ಭವಿಷ್ಯವಾಣಿ ನುಡಿಯುವ ಅಶೋಕಗೆ ತಮ್ಮ ಸ್ಥಾನ ಅಪಾಯದಲ್ಲಿರುವ ಸಂಗತಿ ಗೊತ್ತಿದೆಯೇ? ಪ್ರದೀಪ್ ಈಶ್ವರ್
ಕರ್ನಾಟಕದಿಂದ ರಾಜ್ಯಸಭಾ ಸದಸ್ಯರಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸುವಾಗ ಈ ಬಾರಿಯೂ ಕರ್ನಾಟಕವನ್ನು ಕಡೆಗಣಿಸಿದ್ದಾರೆ, ನೀರಾವರಿ ಯೋಜನೆಗಳಲ್ಲಿ ಯಾವುದಕ್ಕೂ ಅವರು ಹಣ ನೀಡಿಲ್ಲ, ಕರ್ನಾಟಕದ ಸಂಸತ್ ಮತ್ತು ರಾಜ್ಯ ಸದಸ್ಯರು ಇದರ ಬಗ್ಗೆ ಮಾತನ್ನೇ ಆಡುತ್ತಿಲ್ಲ ಎಂದು ಪ್ರದೀಪ್ ಈಶ್ವರ್ ಹೇಳಿದರು.
ಬೆಂಗಳೂರು: ಕಾಂಗ್ರೆಸ್ ನಾಯಕರೆಲ್ಲ ವಿರೋಧ ಪಕ್ಷದ ನಾಯಕ ಅರ್ ಆಶೋಕ ಅವರನ್ನು ಜ್ಯೋತಿಷಿ ಎಂದು ಕರೆಯಲಾರಂಭಿಸಿದ್ದಾರೆ. ಮಾಧ್ಯಮಗಳೊಡನೆ ಮಾತಾಡಿದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್, ವಿರೋಧ ಪಕ್ಷದ ನಾಯಕರಾಗಿರುವ ಅಶೋಕ ವ್ಯಾಲಿಡ್ ಪ್ರಶ್ನೆಗಳನ್ನು ಕೇಳೋದು ಬಿಟ್ಟು ಭವಿಷ್ಯವಾಣಿ ನುಡಿಯುತ್ತಾ ತಿರುಗಾಡುತ್ತಿದ್ದಾರೆ, ಅವರಿಗೆ ವಿಜಯೇಂದ್ರ ಅಥವಾ ಯತ್ನಾಳ್ ಭವಿಷ್ಯ ಏನು ಅಂತ ಗೊತ್ತಿಲ್ಲ ಅದರೆ ಕಾಂಗ್ರೆಸ್ ನಾಯಕರ ಬಗ್ಗೆ ಜ್ಯೋತಿಷ್ಯ ಹೇಳುತ್ತಿದ್ದಾರೆ, ಅದು ಹೋಗಲಿ ಅವರಿಗೆ ತಮ್ಮ ಭವಿಷ್ಯದ ಬಗ್ಗೆಯಾದರೂ ಗೊತ್ತಿದೆಯಾ? ಯಾಕೆಂದರೆ ತಾನಂದುಕೊಳ್ಳುವ ಹಾಗೆ ಅವರಿಂದ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಕಸಿದುಕೊಂಡು ಇವತ್ತು ದೆಹಲಿಗೆ ಹೋಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಬಣಕ್ಕೆ ನೀಡುವ ಸಾಧ್ಯತೆ ಇದೆ, ಬಿಜೆಪಿ ವರಿಷ್ಠರು ಯಡಿಯೂರಪ್ಪ ಕುಟುಂಬವನ್ನು ಸುಲಭವಾಗಿ ಬಿಟ್ಟುಕೊಡುವುದಿಲ್ಲ ಎಂದು ಈಶ್ವರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ರಾಜ್ಯ ಇತಿಹಾಸದಲ್ಲೇ ಶಾಸಕ ಪ್ರದೀಪ್ ಈಶ್ವರ್ ವಿನೂತನ ಕಾರ್ಯ: ಮತದಾರರ ಮನೆ ಬಾಗಿಲಿಗೆ ಆಫೀಸರ್