Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮುಂದುವರಿಯುವ ವಿಶ್ವಾಸ ಮತ್ತೊಮ್ಮೆ ವ್ಯಕ್ತಪಡಿಸಿದ ಬಿವೈ ವಿಜಯೇಂದ್ರ

ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮುಂದುವರಿಯುವ ವಿಶ್ವಾಸ ಮತ್ತೊಮ್ಮೆ ವ್ಯಕ್ತಪಡಿಸಿದ ಬಿವೈ ವಿಜಯೇಂದ್ರ

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 03, 2025 | 12:11 PM

ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷನ ಸ್ಥಾನದಿಂದ ಕೆಳಗಿಳಿಸುವುದು ಬಸನಗೌಡ ಯತ್ನಾಳ್ ಬಣದ ವನ್ ಪಾಯಿಂಟ್ ಅಜೆಂಡಾ ಅಗಿರುವಂತಿದೆ. ಆದರೆ, ಅವರ ಪ್ರಯತ್ನಗಳಿಂದ ವಿಚಲಿತರಾಗದ ವಿಜಯೇಂದ್ರ ಮಾತ್ರ ತಾನು ಸ್ಥಾನದಲ್ಲಿ ಮುಂದುವರಿಯುತ್ತೇನೆ ಎಂದು ಹೇಳುತ್ತಾರೆ. ಒಂದು ವೇಳೆ ಅವರೇ ಮುಂದುವರಿದರೆ ಈಗ ನಡೆಯುತ್ತಿರುವ ಒಳಜಗಳಗಳು ಪ್ರಾಯಶಃ ನಿಲ್ಲಲಾರವು.

ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷನ ಬದಲಾಯಿಸುವಂತೆ ಅಗ್ರಹಿಸಲು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ತಂಡ ದೆಹಲಿಗೆ ಹೋಗಲಿರುವ ಹಿನ್ನೆಲೆಯಲ್ಲಿ ನಗರದಲ್ಲಿಂದು ಮಾತಾಡಿದ ಬಿವೈ ವಿಜಯೇಂದ್ರ, ತಮ್ಮ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಜಾರಿಯಲ್ಲಿದೆ ಪಕ್ಷದ ಸಂಘಟನೆ ಚುನಾವಣೆಗಳು ವ್ಯವಸ್ಥಿತವಾಗಿ ನಡೆಯುತ್ತಿವೆ ಎಂದು ಹೇಳಿದರು. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಭ್ರಷ್ಟ ಮತ್ತು ದುಷ್ಟ ಸರ್ಕಾದ ವಿರುದ್ಧ ಪಕ್ಷದ ರಾಜ್ಯಾಧ್ಯಕ್ಷನಾಗಿ ಒಂದು ವರ್ಷದಿಂದ ಸಮರ್ಪಕವಾಗಿ ಕೆಲಸ ಮಾಡುತ್ತಿದ್ದೇನೆ ಮತ್ತು ತನ್ನನ್ನು ಮುಂದುವರಿಸುವ ವಿಶ್ವಾಸವಿದೆ ಎಂದು ವಿಜಯೇಂದ್ರ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಇದನ್ನೂ ಓದಿ:  1 ವಾರದಲ್ಲಿ ಎಲ್ಲವೂ ಸರಿಯಾಗುತ್ತೆ, ಮತ್ತೆ ನಾನೇ ರಾಜ್ಯಾಧ್ಯಕ್ಷನಾಗುತ್ತೇನೆ: ವಿಜಯೇಂದ್ರ