Maha Kumbh Mela 2025: ತ್ರಿವೇಣಿ ಸಂಗಮದಲ್ಲಿ ಮಿಂದವರು ಸತೀಶ್ ಜಾರಕಿಹೊಳಿ ಮುಂದಿನ ಮುಖ್ಯಮಂತ್ರಿ ಎಂದರು!
Maha Kumbh Mela 2025: ಸತೀಶ್ ಜಾರಕಿಹೊಳಿ ಅಭಿಮಾನಿಗಳು ಪುಣ್ಯಸ್ನಾನದ ವ್ಯಾಖ್ಯಾನವನ್ನು ಬದಲಾಯಿಸಿರುವಂತಿದೆ. ವೈಯಕ್ತಿಕವಾಗಿ ಪಾಪಗಳ ನಿವೇದನೆ ಮತ್ತು ವಿಮೋಚನೆಗೆ ಭಕ್ತಾದಿಗಳು ಪುಣ್ಯಸ್ನಾನ ಮಾಡುತ್ತಾರೆ, ತಮ್ಮ ನೆಚ್ಚಿನ ನಾಯಕ ಮುಖ್ಯಮಂತ್ರಿ ಅಗಲಿ ಅಂತಲ್ಲ. ತಮ್ಮನ್ನು ನೋಡಿದ ಬೇರೆ ಭಕ್ತಾದಿಗಳು ನಕ್ಕಾರು ಎಂಬ ಯೋಚನೆಯೂ ಇವರಲ್ಲಿ ಹುಟ್ಟಿರಲಿಕ್ಕಿಲ್ಲವೇ ಎಂದು ಕನ್ನಡಿಗರು ಯೋಚಿಸುತ್ತಿರಬಹುದು!
ಪ್ರಯಾಗ್ರಾಜ್: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಎಲ್ಲರೂ ಬಾಯ್ಮುಚ್ಚಿಕೊಂಡು ಕೆಲಸ ಮಾಡಿ ಅಂತ ರಾಜ್ಯದ ಕಾಂಗ್ರೆಸ್ ನಾಯಕರನ್ನು ಗದರುವ ಬದಲು, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆ ವಿಷಯದಲ್ಲಿ ಆಗಿರಬಹುದಾದ ಒಪ್ಪಂದದ ಬಗ್ಗೆ ಅಂತ ಹೇಳಿದ್ದರೆ ಇಂಥ ಉಪದ್ವ್ಯಾಪಗಳಿಗೆ ಅವಕಾಶವಿರುತ್ತಿರಲಿಲ್ಲ. ಇಲ್ನೋಡಿ, ಬೆಳಗಾವಿಯ ಮೂರ್ನಾಲ್ಕು ಜನ ಪ್ರಯಾಗ್ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಪುಣ್ಯಸ್ನಾನ ಮಾಡಿ ನದಿತೀರದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರ ಫೋಟೋವೊಂದನ್ನು ಹಿಡಿದು ಮುಂದಿನ ಮುಖ್ಯಮಂತ್ರಿ ಎನ್ನುತ್ತಿದ್ದಾರೆ. ಸಚಿವರ ಪರ ಅವರು ಹರಕೆ ಹೊತ್ತಿದ್ದಾರೆ ಎನ್ನಲಾಗುತ್ತಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Maha Kumbh Mela 2025: ಸುತ್ತೂರು ಶ್ರೀಗಳು ಮತ್ತು ವಚನಾನಂದ ಸ್ವಾಮೀಜಿಗಳಿಂದ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ