ಕೋಲಾರ: ಪೊಲೀಸ್ ಇಲಾಖೆಗೆ ನೀವು ಅನ್ ಫಿಟ್, ಪಿಎಸ್ಐ ಮೇಲೆ ನಿವೃತ್ತ ಎಎಸ್ಐನ ದರ್ಪ
ಪೊಲೀಸ್ ಇಲಾಖೆಗೆ ನೀವು ಅನ್ ಫಿಟ್, ಕೆಲಸ ಬಿಟ್ಟು ಮನಗೆ ಹೋಗಿ ಎಂದು ಗೌನಪಲ್ಲಿ ಪಿಎಸ್ಐ ರಾಮು ಮೇಲೆ ನಿವೃತ್ತ ಎಎಸ್ಐ ರಾಜಗೋಪಾಲರೆಡ್ಡಿ ಮತ್ತು ಅವರ ಮಗ ಹರೀಶ್ ಅವರು ದರ್ಪ ತೋರಿದ್ದಾರೆ.
ಕೋಲಾರ, ಡಿಸೆಂಬರ್ 11: ಪಿಎಸ್ಐ (PSI) ಮೇಲೆ ನಿವೃತ್ತ ಎಎಸ್ಐ (ASI) ದರ್ಪ ತೋರಿರುವ ಘಟನೆ ಶ್ರೀನಿವಾಸಪುರ (Srinivaspur) ತಾಲೂಕಿನ ಬೀಮಗಾನಪಲ್ಲಿ ಕ್ರಾಸ್ ಬಳಿ ನಡೆದಿದೆ. ಡಿಸೆಂಬರ್ 7 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಾಹನಗಳನ್ನು ತಡೆದು ತಪಾಸಣೆ ಮಾಡುತ್ತಿದ್ದ ಗೌನಪಲ್ಲಿ ಪಿಎಸ್ಐ ರಾಮು ಮೇಲೆ ನಿವೃತ್ತ ಎಎಸ್ಐ ರಾಜಗೋಪಾಲರೆಡ್ಡಿ ಮತ್ತು ಅವರ ಮಗ ಹರೀಶ್ ಅವರು ದರ್ಪ ತೋರಿದ್ದಾರೆ.
ಪೊಲೀಸ್ ಇಲಾಖೆಗೆ ನೀವು ಅನ್ ಫಿಟ್, ಕೆಲಸ ಬಿಟ್ಟು ಮನಗೆ ಹೋಗುವಂತೆ ಅವಾಜ್ ಹಾಕಿದ್ದಾರೆ. ದರ್ಪ ತೋರಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಿಎಸ್ಐ ರಾಮು ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮತ್ತು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ನಿವೃತ್ತ ರಾಜಗೋಪಾಲರೆಡ್ಡಿ ಮತ್ತು ಹರೀಶ್ ರೆಡ್ಡಿ ಮೇಲೆ ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಹಳೆಯ ಪ್ರಕಣದವೊಂದರಲ್ಲಿ ತಮಗೆ ಅನುಕೂಲ ಮಾಡಿಲ್ಲವೆಂದು ನಿವೃತ್ತ ರಾಜಗೋಪಾಲರೆಡ್ಡಿ ಪಿಎಸ್ಐ ರಾಮು ಅವರ ಮೇಲೆ ದರ್ಪ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.