Sign In

By signing in or creating an account, you agree with Associated Broadcasting Company's Terms & Conditions and Privacy Policy.

Maha Kumbh Mela 2025: ಸುತ್ತೂರು ಶ್ರೀಗಳು ಮತ್ತು ವಚನಾನಂದ ಸ್ವಾಮೀಜಿಗಳಿಂದ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ

Maha Kumbh Mela 2025: ಸುತ್ತೂರು ಶ್ರೀಗಳು ಮತ್ತು ವಚನಾನಂದ ಸ್ವಾಮೀಜಿಗಳಿಂದ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ

ಅರುಣ್​ ಕುಮಾರ್​ ಬೆಳ್ಳಿ
|

Updated on:Feb 03, 2025 | 2:01 PM

ಭಾರತೀಯ ಧರ್ಮ, ಪರಂಪರೆ ಮತ್ತು ಆಚರಣೆಗಳಿಂದ ಅನೇಕ ವಿದೇಶಿಯರು ಆಕರ್ಷಿತರಾಗುತ್ತಿರುವ ಸಂಗತಿ ಎಲ್ಲರಿಗೂ ಗೊತ್ತಿರುವಂಥದ್ದೇ. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತ್ತು ವಚಾನಾನಂದ ಸ್ವಾಮೀಜಿಯವರ ಜೊತೆಯಿರುವ ಕನ್ನಡಿಗರ ಗುಂಪಿನಲ್ಲಿ ಒಬ್ಬ ಬೇರೆ ದೇಶದ ಮಹಿಳೆ ಮಂತ್ರಘೋಷಗಳನ್ನು ಹೇಳುತ್ತಾ ಪುಣ್ಯಸ್ನಾನ ಮಾಡುತ್ತಿರುವುದನ್ನು ದೃಶ್ಯಗಳಲ್ಲಿ ಗಮನಿಸಬಹುದು.

ಪ್ರಯಾಗ್​ರಾಜ್: ಉತ್ತರ ಪ್ರದೇಶದ ಪ್ರಯಾಗ್​ರಾಜ್ ನಲ್ಲಿ ಮಹಾಕುಂಭ ಮೇಳ ಯಾವುದೇ ಅಡತಡೆಯಿಲ್ಲದೆ ಮುಂದುವರಿದಿದೆ. ಭಕ್ತಾದಿಗಳು ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡುತ್ತಿದ್ದಾರೆ. ಇವತ್ತು ವಸಂತ ಪಂಚಮಿ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನಲ್ಲಿರುವ ಸುತ್ತೂರು ಮಠದ ಶ್ರೀಗಳಾಗಿರುವ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತ್ತು ದಾವಣಗೆರೆ ಜಿಲ್ಲೆಯ ಹರಿಹರದಲ್ಲಿರುವ ಪಂಚಮಸಾಲಿ ಪೀಠದ ಜಗದ್ಗುರು ವಚಾನಾನಂದ ಸ್ವಾಮೀಜಿಯವರು ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   Mahakumbh Mela 2025: ಮಹಾಕುಂಭವು ಅನಾದಿ ಕಾಲದ ಆಧ್ಯಾತ್ಮಿಕ ಪರಂಪರೆಯ ಸಂಕೇತ, ನಂಬಿಕೆ, ಸಾಮರಸ್ಯದ ಆಚರಣೆ: ಮೋದಿ

Published on: Feb 03, 2025 10:27 AM