ಮರವೊಂದು ಮನೆ ಮೇಲೆ ಬಿದ್ದು ಹೆತ್ತಮ್ಮನನ್ನು ಕಳೆದುಕೊಂಡಿರುವ ಹದಿಹರೆಯದ ಬಾಲಕನ ದುಃಖ ಹೇಳತೀರದು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 10, 2022 | 3:07 PM

ಇವನು ಮತ್ತೊಂದು ರೂಮಿನಲ್ಲಿ ನೋಟ್ಸ್ ಬರೆಯುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಹುಡುಗ ಪಡುತ್ತಿರುವ ದುಃಖ, ಸಂಕಟ, ನೋವು ಯಾತನೆ ನೋಡಲಾಗದು ಮಾರಾಯ್ರೇ.

ಚಿಕ್ಕಮಗಳೂರು:  ಈ ಬಾಲಕನ ದುಃಖಕ್ಕೆ ಸೀಮೆಯೇ ಇಲ್ಲ ಮಾರಾಯ್ರೇ. ಕಳೆದ ರಾತ್ರಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ತಗಲೂರು (Tagaluru) ಗ್ರಾಮದಲ್ಲಿದ್ದ ಅವನ ಮನೆಯ ಮೇಲೆ ಮರವೊಂದು ಬಿದ್ದು ಒಳಗೆ ಕೋಣೆಯೊಂದರಲ್ಲಿ ಮಲಗಿದ್ದ ಅವನ ತಾಯಿ ಸರಿತಾ (Sarita) ಮತ್ತು ಇನ್ನೊಬ್ಬ ಮಹಿಳೆ ಚಂದ್ರಮ್ಮ (Chandramma) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವನು ಮತ್ತೊಂದು ರೂಮಿನಲ್ಲಿ ನೋಟ್ಸ್ ಬರೆಯುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಹುಡುಗ ಪಡುತ್ತಿರುವ ದುಃಖ, ಸಂಕಟ, ನೋವು ಯಾತನೆ ನೋಡಲಾಗದು ಮಾರಾಯ್ರೇ.