ಬೆಂಗಳೂರು: ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ನಡೆ ದಿನೇದಿನೆ ಕುತೂಹಲ ಹೆಚ್ಚಿಸುತ್ತಿದೆ!
ಕಾಂಗ್ರೆಸ್ ಪಕ್ಷಕ್ಕೆ ವಾಪಸ್ಸು ಹೋಗುತ್ತೀರಾ ಅಂತ ಕೇಳಿದ ಪ್ರಶ್ನೆಗೆ ಅದರ ಅವಶ್ಯಕತೆ ತಮಗಿಲ್ಲ ಎಂದಿದ್ದ ಅವರು ಮುಖ್ಯಮಂತ್ರಿ ಬಳಿ ಯಶವಂತಪುರ ಕ್ಷೇತ್ರದ ಅಭಿವೃದ್ಧಿಗಾಗಿ ರೂ. 7.63 ಕೋಟಿ ಅನುದಾನ ಕೇಳಿರುವುದಾಗಿ ಹೇಳಿದ್ದರು
ಬೆಂಗಳೂರು: ಮಾಜಿ ಸಚಿವ ಮತ್ತು ಯಶವಂತಪುರದ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ (ST Somashekhar) ಅವರ ನಡೆ ನಿಗೂಢವಾಗುತ್ತಿದೆ. ಅವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ವಾಪಸ್ಸಾಗುವ ನಿರ್ಧಾರ ಮಾಡಿದ್ದಾರೆ ಎಂಬ ಊಹಾಪೋಹಗಳ ನಡುವೆಯೇ ಅವರು ಒಂದು ಕಡೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar ) ಅವರ ಮನಸಾರೆ ಗುಣಗಾನ ಮಾಡುತ್ತಾರೆ. ಮತ್ತೊಂದೆಡೆ ಹೋಗಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು (Siddaramaiah) ಭೇಟಿಯಾಗುತ್ತಾರೆ. ಯಾಕೆ ಸರ್? ಅಂತ ಕೇಳಿದರೆ, ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ಕೇಳಲು ಹೋಗಿದ್ದೆ ಅನ್ನುತ್ತಾರೆ. ಕಾಂಗ್ರೆಸ್ ಪಕ್ಷಕ್ಕೆ ವಾಪಸ್ಸು ಹೋಗುತ್ತೀರಾ ಅಂತ ಕೇಳಿದ ಪ್ರಶ್ನೆಗೆ ಅದರ ಅವಶ್ಯಕತೆ ತಮಗಿಲ್ಲ ಎಂದಿದ್ದ ಅವರು ಮುಖ್ಯಮಂತ್ರಿ ಬಳಿ ಯಶವಂತಪುರ ಕ್ಷೇತ್ರದ ಅಭಿವೃದ್ಧಿಗಾಗಿ ರೂ. 7.63 ಕೋಟಿ ಅನುದಾನ ಕೇಳಿರುವುದಾಗಿ ಹೇಳಿದ್ದರು. ಇಂದು ಬೆಳಗ್ಗೆ ಅವರು ಮನೆಯಿಂದ ಹೊರಬಿದ್ದಾಗ ಅವರಿಗಾಗಿ ಕಾಯುತ್ತಿದ್ದ ಪತ್ರಕರ್ತರು, ಅನುದಾನ ಮಂಜೂರಾಯ್ತಾ ಸಾರ್ ಅಂತ ಕೇಳಿದರೆ, ಆಮೇಲೆ ಉತ್ತರ ಕೊಡ್ತೀನಿ ಅಂತ ಹೇಳುತ್ತಾ ಅವಸವಸರವಾಗಿ ಕಾರಲ್ಲಿ ಹೊರಟೇಬಿಟ್ಟರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ