ಬೆಂಗಳೂರು: ಆಟೋ ಡ್ರೈವರ್ ಮೇಲೆ ಬಸ್ ಹರಿಸಲು ಮುಂದಾದ ಬಿಎಂಟಿಸಿ ಚಾಲಕ, ವಿಡಿಯೋ ವೈರಲ್

Updated on: Jul 18, 2025 | 7:05 AM

ಆಟೋ ಚಾಲಕ ಹಾಗೂ ಬಿಎಂಟಿಸಿ ಬಸ್ ಚಾಲಕನ ನಡುವೆ ಜಳ ನಡೆದು ಕೊನೆಗೆ ಬಿಎಂಟಿಸಿ ಬಸ್ ಚಾಲಕ ಆಟೋ ಚಾಲಕನ ಮೇಲೆಯೇ ಬಸ್ ಹರಿಸಲು ಮುಂದಾದ ಘಟನೆ ಬೆಂಗಳೂರಿನ ಬ್ರಿಗೇಡ್ ರೋಡ್‌ ಬಳಿ ಗುರುವಾರ ನಡೆದಿದೆ. ಘಟನೆಯ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿಸೆರೆಯಾಗಿದ್ದು, ಈಗ ವೈರಲ್ ಆಗುತ್ತಿದೆ. ವಿಡಿಯೋ ಇಲ್ಲಿದೆ.

ಬೆಂಗಳೂರು, ಜುಲೈ 18: ಬೆಂಗಳೂರು ನಗರದಲ್ಲಿ ಇತ್ತೀಚೆಗೆ ರೋಡ್​​ರೇಜ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆಟೋ ಚಾಲಕನೊಬ್ಬನ ಮೇಲೆಯೇ ಬಸ್ ಹರಿಸಲು ಬಿಎಂಟಿಸಿ ಚಾಲಕ ಮುಂದಾದ ಘಟನೆ ನಡೆದಿದೆ. ಅಶೋಕನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಬ್ರಿಗೇಡ್ ರೋಡ್‌ ಬಳಿ‌ ಗುರುವಾರ ಮಧ್ಯಾಹ್ನ ಘಟನೆ ನಡೆದಿದೆ. ಆಟೋ‌ ಚಾಲಕ ಮತ್ತು ಬಿಎಂಟಿಸಿ ಬಸ್‌ ಚಾಲಕನ ನಡುವೆ ಗಲಾಟೆಯಾಗಿದೆ. ನಂತರ ಆಟೋ ಚಾಲಕ ಬಿಎಂಟಿಸಿ ಬಸ್‌ಗೆ ಅಡ್ಡಲಾಗಿ ನಿಂತಿದ್ದಾನೆ. ಈ ವೇಳೆ, ಆತನ ಮೇಲೆ ಬಸ್ ಹರಿಸಲು ಬಿಎಂಟಿಸಿ‌ ಚಾಲಕ ಮುಂದಾಗಿದ್ದಾನೆ. ಬಸ್ ಸುಮಾರು 30 ಮೀಟರ್‌ನಷ್ಟು ದೂರ ಆಟೋ ಚಾಲಕನನ್ನು ತಳ್ಳಿಕೊಂಡು ಹೋಗಿದೆ. ಬಸ್ ಹಾಗೂ ಆಟೋ ಚಾಲಕನ ಗಲಾಟೆ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಈಗ ವೈರಲ್ ಆಗುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

 

Published on: Jul 18, 2025 06:56 AM
Loading...
Unable to load recommendations.
Follow Us
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More