ಮಂಡ್ಯ: ಹೊಳೆ ಆಂಜನೇಯ ಸ್ವಾಮಿ ಎದುರು ದೀಪ ಹಚ್ಚಿದ ವಸಿಷ್ಠ ಸಿಂಹ-ಹರಿಪ್ರಿಯಾ ದಂಪತಿ

ಮಂಡ್ಯ: ಹೊಳೆ ಆಂಜನೇಯ ಸ್ವಾಮಿ ಎದುರು ದೀಪ ಹಚ್ಚಿದ ವಸಿಷ್ಠ ಸಿಂಹ-ಹರಿಪ್ರಿಯಾ ದಂಪತಿ

ರಾಜೇಶ್ ದುಗ್ಗುಮನೆ
|

Updated on: Dec 12, 2023 | 10:20 AM

ಡಿಸೆಂಬರ್ 11 ಕಾರ್ತಿಕ ಮಾಸದ ಕಡೆಯ ಸೋಮವಾರ ಆಗಿತ್ತು. ಈ ಪ್ರಯುಕ್ತ ನಡೆದ ದೀಪೋತ್ಸವದ ಅಂಗವಾಗಿ ವಸಿಷ್ಠ ಸಿಂಹ-ಹರಿಪ್ರಿಯಾ ಇಲ್ಲಿಗೆ ಭೇಟಿ ನೀಡಿದರು.

ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ (Hariprriya) ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದು, ಸುತ್ತಾಟ ನಡೆಸುವ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಈಗ ಈ ದಂಪತಿ ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿರುವ ಹೊಳೆ ಆಂಜನೇಯ ಸ್ವಾಮಿ ದೇವರ ದರ್ಶನ ಪಡೆದಿದ್ದಾರೆ. ಡಿಸೆಂಬರ್ 11 ಕಾರ್ತಿಕ ಮಾಸದ ಕಡೆಯ ಸೋಮವಾರ ಆಗಿತ್ತು. ಈ ಪ್ರಯುಕ್ತ ನಡೆದ ದೀಪೋತ್ಸವದ ಅಂಗವಾಗಿ ವಸಿಷ್ಠ ಸಿಂಹ-ಹರಿಪ್ರಿಯಾ ಇಲ್ಲಿಗೆ ಭೇಟಿ ನೀಡಿದರು. ಈ ವೇಳೆ ದೀಪ ಹಚ್ಚಿ ದಂಪತಿ ಆಂಜನೇಯಸ್ವಾಮಿ‌ ದರ್ಶನ ಪಡೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ