ಬಸನಗೌಡ ಪಾಟೀಲ್ ಮಾಡುವ ಆರೋಪಗಳಿಗೆ ಮುಗುಳ್ನಗುವೇ ವಿಜಯೇಂದ್ರರ ಉತ್ತರವೇ?

|

Updated on: Dec 12, 2023 | 11:52 AM

ಪಕ್ಷದ ಸದಸ್ಯನೇ ತನ್ನ ವಿರುದ್ಧ ಗಂಭೀರವಾದ ಆರೋಪಗಳನ್ನು ಮಾಡುತ್ತಿದ್ದರೆ ಶಿಸ್ತುಕ್ರಮ ತೆಗೆದುಕೊಳ್ಳುವ ಅಧಿಕಾರ ಬಿಜೆಪಿ ರಾಜ್ಯಾಧ್ಯಕ್ಷನಿಗೆ ಇರೋದಿಲ್ಲವೇ? ಬಸನಗೌಡ ಪಾಟೀಲ್ ಯತ್ನಾಳ್ ಮಾಡುವ ಆರೋಪಗಳಿಗೆ ವಿಜಯೇಂದ್ರ ಮುಗುಳ್ನಕ್ಕು ಮುಂದೆ ಸಾಗಿದರೆ, ಬಿಎಸ್ ಯಡಿಯೂರಪ್ಪ ಮೌನಕ್ಕೆ ಶರಣಾಗುತ್ತಾರೆ. ಕನ್ನಡಿಗರಿಗೆ ಇದೊಂಥರ ಕಾಮಿಡಿ ಶೋ ಹಾಗೆ ಕಾಣುತ್ತಿದೆ.

ಬೆಳಗಾವಿ: ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಎಡೆಬಿಡದೆ ತಮ್ಮ ವಿರುದ್ಧ ಮಾಡುತ್ತಿರುವ ಅರೋಪಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಉತ್ತರ ಇದು-ದೇವರು ಅವರಿಗೆ ಒಳ್ಳೇದು ಮಾಡಲಿ. ಇಂದು ಕೂಡಲಸಂಗಮದ ಮಠಾಧೀಶ ಬಸವ ಜಯ ಮೃತ್ಯುಂಜಯ ಸ್ವಾಮಿ (Basava Jaya Mrithyunjaya Swamiji) ಅವರೊಂದಿಗೆ ಮಾತಾಡುವಾಗ ಬಸನಗೌಡ ಯತ್ನಾಳ್ ಅವರು ವಿಜಯೇಂದ್ರ ವಿರುದ್ಧ ಮಾಡಿದ ಹಲವು ಆರೋಪಗಳಲ್ಲಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರನ್ನು ಸೋಲಿಲು ಹಣ ಕಳಿಸಿದ್ದರೆಂಬ ಆರೋಪವೂ ಒಂದು. ಅದು ನಿಜವಾ? ಅಂತ ವಿಜಯೇಂದ್ರರನ್ನು ಇಂದು ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳು ಕೇಳಿದಾಗ, ದಿನಕ್ಕೊಂದು ಹೇಳಿಕೆ ನೀಡುವ ಅಭ್ಯಾಸ ತನಗಿಲ್ಲ ದೇವರು ಅವರಿಗೆ ಒಳ್ಳೇದು ಮಾಡಲಿ ಅಂತ ಎರಡೂ ಕೈ ಜೋಡಿಸಿದರು. ಬೊಮ್ಮಾಯಿ ಅವರನ್ನು ಸೋಲಿಸಲು ನೀವು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೀರಂತೆ ಅಂತ ಪತ್ರಕರ್ತರು ಕೇಳಿದರೆ, ವಿಜಯೇಂದ್ರ ಮುಗುಳುನಗುತ್ತಾ ಅಲ್ಲಿಂದ ಹೊರಡುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ