ಜೆಡಿಎಸ್ ಕಾರ್ಯಕರ್ತರು ನನ್ನನ್ನು ಸಂಪರ್ಕಿಸಿದ್ದಾರೆಯೇ ಹೊರತು ಶಾಸಕರಲ್ಲ: ಡಿಕೆ ಶಿವಕುಮಾರ್
ವಿರೋಧ ಪಕ್ಷದ ನಾಯಕ ಆರ್ ಅಶೋಕ ಅವರು ಮುಖ್ಯಮಂತ್ರಿ ಬದಲಾವಣೆ ಆಗೋದು ನಿಶ್ಚಿತ, ಅದಕ್ಕಾಗಿ ದಿನಾಂಕ ಕೂಡ ನಿಗದಿಯಾಗಿದೆ ಅಂತ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, ಅಶೋಕ ತಾನೊಬ್ಬ ಜ್ಯೋತಿಷಿ ಅಂತ ಫಲಕ ಹಾಕಿಕೊಂಡಿರವಂತಿದೆ, ತನಗೂ ಜ್ಯೋತಿಷ್ಯದ ಬಗ್ಗೆ ಖಯಾಲಿ, ಪುರುಸೊತ್ತು ಮಾಡಿಕೊಂಡು ಅವರ ಬಳಿ ಒಮ್ಮೆ ಹೋಗುತ್ತೇನೆ ಎಂದರು.
ಬೆಂಗಳೂರು: ಯಾವುದೇ ಜೆಡಿಎಸ್ ಶಾಸಕ ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ತಾನು ಮಾತಾಡಿಲ್ಲ ಅದರೆ ಆ ಪಕ್ಷದ ಕಾರ್ಯಕರ್ತರು ಸಂಪಕಿಸಿದಾಗ ಆ ಪಕ್ಷದಲ್ಲಿ ಭವಿಷ್ಯ ಇಲ್ಲ ಅಂತ ತಾನು ಹೇಳಿರೋದು ಸತ್ಯ, ಅವರಾದರೂ ಡೋಲಾಯಮನ ಸ್ಥಿತಿಯಲ್ಲಿ ಎಷ್ಟು ದಿನ ಅಂತ ಕಾಯುತ್ತಾರೆ, ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಅವರಿಗೂ ಒಂದು ರಾಷ್ಟ್ರೀಯ ಪಕ್ಷ ಬೇಕು ತಾನೇ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು. ಆದರೆ ಜೆಡಿಎಸ್ ಪಕ್ಷದ ಶಾಸಕರು ತನ್ನನ್ನು ಸಂಪರ್ಕಿಸಿದ ಅಥವಾ ತಾನು ಅವರನ್ನು ಸಂಪರ್ಕಿಸಿದ ವಿಷಯವನ್ನು ಅವರು ಅಲ್ಲಗಳೆದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಲು ಸಿದ್ಧರಾಗಿರುವ ಡಿಕೆ ಶಿವಕುಮಾರ್: ಪರೋಕ್ಷವಾಗಿ ಮುಂದಿನ ಸಿಎಂ ಎಂದ ಬಾಲಕೃಷ್ಣ