ಭಯಾನಕ, ಆತಂಕಕಾರಿ: ಚುನಾವಣಾ ಸಭೆಗೆ ತೆರಳುತ್ತಿದ್ದ ಸಚಿವ ಕೆಟಿಆರ್, ವಾಹನದ ಮೇಲಿಂದ ಮುಗ್ಗರಿಸಿಬಿದ್ದರು! ವಿಡಿಯೋ ನೋಡಿ ​

ಭಯಾನಕ, ಆತಂಕಕಾರಿ: ಚುನಾವಣಾ ಸಭೆಗೆ ತೆರಳುತ್ತಿದ್ದ ಸಚಿವ ಕೆಟಿಆರ್, ವಾಹನದ ಮೇಲಿಂದ ಮುಗ್ಗರಿಸಿಬಿದ್ದರು! ವಿಡಿಯೋ ನೋಡಿ ​

ಸಾಧು ಶ್ರೀನಾಥ್​
|

Updated on:Nov 09, 2023 | 4:46 PM

ನಿಜಾಮಾಬಾದಿನ ಅರ್ಮೂರು ಎಂಬಲ್ಲಿ ವಾಹನದ ಮೇಲೆ ನಿಂತು ಸಾಗುತ್ತಿದ್ದ ಕೆಟಿಆರ್​ ಮತ್ತು ಅವರ ತಂಡ ಇದ್ದಕ್ಕಿದ್ದಂತೆ ಮೇಲಿಂದ ಮುಗ್ಗರಿಸಿಬಿದ್ದಿದ್ದಾರೆ. ವಿಡಿಯೋ ನೋಡಿ ​

ಹೈದರಾಬಾದ್, ನವೆಂಬರ್​ 9: ತೆಲಂಗಾಣ ಅಸೆಂಬ್ಲಿ ಚುನಾವಣೆಗಳು ಸಮೀಪಿಸುತ್ತಿದ್ದು, ಚುನಾವಣಾ ಪ್ರಚಾರ ಬಿರುಸುಗೊಂಡಿದೆ. ಈ ಮಧ್ಯೆ ಭಯಾನಕ, ಆತಂಕಕಾರಿ ಘಟನೆಯೊಂದು ನಡೆದಿದೆ. ಸಚಿವ ಕೆಟಿ ರಾಮರಾವ್​ ಅವರು ತಮ್ಮ ತಂಡದೊಂದಿಗೆ ಮೆಟಡಾರ್​ ವಾಹನದ ಮೇಲೆ ಹತ್ತಿ ಸಭೆಯಲ್ಲಿ ಪಾಲ್ಗೊಳ್ಳಲು ವೇಗವಾಗಿ ಚಲಿಸುತ್ತಿದ್ದರು.

ಆ ವೇಳೆ ಆಕಸ್ಮಿಕ ಘಟನೆಯೊಂದು ನಡೆದಿದ್ದು, ನಿಜಾಮಾಬಾದಿನ ಅರ್ಮೂರು ಎಂಬಲ್ಲಿ ವಾಹನದ ಮೇಲೆ ನಿಂತು ಸಾಗುತ್ತಿದ್ದ ಕೆಟಿಆರ್​ ಮತ್ತು ಅವರ ತಂಡ ಇದ್ದಕ್ಕಿದ್ದಂತೆ ಮೇಲಿಂದ ಮುಗ್ಗರಿಸಿಬಿದ್ದಿದ್ದಾರೆ.  ಜೀವನ್ ರೆಡ್ಡಿ ಅವರು ನಾಮಿನೇಷನ್ ಪತ್ರ ಸಲ್ಲಿಸಲು ತೆರಳುತ್ತಿದ್ದಾಗ ಪ್ರಚಾರ ವಾಹನದ ಚಾಲಕ ಸಡನ್​ ಆಗಿ ಬ್ರೇಕ್ ಹಾಕಿದಾಗ ಈ ಆಕಸ್ಮಿಕ ಘಟನೆ ನಡೆದಿದೆ. ​ ವಾಹನದ ಮುಂದೆ ಜನಸಂದಣಿ ಕಂಡುಬಂದಾಗ ಜನರನ್ನು ತಪ್ಪಿಸಲು ಚಾಲಕ ಸಡನ್​ ಆಗಿ ಬ್ರೇಕ್ ಹಾಕಿದ್ದ. ವಿಡಿಯೋ ನೋಡಿ

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Nov 09, 2023 04:26 PM