ಬಿಜೆಪಿ ಎಮ್ಮೆಲ್ಸಿ ಹೆಚ್ ವಿಶ್ವನಾಥ್ ಡಿಸಿಎಂ ಡಿಕೆ ಶಿವಕುಮಾರ್​ರನ್ನು ಭೇಟಿಯಾಗಿದ್ದು ಯಾಕೆ ಗೊತ್ತಾ?

ಅರುಣ್​ ಕುಮಾರ್​ ಬೆಳ್ಳಿ

Updated on: Feb 04, 2025 | 1:26 PM

ಬಣ ರಾಜಕೀಯದ ಬಗ್ಗೆ ಮಾತಾಡಿದ ವಿಶ್ವನಾಥ್, ಕಾಂಗ್ರೆಸ್ ಶಾಸಕರು ತಮಗನ್ನಿಸಿದ ಹೇಳಿಕೆಗಳನ್ನು ನೀಡಿದರೂ ಸಿಎಂ ಸಿದ್ದರಾಮಯ್ಯ ನಿರ್ಲಿಪ್ತ ಭಾವನೆ ತಳೆದಿದ್ದಾರೆ ಎಂದು ಹೇಳಿ ಬಿಜೆಪಿ ಬಗ್ಗೆ ವ್ಯಂಗ್ಯವಾಡಿದರು. ಅಯ್ಯೋ ಬಿಜೆಪಿ ಬಗ್ಗೆ ಮಾತಾಡದಿರೋದೇ ಒಳ್ಳೆಯದು, ಅದು ಸತ್ಯವಂತರ ಪಾರ್ಟಿ ಅನ್ನುತ್ತಾರೆ. ಹಾಗಾಗೇ, ನಾವು ಎಮ್ಮೆಲ್ಸಿ ಸಾಹೇಬರ ಧೋರಣೆ ನಂಬೋದು ಕಷ್ಟ ಅಂತ ಹೇಳಿದ್ದು.

ಬೆಂಗಳೂರು: ಹಿರಿಯ ರಾಜಕಾರಣಿ ಮತ್ತು ಬಿಜೆಪಿ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ಬನಾಥ್ ಅವರ ಧೋರಣೆಗಳು ಯಾವಾಗ ಬದಲಾಗುತ್ತವೆಯೋ ಹೇಳಲಾಗಲ್ಲ ಸ್ವಾಮಿ. ಇವತ್ತು ಅವರು ನಗರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ರನ್ನು ಭೇಟಿಯಾದರು. ಯಾಕ್ಸಾರ್ ಕಾಂಗ್ರೆಸ್ ನಾಯಕನ ಭೇಟಿ ಅಂತ ಮಾಧ್ಯಮದವರು ಕೇಳಿದರೆ, ಅವರು ನೀರಾವರಿ ಸಚಿವರು, ಮೈಸೂರಲ್ಲಿ ಹಲವಾರು ಜಮೀನುಗಳಿಗೆ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ, ಹಾಗಾಗಿ ಕೆಲವು ಕಾಮಗಾರಿಗಳನ್ನು ಸ್ಯಾಂಕ್ಷನ್ ಮಾಡಿಕೊಡಿ ಅಂತ ಕೇಳಲು ಬಂದಿದ್ದೆ ಎಂದು ವಿಶ್ವನಾಥ್ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಜೆಡಿಎಸ್ ಕಾರ್ಯಕರ್ತರು ನನ್ನನ್ನು ಸಂಪರ್ಕಿಸಿದ್ದಾರೆಯೇ ಹೊರತು ಶಾಸಕರಲ್ಲ: ಡಿಕೆ ಶಿವಕುಮಾರ್

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.