ಕಿತ್ತಾಟದಿಂದ ರದ್ದಾಯ್ತು ಟಾಸ್ಕ್; ದೊಡ್ಡ ಪರಿಣಾಮ ಎದುರಿಸಿದ ಮನೆ ಮಂದಿ
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಅಗ್ರೆಶನ್ ಜೋರಾಗುತ್ತಿದೆ. ಸ್ಪರ್ಧಿಗಳ ಮಧ್ಯೆ ಕಿತ್ತಾಟಗಳು ಮಿತಿ ಮೀರುತ್ತಿವೆ. ಈಗ ದೊಡ್ಮನೆಯಲ್ಲಿ ಕಿತ್ತಾಟ ಒಂದು ನಡೆದಿದೆ. ಆಡುವಾಗ ನಡೆದ ಈ ಕಿತ್ತಾಟದಿಂದ ದೊಡ್ಮನೆಯ ಟಾಸ್ಕ್ ರದ್ದಾಗಿ ಹೋಗಿದೆ. ಇದಕ್ಕೆ ಬಿಗ್ ಬಾಸ್ ಶಿಕ್ಷೆ ಕೂಡ ಘೋಷಣೆ ಮಾಡಿದ್ದಾರೆ.
‘ಬಿಗ್ ಬಾಸ್’ನಲ್ಲಿ ಟಾಸ್ಕ್ಗಳನ್ನು ರಚನೆ ಮಾಡುವಾಗ ಅದಕ್ಕೆ ತಂಡದವರು ಸಾಕಷ್ಟು ಶ್ರಮ ಹಾಕಿರುತ್ತಾರೆ. ಗೇಮ್ ರಚನೆಗೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಇದಕ್ಕೆ ಗೌರವ ಕೊಡದೇ ಇದ್ದಾಗ ಬಿಗ್ ಬಾಸ್ ಕೋಪಗೊಳ್ಳುತ್ತಾರೆ. ಈಗಲೂ ಹಾಗೆಯೇ ಆಗಿದೆ. ದೊಡ್ಮನೆಯಲ್ಲಿ ಆಡುವಾಗ ನಡೆದ ಈ ಕಿತ್ತಾಟದಿಂದ ದೊಡ್ಮನೆಯ ಟಾಸ್ಕ್ ರದ್ದಾಗಿ ಹೋಗಿದೆ. ಇದರಿಂದ ಎಲ್ಲರನ್ನೂ ನಾಮಿನೇಟ್ ಮಾಡುವ ಅಧಿಕಾರವನ್ನು ಬಿಗ್ ಬಾಸ್ ತೆಗೆದುಕೊಂಡರೇ ಎನ್ನುವ ಪ್ರಶ್ನೆ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Dec 18, 2024 08:02 AM
Latest Videos