AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rakhi Sawant: ‘ನಾನು ಹಿಂದೂ ಅಂತ ಆದಿಲ್​ ಖಾನ್​ ಮನೆಯವರು ನನ್ನ ಸೇರಿಸಿಕೊಳ್ತಿಲ್ಲ’; ಮೈಸೂರಲ್ಲಿ ರಾಖಿ ಸಾವಂತ್​ ಕಣ್ಣೀರು

Rakhi Sawant: ‘ನಾನು ಹಿಂದೂ ಅಂತ ಆದಿಲ್​ ಖಾನ್​ ಮನೆಯವರು ನನ್ನ ಸೇರಿಸಿಕೊಳ್ತಿಲ್ಲ’; ಮೈಸೂರಲ್ಲಿ ರಾಖಿ ಸಾವಂತ್​ ಕಣ್ಣೀರು

ಮದನ್​ ಕುಮಾರ್​
|

Updated on: Feb 22, 2023 | 2:57 PM

Share

Rakhi Sawant Husband | Adil Khan: ‘ನಾನು ಹಿಂದು ಆಗಿದ್ದೆ. ಆದರೆ ಈಗ ಇಸ್ಲಾಂ ಧರ್ಮವನ್ನು ಒಪ್ಪಿಕೊಂಡಿದ್ದೇನೆ’ ಎಂದು ರಾಖಿ ಸಾವಂತ್​ ಅವರು ಮಾಧ್ಯಮದ ಎದುರು ಕಣ್ಣೀರು ಇಟ್ಟಿದ್ದಾರೆ.

ನಟಿ ರಾಖಿ ಸಾವಂತ್​ (Rakhi Sawant) ಅವರು ಮೈಸೂರಿಗೆ ಬಂದು ಕಣ್ಣೀರು ಹಾಕಿದ್ದಾರೆ. ಅವರು ಮದುವೆ ಆಗಿರುವ ಆದಿಲ್​ ಖಾನ್​ ಮೈಸೂರಿನವರು. ಈ ದಂಪತಿ ನಡುವೆ ಕಿರಿಕ್​ ಉಂಟಾಗಿದೆ. ಅವರ ಸಂಸಾರದ ಗಲಾಟೆ ಕೋರ್ಟ್​ ಮೆಟ್ಟಿಲೇರಿದೆ. ಈಗ ರಾಖಿ ಸಾವಂತ್​ ಅವರು ಮೈಸೂರಿಗೆ (Mysore) ಬಂದು ನ್ಯಾಯ ಕೇಳುತ್ತಿದ್ದಾರೆ. ಅದಕ್ಕೂ ಮುನ್ನ ಅವರು ಆದಿಲ್​ ಖಾನ್​ (Adil Khan) ಅವರ ತಂದೆ ಬಳಿ ಮಾತನಾಡಿದ್ದಾರೆ. ‘ನೀನು ಹಿಂದೂ. ನಿನ್ನನ್ನು ನಾನು ಸೇರಿಸಿಕೊಳ್ಳಲು ಆಗಲ್ಲ’ ಅಂತ ಆದಿಲ್​ ಖಾನ್​ ತಂದೆ ಹೇಳಿದ್ದಾರೆ ಎಂದು ರಾಖಿ ಸಾವಂತ್​ ತಿಳಿಸಿದ್ದಾರೆ. ‘ನಾನು ಹಿಂದು ಆಗಿದ್ದೆ. ಆದರೆ ಈಗ ಇಸ್ಲಾಂ ಧರ್ಮವನ್ನು ಒಪ್ಪಿಕೊಂಡಿದ್ದೇನೆ’ ಎಂದು ಅವರು ಮಾಧ್ಯಮದ ಎದುರು ಕಣ್ಣೀರು ಇಟ್ಟಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More