ಬೆಂಗಳೂರು ಮೆಟ್ರೋ ರೈಲಿನಲ್ಲಿ ಬಾಲಕನ ಉಯ್ಯಾಲೆ ಆಟ; ವಿಡಿಯೋ ವೈರಲ್

Edited By:

Updated on: Oct 18, 2021 | 12:31 PM

ಕೆಲ ಬಾಲಕರು ಎಂಜಿ ರೋಟ್ನಿಂದ ಬಯ್ಯಪ್ಪನಹಳ್ಳಿ ವರೆಗೆ ಪ್ರಯಾಣ ಮಾಡಿದ್ರು. ಈ ವೇಳೆ ಬಾಲಕನೊಬ್ಬ ಹೀಗೆ ಆಟವಾಡಿದ್ದು, ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಮೆಟ್ರೋ ರೈಲಿನಲ್ಲಿ ಬಾಲಕನೊಬ್ಬ ಉಯ್ಯಾಲೆ ಆಟವಾಡಿದ್ದಾನೆ. ಬಾಲಕ ಉಯ್ಯಾಲೆ ಆಡಿದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಬಾಲಕ ಮೆಟ್ರೋ ರೈಲಿನಲ್ಲಿ ಕಂಬಿಯನ್ನ ಹಿಡಿದು ಉಯ್ಯಾಲೆ ಆಡಿದ್ದಾನೆ. ನಿನ್ನೆ (ಅ.17) ರಾತ್ರಿ ಹತ್ತು ಗಂಟೆ ಸುಮಾರಿಗೆ ವಿಡಿಯೋ ರೆಕಾರ್ಡ್ ಆಗಿದೆ ಎಂದು ಹೇಳಲಾಗುತ್ತಿದೆ. ಮೆಟ್ರೋ ರೈಲಿನಲ್ಲಿದ್ದ ಪ್ರಯಾಣಿಕರು ಬಾಲಕನ ಆಟವನ್ನು ನೋಡುತ್ತಿದ್ದರು. ನೇರಳೆ ಮಾರ್ಗದಲ್ಲಿ ಪ್ರಯಾಣ ಮಾಡಿದ ಬಾಲಕ, ರೈಲಿನಲ್ಲಿ ಕಂಬಿ ಹಿಡಿದು ನೇತಾಡಿದ್ದಾನೆ. ಕೆಲ ಬಾಲಕರು ಎಂಜಿ ರೂಟ್​ನಿಂದ ಬಯ್ಯಪ್ಪನಹಳ್ಳಿ ವರೆಗೆ ಪ್ರಯಾಣ ಮಾಡಿದ್ರು. ಈ ವೇಳೆ ಬಾಲಕನೊಬ್ಬ ಹೀಗೆ ಆಟವಾಡಿದ್ದು, ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.