ಒಂದು ನಾಯಿಯಿಂದ ತಪ್ಪಿಸಿಕೊಳ್ಳಲು ಗೇಟ್ ಹಾರಿದವನಿಗೆ ಕಾದಿತ್ತು ಶಾಕ್!

Updated on: Feb 05, 2026 | 10:49 PM

ರಸ್ತೆಯಲ್ಲಿ ಹೋಗುತ್ತಿದ್ದ ಯುವಕನೊಬ್ಬನನ್ನು ಬೀದಿ ನಾಯಿ ಅಟ್ಟಿಸಿಕೊಂಡು ಬಂದಿತ್ತು. ಹೀಗಾಗಿ, ಆ ನಾಯಿಯಿಂದ ತನ್ನನ್ನು ಕಾಪಾಡಿಕೊಳ್ಳಲು ಬೇರೆ ದಾರಿ ಕಾಣದೆ ಆತ ಪಕ್ಕದಲ್ಲೇ ಇದ್ದ ಮನೆಯೊಂದರ ಗೇಟ್ ಹಾರಿ ಒಳಗೆ ಹೋಗಿದ್ದ. ಆದರೆ, ಆತನ ಅದೃಷ್ಟ ಕೆಟ್ಟಿತ್ತು. ಆ ಮನೆಯಲ್ಲಿ ದೈತ್ಯಾಕಾರದ ಮೂರು ನಾಯಿಗಳು ಕಾವಲು ಕಾಯುತ್ತಿದ್ದವು. ಆ ನಾಯಿಗಳು ಗೇಟ್ ಹಾರಿ ಬಂದವನ ಮೇಲೆ ದಾಳಿ ಮಾಡಲು ಬಂದವು. ಈ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನವದೆಹಲಿ, ಫೆಬ್ರವರಿ 5: ಸೋಷಿಯಲ್ ಮೀಡಿಯಾದಲ್ಲಿ ದಿನವೂ ಅನೇಕ ವಿಡಿಯೋಗಳು, ರೀಲ್ಸ್​ಗಳು ವೈರಲ್ (Viral Video) ಆಗುತ್ತಲೇ ಇರುತ್ತವೆ. ಭಾರತದ ಕೆಲವು ಕಡೆ ಬೀದಿ ನಾಯಿಗಳ ಕಾಟ ಎಷ್ಟರ ಮಟ್ಟಿಗೆ ಇದೆ ಎಂದು ಹೊಸತಾಗಿ ಏನೂ ಹೇಳಬೇಕಾಗಿಲ್ಲ. ರಸ್ತೆಯಲ್ಲಿ ಹೋಗುತ್ತಿದ್ದ ಯುವಕನೊಬ್ಬನನ್ನು ಬೀದಿ ನಾಯಿ ಅಟ್ಟಿಸಿಕೊಂಡು ಬಂದಿತ್ತು. ಹೀಗಾಗಿ, ಆ ನಾಯಿಯಿಂದ ತನ್ನನ್ನು ಕಾಪಾಡಿಕೊಳ್ಳಲು ಬೇರೆ ದಾರಿ ಕಾಣದೆ ಆತ ಪಕ್ಕದಲ್ಲೇ ಇದ್ದ ಮನೆಯೊಂದರ ಗೇಟ್ ಹಾರಿ ಒಳಗೆ ಹೋಗಿದ್ದ. ಆದರೆ, ಆತನ ಅದೃಷ್ಟ ಕೆಟ್ಟಿತ್ತು. ಆ ಮನೆಯಲ್ಲಿ ದೈತ್ಯಾಕಾರದ ಮೂರು ನಾಯಿಗಳು ಕಾವಲು ಕಾಯುತ್ತಿದ್ದವು. ಆ ನಾಯಿಗಳು ಗೇಟ್ ಹಾರಿ ಬಂದವನ ಮೇಲೆ ದಾಳಿ ಮಾಡಲು ಬಂದವು. ಈ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More