ಪೈಪ್ ಲೈನ್ ಕಾಮಗಾರಿ: ರಸ್ತೆ ಗುಂಡಿಗೆ ಸಿಲುಕಿದ BMTC ಬಸ್, ಸಂಚಾರಕ್ಕೆ ಅಡ್ಡಿ
ಬಸವನಗುಡಿಯ ಕೆಆರ್ ರಸ್ತೆಯಲ್ಲಿ ನಿರ್ಲಕ್ಷ್ಯದ ಪೈಪ್‌ಲೈನ್ ಕಾಮಗಾರಿಯಿಂದಾಗಿ ರಸ್ತೆಯಲ್ಲಿ ಆದ ಒಂದು ಗುಂಡಿಯಲ್ಲಿ ಬಿಎಂಟಿಸಿ ಬಸ್ ಸಿಲುಕಿಕೊಂಡ ಘಟನೆ ನಡೆದಿದೆ. ಪದ್ಮನಾಭನಗರದಿಂದ ಮಾರ್ಕೆಟ್ ಕಡೆಗೆ ತೆರಳುತ್ತಿದ್ದ ಬಸ್, ರಸ್ತೆಯಲ್ಲಿ ಸರಿಯಾಗಿ ಮುಚ್ಚದ ಗುಂಡಿಯಲ್ಲಿ ಸಿಕ್ಕಿಹಾಕಿಕೊಂಡಿತು. ಸಿಬ್ಬಂದಿಯ ಬೇಜವಾಬ್ದಾರಿಯುತ ಕೆಲಸದಿಂದ ಪ್ರಯಾಣಿಕರಿಗೆ ತೊಂದರೆಯಾಯಿತು. ವಿಡಿಯೋ ಇಲ್ಲಿದೆ ನೋಡಿ.
ಬೆಂಗಳೂರು, ಜುಲೈ 13: ಬೆಂಗಳೂರಿನ ಬಸವನಗುಡಿ ಕೆಆರ್ ರಸ್ತೆಯಲ್ಲಿ ಅವೈಜ್ಞಾನಿಕ ಪೈಪ್‌ಲೈನ್ ಕಾಮಗಾರಿಯಿಂದಾಗಿ ರಸ್ತೆ ಮಧ್ಯೆ ಸೃಷ್ಟಿಯಾದ ಗುಂಡಿಯಲ್ಲಿ ಬಿಎಂಟಿಸಿ ಬಸ್ ಸಿಲುಕಿ ಪ್ರಯಾಣಿಕರಿಗೆ ಸಮಸ್ಯೆ ಉಂಟಯಿತು. ಪದ್ಮನಾಭನಗರದಿಂದ ಮಾರ್ಕೆಟ್ ಕಡೆಗೆ ಪ್ರಯಾಣಿಸುತ್ತಿದ್ದ ಬಿಎಂಟಿಸಿ ಬಸ್, ರಸ್ತೆ ಗುಂಡಿಗೆ ಸಿಲುಕಿ ಒಂದು ಬದಿಗೆ ವಾಲಿ ನಿಂತಿತು. ಪೈಪ್‌ಲೈನ್ ಕಾಮಗಾರಿ ಕೈಗೊಂಡಿದ್ದ ಸಿಬ್ಬಂದಿ, ಕೆಲಸ ಮುಗಿದ ನಂತರ ಗುಂಡಿಗಳನ್ನು ಸರಿಯಾಗಿ ಮುಚ್ಚದೆ, ಕೇವಲ ಮಣ್ಣು ಮತ್ತು ಜಲ್ಲಿ ಹಾಕಿ ಹಾಗೆಯೇ ಹೋಗಿದ್ದರು. ಇದರಿಂದಾಗಿ ರಸ್ತೆಯು ವಾಹನ ಸಂಚಾರಕ್ಕೆ ಅಸುರಕ್ಷಿತವಾಗಿ ಪರಿಣಮಿಸಿತ್ತು. ಬಸ್ ಚಾಲಕರು ಮತ್ತು ಸಾರ್ವಜನಿಕರು ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಅಧಿಕಾರಿಗಳ ಬೇಜವಾಬ್ದಾರಿಯನ್ನು ಪ್ರಶ್ನಿಸಿದ್ದಾರೆ.
ಈ ಘಟನೆಯಿಂದಾಗಿ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆಯುಂಟಾಯಿತು. ಪ್ರಯಾಣಿಕರು ಪರದಾಡಬೇಕಾಯಿತು. ನಗರದಲ್ಲಿ ನಡೆಯುವ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಈ ಘಟನೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಸಂಬಂಧಪಟ್ಟ ಇಲಾಖೆಗಳು ತಕ್ಷಣ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
