ಮಹಾಕುಂಭದ ಅಮೃತ ಸ್ನಾನದ ವೇಳೆ ಸಂತರು, ಋಷಿಗಳ ಮೇಲೆ ಹೆಲಿಕಾಪ್ಟರ್ನಿಂದ ಹೂವಿನ ಮಳೆ
ಮಹಾಕುಂಭದಲ್ಲಿ ಅಮೃತಸ್ನಾನದಲ್ಲಿ ಪಾಲ್ಗೊಂಡ ಸಂತರ ಮೇಲೆ ಇಂದು ಹೆಲಿಕಾಪ್ಟರ್ನಿಂದ ಹೂವಿನ ಮಳೆ ಸುರಿಸಲಾಯಿತು. ಕೇಂದ್ರ ಸರ್ಕಾರವು 25 ಸೆಕ್ಟರ್‌ಗಳು, 30 ಪಾಂಟೂನ್ ಸೇತುವೆಗಳು ಮತ್ತು ಸೂಕ್ಷ್ಮ ಬ್ಯಾರಿಕೇಡ್‌ಗಳನ್ನು ಮೇಲ್ವಿಚಾರಣೆ ಮಾಡುತ್ತಿದೆ. ಕುಂಭಮೇಳದ ಪ್ರದೇಶವನ್ನು ಒಳಗೊಳ್ಳಲು 3,000ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ನಿಯೋಜಿಸಲಾಗಿದೆ. ಜನವರಿ 13ರಂದು ಪ್ರಾರಂಭವಾದ ಮಹಾ ಕುಂಭ 2025 ಫೆಬ್ರವರಿ 26 ರವರೆಗೆ ಮುಂದುವರಿಯುತ್ತದೆ. ಈ ಕಾರ್ಯಕ್ರಮವು ಈಗಾಗಲೇ ದೇಶಾದ್ಯಂತ ಮತ್ತು ಪ್ರಪಂಚದಾದ್ಯಂತ ಲಕ್ಷಾಂತರ ಭಕ್ತರನ್ನು ಆಕರ್ಷಿಸಿದೆ
ಪ್ರಯಾಗರಾಜ್: ಮಹಾಕುಂಭ ನಡೆಯುತ್ತಿರುವ ಪ್ರಯಾಗ್‌ರಾಜ್‌ನಲ್ಲಿ ಬಸಂತ ಪಂಚಮಿಯ ಸಂದರ್ಭವಾದ ಇಂದು ತ್ರಿವೇಣಿ ಸಂಗಮದಲ್ಲಿ ‘ಅಮೃತ ಸ್ನಾನ’ಕ್ಕಾಗಿ ಲಕ್ಷಾಂತರ ಜನರು ಸೇರಿದ್ದರು. ಈ ವೇಳೆ ಮೊದಲು ತೀರ್ಥ ಸ್ನಾನ ಮಾಡುವ ಸಂತರು ಮತ್ತು ಋಷಿಗಳ ಮೇಲೆ ಉತ್ತರ ಪ್ರದೇಶ ಸರ್ಕಾರ ಹೂವಿನ ದಳಗಳ ಮಳೆ ಸುರಿಸಿತು. ಉತ್ತರ ಪ್ರದೇಶದ ವಾರ್ತಾ ಇಲಾಖೆಯ ಪ್ರಕಾರ, ಇಂದು ಬೆಳಿಗ್ಗೆ 8 ಗಂಟೆಯ ಹೊತ್ತಿಗೆ 62 ಲಕ್ಷಕ್ಕೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ. ಈ ವೇಳೆ ಭಕ್ತರ ಮೇಲೆ ಹೆಲಿಕಾಪ್ಟರ್ನಲ್ಲಿ ಪುಷ್ಟವೃಷ್ಟಿ ಮಾಡಲಾಯಿತು. ನಾಗ ಸಾಧುಗಳು ತ್ರಿವೇಣಿ ಸಂಗಮದ ಘಾಟ್‌ಗಳಲ್ಲಿ ನೀರಿಗೆ ಧುಮುಕುವುದರೊಂದಿಗೆ ಪ್ರಾರಂಭವಾದ ಇಂದಿನ ಪವಿತ್ರ ಸ್ನಾನ ಆಚರಣೆಯು ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ 2025ರ ಭಾಗವಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos