಕರಗಳು ಮತ್ತು ಹೆಚ್ಚು ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿವೆ.

ಗ್ಲಾಮರ್ ಮ್ಯಾಗಜೀನ್‌ಗಾಗಿ ಶಿಯಪ್ಪ ಡಿಸೈನರ್ ಬಟ್ಟೆಗಳನ್ನು ಧರಿಸಿರುವುದು ತಪ್ಪು ಸಂದೇಶವನ್ನು ಕಳುಹಿಸುತ್ತದೆ ಎಂದು ಕೆಲವರು ಹೇಳಿದ್ದಾರೆ. ಒಬ್ಬ ವ್ಯಕ್ತಿಯ ಬಳಿ ಅದರ ಬಗ್ಗೆ ಮೊದಲು ಕೇಳಿದಾಗ, ಇದು ಏಪ್ರಿಲ್ ಫೂಲ್ ಜೋಕ್ ಎಂದು ಭಾವಿಸಿದ್ದರು.

ಪ್ಲೇಬಾಯ್ ಸಾಫ್ಟ್ ಪೋರ್ನ್ ಮ್ಯಾಗಜೀನ್ ಅಲ್ಲ ಸಂಪಾದಕ ಜೀನ್-ಕ್ರಿಸ್ಟೋಫ್ ಫ್ಲೋರೆಂಟಿನ್ AFP ಗೆ ಮಾತನಾಡಿ, ಪ್ಲೇಬಾಯ್ ಸಾಫ್ಟ್ ಪೋರ್ನ್ ಮ್ಯಾಗಜೀನ್ ಅಲ್ಲ, ಆದರೆ 300-ಪುಟಗಳ ತ್ರೈಮಾಸಿಕವಾಗಿದ್ದು ಟ್ರೆಂಡಿಯಾಗಿದೆ. ಇನ್ನೂ ಕೆಲವು ಮಹಿಳೆಯರ ಬೆತ್ತಲೆ ಫೋಟೋಗಳಿವೆ, ಆದರೆ ಹೆಚ್ಚಿನ ಪುಟಗಳಲ್ಲಿ ಫ್ಯಾಷನ್, ಟ್ರೆಂಡ್ ಬಗ್ಗೆ ಬರೆಯಲಾಗಿದೆ.

ರಾಜಕೀಯಕ್ಕೆ ಸೇರುವ ಮೊದಲು, ಅವರು ಎರಡು ಮಕ್ಕಳ ತಾಯಿಯಾಗಿದ್ದರು, ತಾಯ್ತನ, ಮಹಿಳೆಯರ ಆರೋಗ್ಯ ಮತ್ತು ಗರ್ಭಧಾರಣೆಯ ಸವಾಲುಗಳ ಬಗ್ಗೆ ಅವರು ಬರೆದಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?