Mysuru News: ಎಚ್​ಡಿ ಕೋಟೆ ದಮ್ಮನಕಟ್ಟೆ ಕಾಡಲ್ಲಿ ಕಾಣಿಸ್ತು ಕಪ್ಪು ಚಿರತೆ; ವಿಡಿಯೋ ನೋಡಿ

Updated on: Jun 06, 2023 | 9:39 PM

ಬಹಳ ದಿನಗಳ‌ ನಂತರ ಮೈಸೂರಿನ ಎಚ್​ಡಿ ಕೋಟೆ ತಾಲೂಕಿನ ಸಫಾರಿ ಕೇಂದ್ರ ವ್ಯಾಪ್ತಿಯ ಬಳಿ ಸೋಮವಾರ ಬೆಳಗ್ಗೆ ಕಪ್ಪು ಚಿರತೆ ಕಾಣಿಸಿಕೊಂಡಿದೆ.

ಮೈಸೂರು: ಬಹಳ ದಿನಗಳ‌ ನಂತರ ಮೈಸೂರಿನ ಎಚ್​ಡಿ ಕೋಟೆ ತಾಲೂಕಿನ ಸಫಾರಿ ಕೇಂದ್ರ ವ್ಯಾಪ್ತಿಯ ಬಳಿ ಸೋಮವಾರ ಬೆಳಗ್ಗೆ ಕಪ್ಪು ಚಿರತೆ ಕಾಣಿಸಿಕೊಂಡಿದೆ. ಸಫಾರಿ ವೇಳೆ ಕರಿ ಚಿರತೆ ಕಾಣಿಸಿಕೊಂಡಿದೆ. ಮೈಸೂರಿನ ಜೀವನ್ ಕೃಷ್ಣಪ್ಪ ಅವರ ಕ್ಯಾಮೆರಾದಲ್ಲಿ ಚಿರತೆಯ ವಿಡಿಯೋ ಸೆರೆಯಾಗಿದೆ. ಸುಮಾರು 12 ವರ್ಷ ವಯಸ್ಸಿನ ಈ ಚಿರತೆಯು ಬಿಸಲವಾಡಿ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಡಿಬಿ ಕುಪ್ಪೆ ಭಾಗದಲ್ಲಿ ಎರಡು ತಿಂಗಳ ಹಿಂದೆ ಕಾಣಿಸಿಕೊಂಡಿತ್ತು. ನಂತರ ಕರಿ ಚಿರತೆಯ ಪತ್ತೆ ಇರಲಿಲ್ಲ. ಇದೀಗ ಸಫಾರಿ ವೇಳೆ ಕಪ್ಪು ಚಿರತೆ ಕಾಣಿಸಿಕೊಂಡಿದ್ದರಿಂದ ಪ್ರವಾಸಿಗರು ಸಂತಸಗೊಂಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More