ಬ್ರೆಜಿಲ್ ಸಾವೋ ಪಾಲೋನಲ್ಲಿ ಬಾಯ್​ಫ್ರೆಂಡ್ ಜೊತೆ ಜಗಳ ಮಾಡಿದ ಮಹಿಳೆ ಅವನ ಬೆನ್ನಿಗೆ ಗುಂಡಿಕ್ಕಿ ಪರಾರಿಯಾದಳು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 09, 2022 | 8:15 AM

ನಂತರ ಅವನು ಒಳಬಂದು ಪ್ರಾಯಶಃ ಕನ್ನಡಿಯೊಂದರ ಮುಂದೆ ನಿಲ್ಲುತ್ತಾನೆ. ಆಗಲೇ ಅರೋಪಿಯು ದಢಾರನೆ ಬಾಗಿಲು ತೆರೆದ ಬಳಿಕ ಎರಡೂ ಕೈಗಳಲ್ಲಿ ಗನ್ ಹಿಡಿದು ಒಳನುಗ್ಗುವುದು ಕಾಣುತ್ತದೆ. ನಂತರ ಅವನ ಬೆನ್ನನ್ನು ಗುರಿಯಾಗಿಸಿ ಗುಂಡು ಹಾರಿಸುತ್ತಾಳೆ.

ಬ್ರೆಜಿಲ್ ಸಾವೋ ಪಾಲೋನಲ್ಲಿ ಬಾಯ್​ಫ್ರೆಂಡ್ ಜೊತೆ ಜಗಳ ಮಾಡಿದ ಮಹಿಳೆ ಅವನ ಬೆನ್ನಿಗೆ ಗುಂಡಿಕ್ಕಿ ಪರಾರಿಯಾದಳು!
ಪ್ರಿಯಕರನ ಬೆನ್ನಿಗೆ ಗುಂಡಿಕ್ಕುತ್ತಿರುವ ಪ್ರೇಯಸಿ!
Follow us on

ಮಹಿಳೆಯೊಬ್ಬಳು ತನ್ನ ಬಾಯ್ ಫ್ರೆಂಡ್ (Boyfriend) ಬೆನ್ನಿಗೆ ಗುಂಡು ಹಾರಿಸಿ ಕೊಲ್ಲುವ ಪ್ರಯತ್ನ ಮಾಡಿದ ಆಘಾತಕಾರಿ ಪ್ರಕರಣ ಬ್ರೆಜಿಲ್ ನಡೆದಿದೆ. ಡಯಾನಾ ರೋಸ ಡ ಸಿಲ್ವಾ ಲುಜ್ (Diana Rosa da Silva Luz) ಹೆಸರಿನ 36-ವರ್ಷ-ವಯಸ್ಸಿನ ಮಹಿಳೆಯನ್ನು ಬ್ರೆಜಿಲ್ ನ ಸಾವೋ ಪಾಲೋ (Sao Paulo) ನಗರದಲ್ಲಿರುವ ಅವಳ ಬಾಯ್ ಫ್ರೆಂಡ್ ಮನೆಯಲ್ಲೇ ಅವನನ್ನು ಗುಂಡಿಕ್ಕಿ ಕೊಲ್ಲುವ ಪ್ರಯತ್ನ ನಡೆಸಿದ ಆರೋಪದಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕರಣ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ಅಪರಾಧ ನಡೆದ ಸ್ಥಳದಿಂದ ಪೊಲೀಸರು ಒಂದು ಗನ್ ಮತ್ತೊಂದು ಚಾಕುವನ್ನು ವಶಪಡಿಸಿಕೊಂಡಿದ್ದಾರೆ. ಡಯಾನಾ, 42-ವರ್ಷ-ವಯಸ್ಸಿನ ತನ್ನ ಪ್ರಿಯಕರನೊಂದಿಗೆ ಜಗಳವಾಡಿದ ನಂತರ ಗುಂಡು ಹಾರಿಸಿ ಕೊಲ್ಲುವ ಪ್ರಯತ್ನ ಮಾಡಿದಳೆಂದು ಪೊಲೀಸರು ಹೇಳಿದ್ದಾರೆ.

ಸಂತ್ರಸ್ತ ಆಸ್ಪತ್ರೆಯೊಂದರಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ.

ಆರೋಪಿಯು ತನ್ನ ಗೆಳೆಯನ ಮನೆಯಿಂದ ಹೊರಬಿದ್ದ ಮೇಲೆ ಪಕ್ಕದಲ್ಲಿರುವ ಆಟದ ಮೈದಾನದಲ್ಲಿ ನಡೆಯುತ್ತಾ ಹೋಗಿ ನಂತರ ಕಣ್ಮರೆಯಾಗುವುದು ಅವನ ಮನೆಯ ಪ್ರವೇಶದ್ವಾರದ ಬಳಿ ಅಳವಡಿಸಿರುವ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿದೆ.

ಹಾಗೆಯೇ, ಮನೆಯಲ್ಲಿರುವ ಸಿಸಿಟಿವಿ ಕೆಮೆರಾದಲ್ಲಿ ಆರೋಪಿಯು ಅವನ ಮನೆಯ ಹೊರಭಾಗದಲ್ಲಿ ಕುಳಿತಿರುವುದು ಅವನು ಪಠಾರನೆ ಬಾಗಿಲು ಮುಚ್ಚುವುದು ಸೆರೆಯಾಗಿದೆ.

ನಂತರ ಅವನು ಒಳಬಂದು ಪ್ರಾಯಶಃ ಕನ್ನಡಿಯೊಂದರ ಮುಂದೆ ನಿಲ್ಲುತ್ತಾನೆ. ಆಗಲೇ ಅರೋಪಿಯು ದಢಾರನೆ ಬಾಗಿಲು ತೆರೆದ ಬಳಿಕ ಎರಡೂ ಕೈಗಳಲ್ಲಿ ಗನ್ ಹಿಡಿದು ಒಳನುಗ್ಗುವುದು ಕಾಣುತ್ತದೆ. ನಂತರ ಅವನ ಬೆನ್ನನ್ನು ಗುರಿಯಾಗಿಸಿ ಗುಂಡು ಹಾರಿಸುತ್ತಾಳೆ.

ಸಂತ್ರಸ್ತ ತನ್ನ ಹಿಂದಿರುವ ಟೀಪಾಯ್ ಮೇಲೆ ಹಿಂಭಾಗವಾಗಿ ಬೀಳುತ್ತಾನೆ. ಆರೋಪಿಯು ಅವನ ಹತ್ತಿರದಲ್ಲಿ ನಿಂತು ಗನ್ನಿನ ಟ್ರಿಗ್ಗರ್ ಅದುಮುತ್ತಲೇ ಹೋಗುತ್ತಾಳೆ. ಆದರೆ ಇನ್ನೊಂದು ಗುಂಡು ಹಾರುವುದಿಲ್ಲ.

ರಕ್ತದ ಮಡುವಿನಲ್ಲಿ ಬಿದ್ದ ಅವನು ಮೇಲೇಳಲು ಪ್ರಯತ್ನಿಸಿ ವಿಫಲನಾಗುತ್ತಾನೆ. ಅರೋಪಿಯು ಮನೆಯಿಂದ ಹೊರಗೆ ಒಳಗೆ ತಿರುಗಾಡಿ ಕೊನೆಗೆ ಅಲ್ಲಿಂದ ಹೊರಬೀಳುತ್ತಾಳೆ. ಅಲ್ಲಿಗೆ ವಿಡಿಯೋ ಕೊನೆಗೊಳ್ಳುತ್ತದೆ.

ಅವನು ಸಹಾಯಕ್ಕಾಗಿ ಯಾಚಿಸುತ್ತಿದ್ದರೂ ಆರೋಪಿ ಅಲ್ಲಿಂದ ಹೋಗಿಬಿಡುತ್ತಾಳೆ ಎಂದು ಪೊಲೀಸರು ಹೇಳಿದ್ದಾರೆ. ನೆರೆಹೊರೆಯರು ಪೊಲೀಸರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ.

ಸ್ಥಳಕ್ಕೆ ಧಾವಿಸಿದ ಪೊಲೀಸರು ಕೂಡಲೇ ಸಂತ್ರಸ್ತನನ್ನು ಸಾವೋ ಪಾಲೋ ನಗರದ ಇತಾಕ್ಕೀರ ಪ್ರದೇಶದಲ್ಲಿರುವ ಸಂಟಾ ಮರ್ಸಿಲಿನಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅವನ ಪ್ರಾಣಕ್ಕೇನೂ ಅಪಾಯವಿಲ್ಲ ಎಂದು ಹೇಳಲಾಗುತ್ತಿದೆ.

ಗುಂಡೇಟಿನಿಂದ ಅಸ್ಪತ್ರೆಗೆ ದಾಖಲಾಗಿರುವ ವ್ಯಕ್ತಿಯ ಪ್ರಾಣಕ್ಕೇನೂ ಅಪಾಯವಿಲ್ಲ, ಅವನ ಆರೋಗ್ಯದ ಸ್ಟೇಟಸ್ ಕುಟುಂಬದ ಸದಸ್ಯರಿಗೆ ತಿಳಿಸಲಾಗುವುದು ಅಸ್ಪತ್ರೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅವನ ಚಿಕಿತ್ಸೆ ಮುಂದುವರಿಯುತ್ತಿರುವಂತೆಯೇ ಆರೋಪಿಗಾಗಿ ಹುಡುಕಾಟ ಜಾರಿಯಲ್ಲಿದೆ.

ಸಾವೊ ಜೋಸ್ ಡೊಸ್ ಕ್ಯಾಂಪೊಸ್ ನಗರದ ಮೂಲಕ ಶ್ವೇತವರ್ಣದ ರಿನಾಲ್ಟ್ ಕ್ಲಿಯೋ ಕಾರಲ್ಲಿ ಹಾದು ಹೋಗುವಾಗ ಅವಳನ್ನು ಕೊನೆಯ ಬಾರಿ ನೋಡಲಾಗಿದೆ. ಆ ಪ್ರಾಂತ್ಯದಿಂದಲೇ ಅವಳು ನಾಪತ್ತೆಯಾಗಿರಬಹುದೆಂದು ಶಂಕಿಸಲಾಗಿದೆ.