AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಪ್ರಯಾಣಿಕರೇ ಎಚ್ಚರ! ಬಸ್ಸಿನಲ್ಲಿ ಮೊಬೈಲ್ ಕಳವು ತಡೆಯಲು ಈ ಯುವಕನ ಐಡಿಯಾ ಫಾಲೋ ಮಾಡಿ

ಬೆಂಗಳೂರು ಪ್ರಯಾಣಿಕರೇ ಎಚ್ಚರ! ಬಸ್ಸಿನಲ್ಲಿ ಮೊಬೈಲ್ ಕಳವು ತಡೆಯಲು ಈ ಯುವಕನ ಐಡಿಯಾ ಫಾಲೋ ಮಾಡಿ

ಅಕ್ಷಯ್​ ಪಲ್ಲಮಜಲು​​
|

Updated on: May 15, 2026 | 1:20 PM

Share

ಬೆಂಗಳೂರು ಬಿಎಂಟಿಸಿ ಬಸ್ಸುಗಳಲ್ಲಿ ಮೊಬೈಲ್ ಕಳ್ಳತನ ಹೆಚ್ಚಿದ ಹಿನ್ನೆಲೆಯಲ್ಲಿ, ಒಬ್ಬ ಯುವಕ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾನೆ. ಮೊಬೈಲ್ ಅನ್ನು ಸುರಕ್ಷಿತವಾಗಿಡಲು ಹ್ಯಾಂಡ್‌ಬ್ಯಾಗ್ ಬಳಕೆ, ಬಲವಾದ ಪಾಸ್‌ವರ್ಡ್ ಅಳವಡಿಕೆ, ಮತ್ತು 'Find My Device' ಆನ್ ಮಾಡುವಂತಹ ಪ್ರಮುಖ ಸಲಹೆಗಳನ್ನು ನೀಡಿದ್ದಾನೆ. ಸಣ್ಣ ಎಚ್ಚರಿಕೆಯಿಂದ ದೊಡ್ಡ ನಷ್ಟವನ್ನು ತಪ್ಪಿಸಬಹುದು ಎಂದು ತಿಳಿಸಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಬೆಂಗಳೂರು, ಮೇ.15: ಸಿಲಿಕಾನ್ ಸಿಟಿಯ ಬಿಎಂಟಿಸಿ ಬಸ್ಸುಗಳಲ್ಲಿ ಪ್ರಯಾಣಿಕರ ಮೊಬೈಲ್ ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ, ಯುವಕನೊಬ್ಬ ಸ್ವಯಂಪ್ರೇರಿತನಾಗಿ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಬಸ್ಸಿನ ಒಳಗೆ ಪ್ರಯಾಣಿಕರನ್ನು ಉದ್ದೇಶಿಸಿ ಮಾತನಾಡಿದ ಆತ, ಮೊಬೈಲ್ ರಕ್ಷಿಸಿಕೊಳ್ಳಲು ಅನುಸರಿಸಬೇಕಾದ ಪ್ರಮುಖ ಸುರಕ್ಷತಾ ಕ್ರಮಗಳನ್ನು ಹಂಚಿಕೊಂಡಿದ್ದಾರೆ. ಮೊಬೈಲ್ ಫೋನ್ ಅನ್ನು ಡ್ರೆಸ್‌ನ ಜೇಬಿನಲ್ಲಿ ಇಡುವ ಬದಲು, ಹ್ಯಾಂಡ್‌ಬ್ಯಾಗ್‌ನಲ್ಲಿ ಸುರಕ್ಷಿತವಾಗಿ ಇರಿಸಿ. ಬ್ಯಾಗ್‌ನ ಜಿಪ್ ಲಾಕ್ ಬಗ್ಗೆ ಗಮನವಿರಲಿ. ಬಸ್ಸಿನಲ್ಲಿ ಪ್ರಯಾಣಿಸುವಾಗ ಅಥವಾ ಹತ್ತುವಾಗ ಮೊಬೈಲ್ ಅನ್ನು ಕೈಯಲ್ಲೇ ಗಟ್ಟಿಯಾಗಿ ಹಿಡಿದುಕೊಳ್ಳಿ. ಪ್ಯಾಂಟ್‌ನ ಹಿಂಬದಿಯ ಜೇಬಿನಲ್ಲಿ ಫೋನ್ ಇಡುವುದು ಅಪಾಯಕಾರಿ. ನಿಮ್ಮ ಫೋನ್‌ಗೆ ಕಡ್ಡಾಯವಾಗಿ ಸ್ಟ್ರಾಂಗ್ ಪಾಸ್‌ವರ್ಡ್, ಪಿನ್ (PIN) ಅಥವಾ ಪ್ಯಾಟರ್ನ್ ಲಾಕ್ ಅಳವಡಿಸಿ. ಇದು ಕಳ್ಳರಿಗೆ ಫೋನ್ ಬಳಸಲು ಅಡ್ಡಿಯಾಗುತ್ತದೆ. ನಿಮ್ಮ ಮಕ್ಕಳು ಅಥವಾ ಮನೆಯವರ ಸಹಾಯದಿಂದ ಫೋನ್‌ಗೆ ಸೆಕ್ಯೂರ್ ಲಾಕ್ ಮಾಡಿಸಿಕೊಳ್ಳಿ. ಪಾಸ್‌ವರ್ಡ್ ಅನ್ನು ಯಾರಿಗೂ ತಿಳಿಸಬೇಡಿ. ಫೋನಿನಲ್ಲಿ ಯಾವಾಗಲೂ Gmail Location Tracking (Find My Device) ಆನ್ ಇರಲಿ. ಒಂದು ವೇಳೆ ಫೋನ್ ಕಳ್ಳತನವಾದರೆ ಅದನ್ನು ಪತ್ತೆಹಚ್ಚಲು ಇದು ಸಹಕಾರಿಯಾಗುತ್ತದೆ. ಕಿಕ್ಕಿರಿದು ತುಂಬಿರುವ ಬಸ್ಸುಗಳಲ್ಲಿ ಸಣ್ಣ ಎಚ್ಚರಿಕೆ ಕೂಡ ನಿಮ್ಮನ್ನು ದೊಡ್ಡ ನಷ್ಟದಿಂದ ರಕ್ಷಿಸುತ್ತದೆ. ಈ ಜವಾಬ್ದಾರಿಯುತ ಯುವಕನ ಸಾಮಾಜಿಕ ಕಾಳಜಿಗೆ ಪ್ರಯಾಣಿಕರು ‘ಹ್ಯಾಟ್ಸ್ ಆಫ್’ ಎಂದಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Akshay Pallamajalu
Akshay Pallamajalu

ನನ್ನ ಹೆಸರು ಅಕ್ಷಯ್ ಕುಮಾರ್ ಪಲ್ಲಮಜಲು, ನನ್ನ ಊರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕು, ಡಿಜಿಟಲ್​ ವಿಭಾಗದಲ್ಲಿ 3 ವರ್ಷಗಳ ಅನುಭವ, ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದು, ಟಿವಿ9ನಲ್ಲೂ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದೇನೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಲೇಖನಗಳನ್ನು ಬರೆಯುತ್ತೇನೆ.

Read More