CM questions former CM: ಪ್ರತಿಭಟನೆ ನಡೆಸುವ ನೈತಿಕ ಹಕ್ಕು ಬಿಎಸ್ ಯಡಿಯೂರಪ್ಪನವರಿಗಿದೆಯಾ? ಸಿದ್ದರಾಮಯ್ಯ, ಮುಖ್ಯಮಂತ್ರಿ

|

Updated on: Jun 26, 2023 | 5:39 PM

ಅವನು ಕೈ ಹಿಂತೆಗೆದೆದರೂ ಸಭಾಧ್ಯಕ್ಷರನ್ನು ತಳ್ಳುತ್ತಾ ಕಾಟ ಕೊಡುತ್ತಾನೆ. ಅವನ ಕಿರಿಕಿರಿ ತಾಳಲಾರದೆ ಸಭಾಧ್ಯಕ್ಷರು ಅಲ್ಲಿಂದ ಹೊರಟು ಬಿಡುತ್ತಾರೆ!

ಬೆಂಗಳೂರು: ಹೊಸದಾಗಿ ಆಯ್ಕೆಯಾದ ಶಾಸಕರಿಗೆ ನೆಲಮಂಗಲದ ಕ್ಷೇಮವನದಲ್ಲಿ ಆಯೋಜಿಸಲಾಗಿರುವ ತರಬೇತಿ ಶಿಬಿರವನ್ನು ಉದ್ಘಾಟಿಸಿದ ಬಳಿಕ ಶಿಬಿರದಲ್ಲಿದ್ದ ಶಾಸಕರಿಗೆ ಸಂವಿಧಾನವನ್ನು ಓದಿ ಅರ್ಥಮಾಡಿಕೊಳ್ಳಿ ಎಂದು ಉಪದೇಶಿಸಿ ಹೊರಬಂದ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು (Siddaramaiah) ಇಂಗ್ಲಿಷ್ ಮಾಧ್ಯಮಗಳ ಪ್ರತಿನಿಧಿಗಳು ಸುತ್ತುವರೆದು ಪ್ರಶ್ನೆ ಕೇಳಿದರು. ಶಿಬಿರವನ್ನು ಆಯೋಜಿಸಿದ್ದು ತಾನಲ್ಲ, ವಿಧಾನ ಸಭೆಯ ಅಧ್ಯಕ್ಷರಾದ ಯುಟಿ ಖಾದರ್ (UT Khader) ಎಂದು ಮುಖ್ಯಮಂತ್ರಿ ಹೇಳಿದರು. ಬಿಎಸ್ ಯಡಿಯೂರಪ್ಪ (BS Yediyurappa) ಅವರು ಧರಣಿ ನಡೆಸುವ ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳಿದಾಗ ಅವರಿಗೆ ಪ್ರತಿಭಟನೆಗೆ ಕೂರಲು ನೈತಿಕ ಹಕ್ಕಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು. ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತಾಡುವಾಗ ಅವರ ಬಲಭಾಗದಲ್ಲಿ ಬಿಳಿ ಗಡ್ಡ ಮತ್ತು ಬಿಳಿ ಮೀಸೆಯ ಒಬ್ಬ ವ್ಯಕ್ತಿಯ ವರ್ತನೆಯನ್ನು ಗಮನಿಸಿ. ಅವನಿಗೆ ಕೆಮೆರಾದ ಫ್ರೇಮ್ ನಲ್ಲಿ ಬರುವ ಆತುರ. ಅದಕ್ಕಾಗಿ ಅವನು ಸಭಾಧ್ಯಕ್ಷ ಖಾದರ್ ಅವರ ಹೆಗಲ ಮೇಲೆ ಕೈಹಾಕುವ ಪ್ರಯತ್ನವನ್ನೂ ಮಾಡುತ್ತಾನೆ. ಸಭಾಧ್ಯಕ್ಷರೊಬ್ಬರ ಸ್ಥಾನಮಾನ ಏನು ಎಂಬ ಅರಿವಿಲ್ಲದೆ ಅವಿವೇಕಿ ಅವನು ಅಂದರೆ ತಪ್ಪಾಗಲಾರದು. ಅವನು ಕೈ ಹಿಂತೆಗೆದೆದರೂ ಸಭಾಧ್ಯಕ್ಷರನ್ನು ತಳ್ಳುತ್ತಾ ಕಾಟ ಕೊಡುತ್ತಾನೆ. ಅವನ ಕಿರಿಕಿರಿ ತಾಳಲಾರದೆ ಸಭಾಧ್ಯಕ್ಷರು ಅಲ್ಲಿಂದ ಹೊರಟು ಬಿಡುತ್ತಾರೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

.

Follow us on