ರಾಮನಗರದಲ್ಲಿ ಬಿಜೆಪಿ ಒಕ್ಕಲಿಗ ನಾಯಕರ ಘರ್ಜನೆ: ವಿಜಯ ಸಂಕಲ್ಪ ರಥಯಾತ್ರೆ ಮೂಲಕ ಶಕ್ತಿ ಪ್ರದರ್ಶನ
ರಾಜ್ಯ ಬಿಜೆಪಿ ನಾಯಕರು ವಿಜಯ ಸಂಕಲ್ಪ ರಥಯಾತ್ರೆ ಪ್ರಾರಂಭಿಸಿದ್ದು, ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ವಿಜಯ ಸಂಕಲ್ಪ ರಥಯಾತ್ರೆ ಅದ್ಧೂರಿಯಾಗಿ ನಡೆದಿದೆ. ಚನ್ನಪಟ್ಟಣದ ಪ್ರಮುಖ ರಸ್ತೆಗಳಲ್ಲಿ BJP ನಾಯಕರು ರೋಡ್ಶೋ ಮಾಡಿದ್ದಾರೆ.
ರಾಮನಗರ: ರಾಜ್ಯ ಬಿಜೆಪಿ (BJP) ನಾಯಕರು ವಿಜಯ ಸಂಕಲ್ಪ ರಥಯಾತ್ರೆ (Vijaya Sankalpa Rath Yatra) ಪ್ರಾರಂಭಿಸಿದ್ದು, ರಾಮನಗರ ಜಿಲ್ಲೆ (Ramnagar) ಚನ್ನಪಟ್ಟಣದಲ್ಲಿ (Channapattana) ವಿಜಯ ಸಂಕಲ್ಪ ರಥಯಾತ್ರೆ ಅದ್ಧೂರಿಯಾಗಿ ನಡೆದಿದೆ. ಚನ್ನಪಟ್ಟಣದ ಪ್ರಮುಖ ರಸ್ತೆಗಳಲ್ಲಿ BJP ನಾಯಕರು ರೋಡ್ಶೋ ಮಾಡಿದ್ದಾರೆ. ವಿಜಯಸಂಕಲ್ಪ ಯಾತ್ರೆಯಲ್ಲಿ ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ನಳೀನ್ ಕುಮಾರ್ ಕಟೀಲು (Nalin Kumar Kateel) , ಸಚಿವರಾದ ಆರ್.ಅಶೋಕ್ (R Ashok), ಡಾ.ಸಿ.ಎನ್.ಅಶ್ವತ್ಥ್ ನಾರಾಯಣ (Ashwath Narayan), ಮಾಜಿ ಮುಖ್ಯಮಂತ್ರಿ ಸದಾನಂದಗೌಡ, ಎಂಎಲ್ಸಿ ಸಿ.ಪಿ.ಯೋಗೇಶ್ವರ್ ಭಾಗಿಯಾಗಿದ್ದಾರೆ.