Non Veg Food Row: ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋಗಿದ್ದನ್ನು ಅಂಗೀಕರಿಸಿದ ಬಿಜೆಪಿ ಶಾಸಕ ಸಿಟಿ ರವಿ
ರವಿಯವರು ಕೇವಲ ಆರ್ಧಗಂಟೆ ಮೊದಲು ಇದೇ ಮಂಡ್ಯದಲ್ಲಿ ಮತ್ತು ಇದೇ ಮಾಧ್ಯಮ ಪ್ರತಿನಿಧಿಗಳ ಮುಂದೆ ತಾನು ದೇವಸ್ಥಾನಕ್ಕೆ ಹೋಗೇ ಇಲ್ಲ ಎಂದಿದ್ದರು.
ಮಂಡ್ಯ: ಬಿಜೆಪಿಯ ಸಿಟಿ ರವಿ (CT Ravi) ಕಾರವಾರದ ಭಟ್ಕಳದಲ್ಲಿ ಮಾಂಸದೂಟ ಸೇವಿಸಿ ಅಲ್ಲಿನ ನಾಗಬನ ದೇವಸ್ಥಾನಕ್ಕೆ ಹೋದ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಚಿಕ್ಕಮಗಳೂರು ಶಾಸಕ ತಮ್ಮ ವರಸೆ ಬದಲಾಯಿಸಿದ್ದಾರೆ. ಮಂಡ್ಯದಲ್ಲಿ ಪತ್ರಿಕಾ ಪ್ರತಿನಿಧಿಗಳು ರವಯವರಿಗೆ ಪದೇಪದೆ ಅದೇ ಪ್ರಶ್ನೆ ಕೇಳಿದಾಗ ಇನ್ನು ಉಳಿಗಾಲವಿಲ್ಲ ಅಂತ ಭಾವಿಸಿದ ರವಿ ಹೌದು, ನಾನು ಮಾಂಸಾಹಾರ (meat) ಸೇವಿಸಿದ್ದು ನಿಜ, ಆದರೆ ದೇವಸ್ಥಾನದೊಳಗೆ (temple) ಮಾತ್ರ ಹೋಗಿಲ್ಲ. ದೇವಸ್ಥಾನದ ಬಾಗಿಲು ಹಾಕಿದ್ದರಿಂದ ಹೊರಗಿನಿಂದಲೇ ದೇವರಿಗೆ ನಮಸ್ಕಾರ ಮಾಡಿ ಹಿಂತಿರುಗಿದ್ದಾಗಿ ಹೇಳಿದರು. ರವಿಯವರು ಕೇವಲ ಆರ್ಧಗಂಟೆ ಮೊದಲು ಇದೇ ಮಂಡ್ಯದಲ್ಲಿ ಮತ್ತು ಇದೇ ಮಾಧ್ಯಮ ಪ್ರತಿನಿಧಿಗಳ ಮುಂದೆ ತಾನು ದೇವಸ್ಥಾನಕ್ಕೆ ಹೋಗೇ ಇಲ್ಲ ಎಂದಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ