ಕಷ್ಟದ ಟಾಸ್ಕ್ ನಿಭಾಯಿಸಲು ಒದ್ದಾಟ; ಕೈ-ಕೈ ಮಿಲಾಯಿಸುವ ಹಂತಕ್ಕೆ ಬಂದ ಬಿಗ್ ಬಾಸ್ ಸ್ಪರ್ಧಿಗಳು
‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋನ ಸ್ಪರ್ಧಿಗಳಿಗೆ ಒಂದು ಕಠಿಣ ಟಾಸ್ಕ್ ನೀಡಲಾಗಿದೆ. ಅದನ್ನು ನಿಭಾಯಿಸುವಾಗ ಒಬ್ಬರು ಇನ್ನೊಬ್ಬರನ್ನು ತಳ್ಳಾಡಿದ್ದಾರೆ. ಎರಡು ಗುಂಪುಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದೆ. ವಿನಯ್ ಗೌಡ ಮತ್ತು ಕಾರ್ತಿಕ್ ಮಹೇಶ್ ಅವರು ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದಾರೆ.
ಈ ಬಾರಿಯ ಬಿಗ್ ಬಾಸ್ನಲ್ಲಿ ಗುಂಪುಗಾರಿಕೆ ಜೋರಾಗಿದೆ. ಇಡೀ ದೊಡ್ಮನೆ ಎರಡು ಗುಂಪಾಗಿ ಒಡೆದುಹೋಗಿದೆ. ಆ ಗುಂಪುಗಳಲ್ಲಿ ಇರುವ ಸ್ಪರ್ಧಿಗಳ ಮನಸ್ಸು ಕೂಡ ಒಡೆದಿದೆ. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುತ್ತಿಲ್ಲ. ಟಾಸ್ಕ್ ವಿಚಾರದಲ್ಲಂತೂ ಬಿಗ್ ಬಾಸ್ (Bigg Boss Kannada) ಮನೆ ಒಂದು ರೀತಿಯ ರಣಾಂಗಣ ಆಗುತ್ತಿದೆ. ವಿನಯ್ ಗೌಡ (Vinay Gowda) ಅವರು ತಮ್ಮ ರಫ್ ಆ್ಯಂಡ್ ಟಫ್ ವರ್ತನೆಯಿಂದಾಗಿ ಅನೇಕರ ವಿರೋಧ ಕಟ್ಟಿಕೊಂಡಿದ್ದಾರೆ. ನಟಿ ಸಂಗೀತಾ ಶೃಂಗೇರಿ ಅವರು ಹಲವು ಹಂತಗಳಲ್ಲಿ ವಿನಯ್ಗೆ ತಿರುಗೇಟ ನೀಡುತ್ತಿದ್ದಾರೆ. ಈಗ ಬಿಗ್ ಬಾಸ್ ಸ್ಪರ್ಧಿಗಳಿಗೆ ಒಂದು ಕಠಿಣ ಟಾಸ್ಕ್ ನೀಡಲಾಗಿದೆ. ಅದನ್ನು ನಿಭಾಯಿಸುವಾಗ ಒಬ್ಬರು ಇನ್ನೊಬ್ಬರನ್ನು ತಳ್ಳಾಡಿದ್ದಾರೆ. ಎರಡು ಗುಂಪುಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದೆ. ವಿನಯ್ ಗೌಡ ಮತ್ತು ಕಾರ್ತಿಕ್ ಮಹೇಶ್ (Karthik Mahesh) ಅವರು ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದಾರೆ. ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ನವೆಂಬರ್ 9ರಂದು ರಾತ್ರಿ 9.30ಕ್ಕೆ ಈ ಸಂಚಿಕೆ ಪ್ರಸಾರ ಆಗಲಿದೆ. ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ದಿನದ 24 ಗಂಟೆಯೂ ಉಚಿತವಾಗಿ ಬಿಗ್ ಬಾಸ್ ಕಾರ್ಯಕ್ರಮವನ್ನು ಲೈವ್ ಆಗಿ ನೋಡಬಹುದು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.