AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Siddaramaiah: ನೂತನ ಶಾಸಕರ ತರಬೇತಿ ಶಿಬಿರದಲ್ಲಿ ಸತ್ಕಾರವನ್ನು ನಯವಾಗಿ ತಿರಸ್ಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ!

Siddaramaiah: ನೂತನ ಶಾಸಕರ ತರಬೇತಿ ಶಿಬಿರದಲ್ಲಿ ಸತ್ಕಾರವನ್ನು ನಯವಾಗಿ ತಿರಸ್ಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ!

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 26, 2023 | 3:32 PM

ಇದು ಒಳ್ಳೆಯ ಸಂಪ್ರದಾಯ, ಗಣ್ಯರು ಸತ್ಕರಿಸಿಕೊಳ್ಳುವ ಅವಶ್ಯಕತೆ ಇರೋದಿಲ್ಲ ಅದರಿಂದ ಸಮಯ ಮತ್ತು ಹಣ ಎರಡೂ ಹಾಳು.  

ಬೆಂಗಳೂರು: ಸಭೆ ಸಮಾರಂಭಗಳಲ್ಲಿ ನನಗೆ ಸನ್ಮಾನಗಳು ಬೇಡ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅಧಿಕಾರವಹಿಸಿಕೊಂಡ ನಂತರ ಹೇಳಿದ್ದರು ಮತ್ತು ಅದರಂತೆ ನಡೆದುಕೊಳ್ಳುತ್ತಿರುವುದು ಸತ್ಯ. 16 ನೇ ವಿಧಾನ ಸಭೆಗೆ (16th Assembly) ಆಯ್ಕೆಯಾಗಿರುವ ನೂತನ ಶಾಸಕರಿಗೆ ಇಂದಿನಿಂದ 3 ದಿನಗಳ ಕಾಲ ತರಬೇತಿ ಶಿಬಿರವನ್ನು ನೆಲಮಂಗಲ ಹತ್ತಿರ ಧರ್ಮಸ್ಥಳದ ಆಸ್ತಿಯಾಗಿರುವ ಕ್ಷೇಮವನದಲ್ಲಿ ಆಯೋಜಿಲಾಗಿದ್ದು ಕಾರ್ಯಕ್ರಮವನ್ನು ಸಿದ್ದರಾಮಯ್ಯ ಉದ್ಘಾಟಿಸಿದರು. ಅದಕ್ಕೆ ಮೊದಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಧಾನ ಸಭಾ ಸ್ಪೀಕರ್ ಯುಟಿ ಖಾದರ್ (UT Khader), ಮುಖ್ಯಮಂತ್ರಿಯವರನ್ನು ಸನ್ಮಾನಿಸಲು ಮುಂದಾದಾಗ ಸತ್ಕಾರವನ್ನು ನಯವಾಗಿ ತಿರಸ್ಕರಿಸಿದರು. ಇದು ಒಳ್ಳೆಯ ಸಂಪ್ರದಾಯ, ಗಣ್ಯರು ಸತ್ಕರಿಸಿಕೊಳ್ಳುವ ಅವಶ್ಯಕತೆ ಇರೋದಿಲ್ಲ ಅದರಿಂದ ಸಮಯ ಮತ್ತು ಹಣ ಎರಡೂ ಹಾಳು.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ