Mahakumbh Mela 2025: ಮಹಾಕುಂಭವು ಅನಾದಿ ಕಾಲದ ಆಧ್ಯಾತ್ಮಿಕ ಪರಂಪರೆಯ ಸಂಕೇತ, ನಂಬಿಕೆ, ಸಾಮರಸ್ಯದ ಆಚರಣೆ: ಮೋದಿ
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಇಂದು ಮಹಾಕುಂಭ ಮೇಳೆ 2025 ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ಅದರಲ್ಲಿ ಮಹಾ ಕುಂಭವು ಭಾರತದ ಅನಾದಿ ಕಾಲದ ಆಧ್ಯಾತ್ಮಿಕ ಪರಂಪರೆಯನ್ನು ಸಂಕೇತಿಸುತ್ತದೆ ಮತ್ತು ನಂಬಿಕೆ ಮತ್ತು ಸಾಮರಸ್ಯದ ಆಚರಣೆ ಇದಾಗಿದೆ ಎಂದು ಹೇಳಿದ್ದಾರೆ. ಮೂರು ಪವಿತ್ರ ನದಿಗಳ ಸಂಗಮದಲ್ಲಿ ವಿಶ್ವದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದೆ. ಈ ಧಾರ್ಮಿಕ ಸಮಾರಂಭದಲ್ಲಿ, ಭಾರತ ಮತ್ತು ವಿದೇಶಗಳಿಂದ ಕೋಟ್ಯಂತರ ಜನರು ಆಗಮಿಸುತ್ತಾರೆ ಮತ್ತು ಪವಿತ್ರ ತ್ರಿವೇಣಿ ಸಂಗಮದಲ್ಲಿ ನಂಬಿಕೆಯ ಸ್ನಾನವನ್ನು ಮಾಡುತ್ತಾರೆ.
ವಿಶ್ವದ ಅತಿ ದೊಡ್ಡ ಐತಿಹಾಸಿಕ ಧಾರ್ಮಿಕ ಹಬ್ಬ ಈ ಮಹಾಕುಂಭ ಮೇಳ. ಉತ್ತರ ಪ್ರದೇಶದ ಪವಿತ್ರ ನಗರವಾದ ಪ್ರಯಾಗ್‌ರಾಜ್‌ನಲ್ಲಿ ಪ್ರಾರಂಭವಾಗುತ್ತಿದ್ದಂತೆ, ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ‘‘ಮಹಾಕುಂಭವು ಭಾರತದ ಶಾಶ್ವತ ಆಧ್ಯಾತ್ಮಿಕ ಪರಂಪರೆಯನ್ನು ಪ್ರತಿನಿಧಿಸುತ್ತದೆ ಮತ್ತು ನಂಬಿಕೆ ಮತ್ತು ಸಾಮರಸ್ಯದ ಆಚರಣೆ’’ ಎಂದು ಹೇಳಿದ್ದಾರೆ.
ಎಲ್ಲಾ ಯಾತ್ರಾರ್ಥಿಗಳು ಮತ್ತು ಪ್ರವಾಸಿಗರಿಗೆ ಶುಭ ಹಾರೈಸಿದ್ದಾರೆ. ಭಾರತೀಯ ಮೌಲ್ಯಗಳು ಮತ್ತು ಸಂಸ್ಕೃತಿಯನ್ನು ಪಾಲಿಸುವ ಕೋಟಿಗಟ್ಟಲೆ ಜನರಿಗೆ ಬಹಳ ವಿಶೇಷವಾದ ದಿನ. ಮಹಾ ಕುಂಭ 2025 ಪ್ರಯಾಗರಾಜ್‌ನಲ್ಲಿ ಪ್ರಾರಂಭವಾಗಿದೆ, ಅಸಂಖ್ಯಾತ ಜನರನ್ನು ನಂಬಿಕೆ, ಭಕ್ತಿ ಮತ್ತು ಸಂಸ್ಕೃತಿಯ ಪವಿತ್ರ ಸಂಗಮದಲ್ಲಿ ಒಟ್ಟುಗೂಡಿಸುತ್ತದೆ. ಕುಂಭವು ಭಾರತದ ಕಾಲಾತೀತ ಆಧ್ಯಾತ್ಮಿಕ ಪರಂಪರೆಯನ್ನು ಸಾಕಾರಗೊಳಿಸುತ್ತದೆ ಮತ್ತು ನಂಬಿಕೆ ಮತ್ತು ಸಾಮರಸ್ಯದ ಆಚರಣೆ ಇದಾಗಿದೆ ಎಂದು ಬರೆದಿದ್ದಾರೆ.
ಪ್ರಧಾನಿ ಮೋದಿ ಪೋಸ್ಟ್
A very special day for crores of people who cherish Bharatiya values and culture!
Maha Kumbh 2025 commences in Prayagraj, bringing together countless people in a sacred confluence of faith, devotion and culture. The Maha Kumbh embodies India’s timeless spiritual heritage and…
— Narendra Modi (@narendramodi) January 13, 2025
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭಕ್ತರಿಗೆ ಶುಭ ಹಾರೈಸಿದ್ದಾರೆ. ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕೂಟ ‘ಮಹಾಕುಂಭ’ ಇಂದಿನಿಂದ ಪವಿತ್ರ ನಗರವಾದ ಪ್ರಯಾಗರಾಜ್‌ನಲ್ಲಿ ಪ್ರಾರಂಭವಾಗುತ್ತಿದೆ. ಎಲ್ಲಾ ಪೂಜ್ಯ ಸಂತರು, ಕಲ್ಪವಾಸಿಗಳು ಮತ್ತು ಭಕ್ತರು ಆಗಮಿಸುತ್ತಿದ್ದಾರೆ.
ವಿವಿಧತೆಯಲ್ಲಿ ಏಕತೆಯನ್ನು ಅನುಭವಿಸಲು, ನಂಬಿಕೆ ಮತ್ತು ಆಧುನಿಕತೆಯ ಸಂಗಮದಲ್ಲಿ ಧ್ಯಾನ ಮಾಡಲು ಮತ್ತು ಪವಿತ್ರ ಸ್ನಾನ ಮಾಡಲು ಬಂದವರು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.2025 ರ ಮಹಾಕುಂಭದಲ್ಲಿ ಭಾಗವಹಿಸುವ ಮೂಲಕ ಸನಾತನ ಸಂಸ್ಕೃತಿಯ ಈ ವೈಭವಯುತ ಸಂಪ್ರದಾಯದ ಭಾಗವಾಗೋಣ ಎಂದಿದ್ದಾರೆ.
ಯೋಗಿ ಆದಿತ್ಯನಾಥ್ ಪೋಸ್ಟ್
पौष पूर्णिमा की बधाई।
विश्व के विशालतम आध्यात्मिक एवं सांस्कृतिक समागम ‘महाकुम्भ’ का आज से तीर्थराज प्रयागराज में शुभारंभ हो रहा है।
अनेकता में एकता की अनुभूति के लिए, आस्था एवं आधुनिकता के संगम में साधना एवं पवित्र स्नान के लिए पधारे सभी पूज्य सन्तों, कल्पवासियों, श्रद्धालुओं…
— Yogi Adityanath (@myogiadityanath) January 12, 2025
ಪೂರ್ಣ ಕುಂಭ ಮುಗಿದು 12 ವರ್ಷಗಳ ನಂತರ ಮಹಾಕುಂಭವನ್ನು ಆಚರಿಸಲಾಗುತ್ತಿದ್ದು, ಕಾರ್ಯಕ್ರಮಕ್ಕೆ 45 ಕೋಟಿಗೂ ಅಧಿಕ ಭಕ್ತರನ್ನು ನಿರೀಕ್ಷಿಸಲಾಗಿದೆ. ಮಹಾಕುಂಭವು ಫೆಬ್ರವರಿ 26 ರಂದು ಮುಕ್ತಾಯಗೊಳ್ಳಲಿದೆ. ಗಂಗಾ, ಯಮುನಾ ಮತ್ತು ಸರಸ್ವತಿಯ ಪವಿತ್ರ ಸಂಗಮದಲ್ಲಿ ಲಕ್ಷಾಂತರ ಭಕ್ತರು ಸ್ನಾನ ಮಾಡುತ್ತಿದ್ದಾರೆ. ಭಾರತ ಮತ್ತು ವಿದೇಶಗಳಿಂದ ಬರುವ ಭಕ್ತರಿಗೆ ಮಹಾಕುಂಭವು ವಿಶಿಷ್ಟ ಅನುಭವ ನೀಡಲಿದೆ.
ಮತ್ತಷ್ಟು ಓದಿ: Mahakumbh Mela 2025: ಇಂದಿನಿಂದ ಮಹಾಕುಂಭ ಮೇಳ ಆರಂಭ, 144 ವರ್ಷಗಳ ಬಳಿಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಪ್ರಯಾಗ್ರಾಜ್
ಈ ಕುಂಭ ಮೇಳವು 144 ವರ್ಷಗಳ ಬಳಿಕ ನಡೆಯುತ್ತಿದೆ. ಈ ಸಮಯದಲ್ಲಿ ದೇವತೆಗಳು ಮತ್ತು ರಾಕ್ಷಸರು ಅಮೃತಕ್ಕಾಗಿ ಹೋರಾಡಿದರು. ಈ ದಿನ, ಸೂರ್ಯ, ಚಂದ್ರ ಮತ್ತು ಗುರು ಗ್ರಹಗಳ ಮಂಗಳಕರ ಸ್ಥಾನವು ರೂಪುಗೊಳ್ಳುತ್ತಿದೆ, ಅದು ಆ ಸಮಯದಲ್ಲಿ ಸಮುದ್ರ ಮಂಥನದ ಸಮಯದಲ್ಲಿ ರೂಪುಗೊಂಡಿತು. ಅಲ್ಲದೇ ರವಿಯೋಗ ಕೂಡ ಇರಲಿದೆ.