Video: ಉತ್ತರ ಪ್ರದೇಶ: ಬಿಜೆಪಿ ಕಚೇರಿಯನ್ನೇ ನೆಲಸಮ ಮಾಡಿದ ಯೋಗಿ ಸರ್ಕಾರ
ಉತ್ತರ ಪ್ರದೇಶದಾದ್ಯಂತ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡುವ ಸರ್ಕಾರದ ಕಾರ್ಯ ಪ್ರಗತಿಯಲ್ಲಿದೆ. ಬಲಿಯಾದಲ್ಲಿ ಬಿಜೆಪಿ ಕಚೇರಿಯನ್ನೇ ಯೋಗಿ ಸರ್ಕಾರ ನೆಲಸಮ ಮಾಡಿದೆ. ಬಿಜೆಪಿಯು ಜಾಗವನ್ನು ಅತಿಕ್ರಮಣ ಮಾಡಿಕೊಂಡಿದೆ ಎನ್ನುವ ಆರೋಪವಿದೆ. ಇದಕ್ಕೂ ಮುನ್ನ ವಾರದೊಳಗೆ ಜಿಲ್ಲಾಡಳಿತ ಹಾಗೂ ಪಾಲಿಕೆ ಆಡಳಿತ ಬಿಜೆಪಿ ಶಿಬಿರ ಕಚೇರಿಯನ್ನು ತೆರವು ಮಾಡಲು ಎರಡು ಬಾರಿ ತೆರಳಿದ್ದರೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುರೇಂದ್ರ ಸಿಂಗ್ ವಿರೋಧದಿಂದ ಬರಿಗೈಯಲ್ಲಿ ವಾಪಸಾಗಬೇಕಾಯಿತು.
ಉತ್ತರ ಪ್ರದೇಶದಾದ್ಯಂತ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡುವ ಸರ್ಕಾರದ ಕಾರ್ಯ ಪ್ರಗತಿಯಲ್ಲಿದೆ. ಬಲ್ಲಿಯಾದಲ್ಲಿ ಬಿಜೆಪಿ ಕಚೇರಿಯನ್ನೇ ಯೋಗಿ ಸರ್ಕಾರ ನೆಲಸಮ ಮಾಡಿದೆ. ಬಿಜೆಪಿಯು ಜಾಗವನ್ನು ಅತಿಕ್ರಮಣ ಮಾಡಿಕೊಂಡಿದೆ ಎನ್ನುವ ಆರೋಪವಿದೆ. ಇದಕ್ಕೂ ಮುನ್ನ ವಾರದೊಳಗೆ ಜಿಲ್ಲಾಡಳಿತ ಹಾಗೂ ಪಾಲಿಕೆ ಆಡಳಿತ ಬಿಜೆಪಿ ಶಿಬಿರ ಕಚೇರಿಯನ್ನು ತೆರವು ಮಾಡಲು ಎರಡು ಬಾರಿ ತೆರಳಿದ್ದರೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುರೇಂದ್ರ ಸಿಂಗ್ ವಿರೋಧದಿಂದ ಬರಿಗೈಯಲ್ಲಿ ವಾಪಸಾಗಬೇಕಾಯಿತು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷರು ಕಚೇರಿಯನ್ನು ನೆಲಸಮಗೊಳಿಸಿದ ಆಡಳಿತದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಾತನಾಡಿ, ಎಸ್‌ಪಿ ಸರ್ಕಾರದ ಅವಧಿಯಲ್ಲಿಯೂ ಕಚೇರಿಯನ್ನು ಕೆಡವಲಾಗಿತ್ತು, ನಾನು ಧರಣಿ ಕುಳಿತಾಗ ಸಮಾಜವಾದಿ ಪಕ್ಷದ ಸರ್ಕಾರ ವಾರದಲ್ಲಿ ಕಚೇರಿಯನ್ನು ಪುನರ್ ನಿರ್ಮಿಸಿದೆ ಎಂದಿದ್ದಾರೆ.
ಜಾಗ ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದೆ ಎಂಬ ಕಾರಣಕ್ಕೆ ಪಾಲಿಕೆ ತಂಡ ಅದನ್ನು ಬುಲ್ಡೋಜರ್ ಕ್ರಮ ಕೈಗೊಂಡಿದೆ.
ಮುನ್ಸಿಪಲ್ ಕೌನ್ಸಿಲ್, ಜಿಲ್ಲಾಡಳಿತ ಮತ್ತು ಪೊಲೀಸ್ ಜಂಟಿ ತಂಡದ ಮೇಲ್ವಿಚಾರಣೆಯಲ್ಲಿ ಬಲ್ಲಿಯಾದಲ್ಲಿ ಅತಿಕ್ರಮಣವನ್ನು ತೆಗೆದುಹಾಕುವ ಅಭಿಯಾನವನ್ನು ನಡೆಸಲಾಯಿತು. ಈ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸ್ ಪಡೆಗಳನ್ನೂ ನಿಯೋಜಿಸಲಾಗಿತ್ತು.
ಅಧಿಕೃತ ಮೂಲಗಳ ಪ್ರಕಾರ, ಅತಿಕ್ರಮಣ ತೊಡೆದುಹಾಕಲು ಅಭಿಯಾನದ ತಂಡವು ಚಿಟ್ಟು ಪಾಂಡೆ ಪ್ರದೇಶದ ಇಂದಿರಾ ಮಾರುಕಟ್ಟೆಯಲ್ಲಿರುವ ಬಿಜೆಪಿ ಕ್ಯಾಂಪ್ ಕಚೇರಿಗೆ ತಲುಪಿ ಬುಲ್ಡೋಜರ್‌ನೊಂದಿಗೆ ನೆಲಸಮ ಮಾಡಲು ಪ್ರಾರಂಭಿಸಿತು. ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ರಾಜೇಶ್ ಕುಮಾರ್ ಬುಲ್ಡೋಜರ್ ಕ್ರಮವನ್ನು ಖಚಿತಪಡಿಸಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ