‘ಗೆಲ್ಲಿಸಿದವರನ್ನು ಮರೆಯಬಾರದು’; ಸಂಜಿತ್ ಹೆಗಡೆ ವಿರುದ್ಧ ಮತ್ತೆ ಸಿಡಿದೆದ್ದ ನಿರ್ಮಾಪಕ ಕೆ. ಮಂಜು
ಗಾಯಕ ಸಂಜಿತ್ ಹೆಗಡೆ ವಿರುದ್ಧ ಕೆ ಮಂಜು ಮೊದಲಿನಿಂದಲೂ ಅಸಮಾಧಾನ ಹೊರಹಾಕುತ್ತಲೇ ಬಂದಿದ್ದಾರೆ. ಈಗ ಅವರು ಮತ್ತೊಮ್ಮೆ ಸಿಡಿದೆದ್ದಿದ್ದಾರೆ. ಈ ಸಂದರ್ಭದ ವಿಡಿಯೋ tv9 ಕನ್ನಡಕ್ಕೆ ಲಭ್ಯವಾಗಿದೆ. ಅವರು ಸಂಜಿತ್ ಹೆಗಡೆ ಅವರಿಗೆ ಕೆಲವು ಕಿವಿಮಾತು ಹೇಳಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ಸಂಜಿತ್ ಹೆಗಡೆ ಕನ್ನಡದಲ್ಲಿ ಹಾಡಲು ಹೆಚ್ಚಿನ ಹಣಕ್ಕೆ ಬೇಡಿಕೆ ಇಡುತ್ತಾ ಇದ್ದಾರೆ ಎಂದು ಕೆಲವರು ಆರೋಪಿಸಿದ್ದು ಇದೆ. ಈ ಸಂಬಂಧ ನಿರ್ಮಾಪಕ ಕೆ. ಮಂಜು ಅವರು ಮಾತನಾಡಿದ್ದಾರೆ. ‘ಕೆಲವು ಮರಾಠಿ ಗಾಯಕರು ಆಯಾ ಭಾಷೆಗೆ ಕಡಿಮೆ ಸಂಭಾವನೆ ಪಡೆಯುತ್ತಾರೆ. ಸಂಜಿತ್ ಹೆಗಡೆ ಕೂಡ ಹಾಗೆಯೇ ಮಾಡಬೇಕು. ಅವನು ಯಾವುದೇ ಭಾಷೆಯಲ್ಲಿ ಹಾಡಲಿ, ಆದರೆ, ಕನ್ನಡದಲ್ಲಿ ಅವರು ಕಡಿಮೆ ಸಂಭಾವನೆ ಪಡೆಯಬೇಕು. ಗೆಲ್ಲಿಸಿದವರನ್ನು ಮರೆಯಬಾರದು’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Feb 03, 2025 08:54 AM