ಮೈಸೂರು: ಮದುವೆ ಡ್ರೆಸ್‌ನಲ್ಲಿಯೇ ಬಂದು ಮತದಾನ ಮಾಡಿದ ವಧು-ವರ
ತಾಳಿಕಟ್ಟುತಿದ್ದಂತೆ ವರ ಮತ್ತು ವಧು ಸೀದ ಮಂಟಪದಿಂದ ಕುಟುಂಬ ಸಮೇತ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ. ನೆಪಗಳನ್ನು ಹೇಳಿ ಮತ ಹಾಕದೆ ಇರುವವರಿಗೆ ಮಾದರಿಯಾಗಿದ್ದಾರೆ.
ಇಡೀ ರಾಜ್ಯವೇ ಕುತೂಹಲದಿಂದ ಎದುರು ನೋಡ್ತಿದ್ದ(Karnataka Assembly Elections 2023) ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ಭರ್ಜರಿಯಾಗಿ ಸಾಗುತ್ತಿದೆ. ವಯಸ್ಸಾದವರು, ಮೊದಲ ಬಾರಿಗೆ ಮತ ಹಾಕುತ್ತಿರುವ ಯುವಕ-ಯುವತಿಯರು, ಮಂಗಳಮುಖಿಯರು, ಅಂಗವಿಕಲರು ಉತ್ಸಾಹದಿಂದ ಮತಚಲಾಯಿಸುತ್ತಿದ್ದಾರೆ. ಮತ್ತೊಂದೆಡೆ ಮೈಸೂರಿನಲ್ಲಿ ವರ-ವಧು ಕುಟುಂಬ ಸಮೇತ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ತಾಳಿಕಟ್ಟುತಿದ್ದಂತೆ ವರ ಮತ್ತು ವಧು ಸೀದ ಮಂಟಪದಿಂದ ಕುಟುಂಬ ಸಮೇತ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ. ನೆಪಗಳನ್ನು ಹೇಳಿ ಮತ ಹಾಕದೆ ಇರುವವರಿಗೆ ಮಾದರಿಯಾಗಿದ್ದಾರೆ.
Published on: May 10, 2023 01:24 PM